/newsfirstlive-kannada/media/media_files/2025/10/29/mp_farmer-2025-10-29-10-08-24.jpg)
ಭೋಪಾಲ್: ರೈತನ ಮೇಲೆ ರಾಡ್​ನಿಂದ ಹಲ್ಲೆ ನಡೆಸಿ ಜೀವ ತೆಗೆದಿದ್ದಲ್ಲದೇ, ಮಗಳ ಮೇಲೆ ಮೃಗದಂತೆ ಎರಗಿದ್ದ ಬಿಜೆಪಿ ಕಾರ್ಯಕರ್ತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಘಟನೆಯು ಮಧ್ಯಪ್ರದೇಶದ ಗುಣ ಜಿಲ್ಲೆಯ ಗಣೇಶಪುರ ಗ್ರಾಮದಲ್ಲಿ ನಡೆದಿದೆ.
ಗಣೇಶಪುರ ಗ್ರಾಮದ ರೈತ ರಾಮಸ್ವರೂಪ ಧಾಕಡ್ ಹಲ್ಲೆಯಿಂದ ಜೀವ ಕಳೆದುಕೊಂಡವರು. ಬಿಜೆಪಿ ಕಾರ್ಯಕರ್ತ ಮಹೇಂದ್ರ ನಗರನನ್ನು ಪೊಲೀಸರು ಬಂಧಿಸಿದ್ದಾರೆ. ರೈತ ರಾಮಸ್ವರೂಪ ಹಾಗೂ ಮಹೇಂದ್ರ ನಗರನ ಸಂಬಂಧಿಯಾದ ಕನ್ನಯ್ಯ ಎನ್ನುವರ ನಡುವೆ ಜಮೀನಿನ ತಕರಾರು ಇತ್ತು. ಹೀಗಾಗಿ ಇತ್ಯರ್ಥ ಮಾಡಿಕೊಡುವಂತೆ ಕನ್ನಯ್ಯ, ಮಹೇಂದ್ರ ನಗರನ ಬಳಿ ಹೇಳಿದ್ದರು ಎಂದು ಹೇಳಲಾಗಿದೆ.
ಆದರೆ ಮೃತ ರೈತ ಹಾಗೂ ಆತನ ಪತ್ನಿ ಹೊಲದಲ್ಲಿ ಇರಬೇಕಾದರೆ 10 ರಿಂದ 15 ಜನರ ಗ್ಯಾಂಗ್​ನೊಂದಿಗೆ ಆರೋಪಿ ಮಹೇಂದ್ರ ರಾಡ್​, ಮಾರಕಾಸ್ತ್ರಗಳನ್ನು ತೆಗೆದುಕೊಂಡು ಕಾರಲ್ಲಿ ಬಂದಿದ್ದಾರೆ. ಬಂದವರೇ ರೈತನ ಬಳಿ ಏನೂ ಮಾತನಾಡದೇ ಹಲ್ಲೆಗೆ ಮುಂದಾಗಿದ್ದಾರೆ. ಮಾರಕಾಸ್ತ್ರ, ರಾಡ್​ನಿಂದ ಮನಬಂದಂತೆ ರೈತನಿಗೆ, ಆತನ ಪತ್ನಿಗೆ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
/filters:format(webp)/newsfirstlive-kannada/media/media_files/2025/10/29/mp_farmer_1-2025-10-29-10-08-36.jpg)
ಈ ವೇಳೆ ಬಿಡಿಸಲು ಬಂದ ಇಬ್ಬರು ಪುತ್ರಿಯರ ಮೇಲೂ ಹಲ್ಲೆ ಮಾಡಿ, ಅವರನ್ನ ನೆಲಕ್ಕೆ ಕೆಡವಿ ಎದೆ ಮೇಲೆ ಕುಳಿತು, ಬಟ್ಟೆಗಳನ್ನು ಹರಿದು ದೌರ್ಜನ್ಯಕ್ಕೆ ಮುಂದಾಗಿದ್ದರು ಎನ್ನಲಾಗಿದೆ. ಸ್ಥಳೀಯರು ಹೇಳುವ ಪ್ರಕಾರ, ಗ್ಯಾಂಗ್ ಹಲ್ಲೆಗೆ ಬಂದಾಗ ಗನ್​ನಿಂದ ಗುಂಡುಗಳನ್ನು ಹಾರಿಸಿದರು. ಹೀಗಾಗಿ ರೈತನ ಕುಟುಂಬದ ನೆರವಿಗೆ ಯಾರು ಹೋಗಲಿಲ್ಲ ಎಂದಿದ್ದಾರೆ.
ಭಯಾನಕವಾಗಿ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ರೈತ ಮೃತಪಟ್ಟಿದ್ದು ಈ ಸಂಬಂಧ ಒಟ್ಟು 14 ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ಆರೋಪಿ ಮಹೇಂದ್ರನನ್ನು ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಉಳಿದ 10 ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಇನ್ನು ಬಿಜೆಪಿ ಕಾರ್ಯಕರ್ತ ಮಹೇಂದ್ರನೇ ಮುಖ್ಯ ಆರೋಪಿ ಎಂದು ತಿಳಿಯುತ್ತಿದ್ದಂತೆ ಮಧ್ಯಪ್ರದೇಶ ಬಿಜೆಪಿ ಮುಖ್ಯಸ್ಥ ಹೇಮಂತ್ ಖಂಡೇಲ್ವಾಲ್ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us