/newsfirstlive-kannada/media/media_files/2025/09/03/pm_modi-2-2025-09-03-08-53-49.jpg)
ಪಾಟ್ನಾ: ಆರ್​ಜೆಡಿ ಹಾಗೂ ಕಾಂಗ್ರೆಸ್​ ವೇದಿಕೆಯಿಂದ ನನ್ನ ತಾಯಿಯನ್ನು ನಿಂದಿಸಲಾಯಿತು. ಇದು ಕೇವಲ ನನ್ನ ತಾಯಿ ಮಾತ್ರವಲ್ಲ, ಇಡೀ ದೇಶದ ತಾಯಂದಿರನ್ನು ಅಪಮಾನ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಅವರು ಆರೋಪ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರು ಬಿಹಾರ ರಾಜ್ಯ ಜೀವಿಕ್​ ನಿಧಿ ಸಾಖ್ ಸಹಕಾರಿ ಸಂಘ ಲಿಮಿಟೆಡ್​ ಉದ್ಘಾಟನೆ ಮಾಡಿದರು. ಬಳಿಕ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನನ್ನ ತಾಯಿ ದೇಶ ಸೇವೆ ಮಾಡು ಎಂದು ಆಶೀರ್ವಾದ ಮಾಡಿದ್ದಾಳೆ. ಪ್ರತಿ ತಾಯಿ ತನ್ನ ಮಗ, ತನ್ನ ಸೇವೆ ಮಾಡಲಿ ಎಂದು ಬಯಸುತ್ತಾಳೆ. ಅದರಂತೆ ದೇಶದ ತಾಯಂದಿರ ಸೇವೆ ಮಾಡು ಎಂದು ನನ್ನ ತಾಯಿ ಕಿವಿ ಮಾತು ಹೇಳಿದ್ದಳು. ಈಗ ನನ್ನ ತಾಯಿ ನನ್ನ ಜೊತೆ ಇಲ್ಲ, ನಮ್ಮನ್ನು ಬಿಟ್ಟು ಹೋಗಿದ್ದಾರೆ. ಆದರೆ ಆರ್​​ಜೆಡಿ-ಕಾಂಗ್ರೆಸ್​ ವೇದಿಕೆಯಲ್ಲಿ ನನ್ನ ತಾಯಿಯನ್ನು ನಿಂದಿಸಲಾಯಿತು. ಇದು ತುಂಬಾ ಕಷ್ಟ, ದುಃಖ ಕೊಡುತ್ತದೆ ಎಂದು ಹೇಳಿದ್ದಾರೆ.
ತಾಯಿ ಎಂದರೆ ನಮ್ಮ ಸಂಸಾರ, ಪ್ರಪಂಚ. ತಾಯಿ ನಮ್ಮ ಸ್ವಾಭಿಮಾನಿ, ಆತ್ಮಗೌರವ ಆಗಿರುತ್ತಾಳೆ. ಸಮೃದ್ಧವಾದ ಸಂಸ್ಕೃತಿ ಹೊಂದಿರುವ ಬಿಹಾರದಲ್ಲಿ ಕೆಲವು ದಿನಗಳ ಹಿಂದೆ ನಡೆದಂತಹದ್ದನ್ನು ನಾನು ಯಾವಾತ್ತು ಕೂಡ ಕಲ್ಪನೆ ಕೂಡ ಮಾಡಿರಲಿಲ್ಲ. ಬಿಹಾರದ ಯಾವೊಬ್ಬ ತಾಯಿ, ತಂಗಿಯರಿಗೆ, ದೇಶದ ಜನರಿಗೆ ಈ ಕಲ್ಪನೆ ಬಂದಿರಲಿಲ್ಲ. ಆದರೆ ಬಿಹಾರದಲ್ಲಿ ಆರ್​​ಜೆಡಿ- ಕಾಂಗ್ರೆಸ್​ ವತಿಯಿಂದ ನನ್ನ ತಾಯಿಯನ್ನು ನಿಂದಿಸಲಾಯಿತು ಎಂದು ಪ್ರಧಾನಿ ಮೋದಿಯವರು ಆರೋಪ ಮಾಡಿದ್ದಾರೆ.
ಈ ನಿಂದನೆ ಕೇವಲ ನನ್ನ ತಾಯಿಯನ್ನು ಅಪಮಾನ ಮಾಡಿದಂತೆ ಅಲ್ಲ. ಇಡೀ ದೇಶದ ತಾಯಿ, ಅಕ್ಕ, ತಂಗಿ, ಮಗಳಿಗೆ ಮಾಡಿದಂತ ಅಪಮಾನ ಆಗಿದೆ. ಕಾಂಗ್ರೆಸ್​-ಆರ್​​ಜೆಡಿ ಹೇಳಿದ್ದು ಬಿಹಾರದ ಪತ್ರಿ ಮಹಿಳೆಯರಿಗೆ, ಪುರುಷರಿಗೆ ಬೇಸರ ಆಗಿದೆ. ನಾನು ನಿಮ್ಮ ಮಗನಿದ್ದೇನೆ. ಇಷ್ಟೊಂದು ತಾಯಂದಿರ, ಸಹೋದರಿಯರ ನಮ್ಮ ಮುಂದೆ ಇದ್ದಾರೆ. ಇವತ್ತು ನನ್ನ ಮನಸನ್ನು, ನನ್ನ ದುಃಖವನ್ನು ನಿಮ್ಮ ಮುಂದೆ ಹೇಳಿದ್ದೇನೆ. ಇದಕ್ಕೆ ತಾಯಂದಿರ ಆಶೀರ್ವಾದ ಬೇಕು ಅಂತ ಪ್ರಧಾನಿ ಮೋದಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ