ಮಾರ್ಗ ಮಧ್ಯೆ ಟ್ರ್ಯಾಕ್ ಮೇಲೆ ಕೆಟ್ಟು ನಿಂತ ಮೋನೋ ರೈಲು.. 500ಕ್ಕೂ ಹೆಚ್ಚು ಪ್ರಯಾಣಿಕರು ಜಸ್ಟ್​ ಮಿಸ್​..!

ಉತ್ತರ ಭಾರತದ ರಾಜ್ಯಗಳಲ್ಲೂ ಮೇಘರಾಜನದ್ದೇ ಕಾರುಬಾರು. ವಾಣಿಜ್ಯ ರಾಜಧಾನಿ ಮುಂಬೈ ಅಕ್ಷರಶಃ ನಡುಗಿದೆ. ದಿಲ್ಲಿ ದಂಗುಬಡಿದಿದ್ದು ಹಿಮಾಚಲ ಪ್ರದೇಶದಲ್ಲಿ ಅವಾಂತರಗಳ ಲೋಕವೇ ಸೃಷ್ಟಿಯಾಗಿದೆ. ಮುಂಬೈನಲ್ಲಿ ಆಗಿರೋದು ಶತಮಾನದ ಮಳೆ.

author-image
Veenashree Gangani
mumbai rain(2)
Advertisment

ಉತ್ತರ ಭಾರತದ ರಾಜ್ಯಗಳಲ್ಲೂ ಮೇಘರಾಜನದ್ದೇ ಕಾರುಬಾರು. ವಾಣಿಜ್ಯ ರಾಜಧಾನಿ ಮುಂಬೈ ಅಕ್ಷರಶಃ ನಡುಗಿದೆ. ದಿಲ್ಲಿ ದಂಗುಬಡಿದಿದ್ದು ಹಿಮಾಚಲ ಪ್ರದೇಶದಲ್ಲಿ ಅವಾಂತರಗಳ ಲೋಕವೇ ಸೃಷ್ಟಿಯಾಗಿದೆ. ಮುಂಬೈನಲ್ಲಿ ಆಗಿರೋದು ಶತಮಾನದ ಮಳೆ. 100 ವರ್ಷಗಳ ಮಳೆಯನ್ನೇ ಬ್ರೇಕ್ ಮಾಡಿ ವರುಣ ಚೆಲ್ಲಾಟವಾಡಿದ್ದಾನೆ.

ಇದನ್ನೂ ಓದಿ:ಶಿವಮೊಗ್ಗದ ರಿಪ್ಪನ್ ಪೇಟೆಯಲ್ಲಿ ಸುಜಾತ, ಅನನ್ಯಾ ಭಟ್ ಕುಟುಂಬದ ಬಗ್ಗೆ ಎಸ್‌ಐಟಿ ತನಿಖೆ, ಸಿಕ್ಕ ಮಾಹಿತಿ ಏನು ಗೊತ್ತಾ?

ಮೂರು ದಿನಗಳ ಮಳೆ ಮುಂಬೈ ಮಹಾನಗರವನ್ನ ಮುಳುಗಿಸಿದೆ. ತಗ್ಗುಪ್ರದೇಶಗಳು ಮುಳುಗಿದ್ದು ವಾಹನ ಸವಾರರಿಗೆ ತೆವಳುವ ಸಂಕಷ್ಟ ಎದುರಾಗಿದೆ. ಇನ್ನು, ರಸ್ತೆ ಮೇಲೆ ಹರಿಯುತ್ತಿರುವ ಹೊಳೆಯಲ್ಲಿ ಕೆಟ್ಟು ನಿಂತ ವಾಹನಗಳನ್ನು ತಳ್ಳು ಗೋವಿಂದ ಎನ್ನುವಂತಾಗಿದೆ. ಮಕ್ಕಳು ಶಾಲೆಗೆ ಹೋಗೋದೂ ದುರ್ಬರವಾಗಿದೆ. ಅಂಡರ್ ​​ಪಾಸ್​ಗಳು ಜಲದಿಗ್ಬಂಧನಕ್ಕೊಳಪಟ್ಟಿವೆ. ಮನೆಗಳು, ಕಟ್ಟಡಗಳು ಮುಳುಗಿವೆ. ತಗ್ಗುಪ್ರದೇಶಗಳು ಜಲಪಾತಾಳ ಸೇರಿವೆ.. ಜನಜೀವನ ಥಂಡಾ ಹೊಡೆದಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ.

ಇನ್ನೂ, ಮುಂಬೈನಲ್ಲಿ ಭಾರಿ ಮಳೆಗೆ ಮೋನೋ ರೈಲು ಸಿಲುಕಿಕೊಂಡಿದೆ. ಎರಡು ನಿಲ್ದಾಣಗಳ ಮಧ್ಯೆ ಮುಂದೆ ಹೋಗಲಾಗದೇ ಮೋನೋ ರೈಲು ಮಧ್ಯಕ್ಕೆ ಸ್ಥಗಿತಗೊಂಡಿದೆ. ಮೋನೋ ರೈಲಿನಲ್ಲಿ 500ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು. ಇದಾದ ಬಳಿಕ ಅಗ್ನಿಶಾಮಕ ದಳ ಮತ್ತು ರಕ್ಷಣಾ ಅಧಿಕಾರಿಗಳು ಕ್ರೇನ್ ಬಳಸಿ ರೈಲಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆಗೆ ಮಾಡಲಾಗಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದೇನು..?  

‘‘ಕೆಲವು ತಾಂತ್ರಿಕ ಕಾರಣಗಳಿಂದ, ಚೆಂಬೂರು ಮತ್ತು ಭಕ್ತಿ ಪಾರ್ಕ್ ನಡುವೆ ಮೋನೋರೈಲು ಸಿಲುಕಿಕೊಂಡಿದೆ. ಎಂಎಂಆರ್‌ಡಿಎ, ಅಗ್ನಿಶಾಮಕ ದಳ ಮತ್ತು ಪುರಸಭೆ, ಎಲ್ಲಾ ಸಂಸ್ಥೆಗಳು ಸ್ಥಳಕ್ಕೆ ತಲುಪಿವೆ. ಎಲ್ಲಾ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದ್ದರಿಂದ, ಯಾರೂ ಚಿಂತಿಸಬಾರದು ಅಥವಾ ಭಯಪಡಬಾರದು. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುವುದು. ಎಲ್ಲರೂ ತಾಳ್ಮೆಯಿಂದಿರಿ ಎಂದು ನಾನು ವಿನಂತಿಸುತ್ತೇನೆ. ನಾನು ಎಂಎಂಆರ್‌ಡಿಎ ಆಯುಕ್ತರು, ಪುರಸಭೆ ಆಯುಕ್ತರು, ಪೊಲೀಸರು ಮತ್ತು ಎಲ್ಲಾ ಸಂಬಂಧಿತ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಈ ಘಟನೆ ಏಕೆ ಸಂಭವಿಸಿತು ಎಂಬುದರ ಕುರಿತು ವಿಚಾರಣೆ ನಡೆಸಲಾಗುವುದು’’ ಎಂದು ಫಡ್ನವಿಸ್ ಟ್ವೀಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

MUMBAI RAIN
Advertisment