/newsfirstlive-kannada/media/media_files/2025/10/11/bihar_elections-2025-10-11-08-54-56.jpg)
ಪಾಟ್ನಾ: ಬಿಹಾರದ ವಿಧಾನಸಭೆ ಚುನಾವಣೆಗೆ ಮೊನ್ನೆ ಮೊನ್ನೆ ಅಷ್ಟೇ ದಿನಾಂಕ ಘೋಷಣೆ ಮಾಡಲಾಗಿದ್ದು ಇದರ ಬೆನ್ನಲ್ಲೇ ನ್ಯಾಷನಲ್ ಡೆಮಾಕ್ರಟಿಕ್​ ಅಲೈನ್ಸ್​ (ಎನ್​ಡಿಎ) ಸೀಟು ಹಂಚಿಕೆಯೂ ಫೈನಲ್ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಯಾವುದೇ ಪಕ್ಷ ಅಥವಾ ರಾಜಕೀಯ ನಾಯಕರು ಅಧಿಕೃತವಾಗಿ ಮಾಹಿತಿ ನೀಡಿಲ್ಲ.
ಸಿಎಂ ನಿತೀಶ್​ ಕುಮಾರ್ ಅವರ ಜನತಾ ದಳ ಯುನಿಟೆಡ್​ (ಜೆಡಿಯು), ಬಿಜೆಪಿ ಹಾಗೂ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ ಸೀಟು ಹಂಚಿಕೆ ಮಾಡಿಕೊಂಡಿವೆ. ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 243 ಕ್ಷೇತ್ರಗಳಿದ್ದು ಇದರಲ್ಲಿ ಇದರಲ್ಲಿ 240 ಕ್ಷೇತ್ರಗಳ ಕುರಿತು ಮಾತುಕತೆ ಆಗಿದೆ. ಉಳಿದ ಮೂರು ಸ್ಥಾನ ಬಗ್ಗೆ ಮಾತುಕತೆ ಮುಂದುವರೆದಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಸೀಟ್​ ಹಂಚಿಕೆ ಈ ರೀತಿ ಇದೆ.
- ಜನತಾ ದಳ ಯುನೈಟೆಡ್ (ಜೆಡಿಯು)- 101 ಸ್ಥಾನಗಳು
- ಭಾರತೀಯ ಜನತಾ ಪಕ್ಷ (ಬಿಜೆಪಿ)- 100 ಸೀಟ್​ಗಳು
- ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್)- 26 ಸ್ಥಾನಗಳು
- ಹಿಂದೂಸ್ತಾನಿ ಅವಾಮ್ ಮೋರ್ಚಾ (HAM)- 7 ಕ್ಷೇತ್ರಗಳು
- ರಾಷ್ಟ್ರೀಯ ಲೋಕ ಮೋರ್ಚಾ (RLM)- 6 ಸ್ಥಾನಗಳು
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ GBA ಮೊದಲ ಮಹತ್ವದ ಸಭೆ.. ಚರ್ಚೆ ಆಗಿದ್ದು ಏನೇನು?
/filters:format(webp)/newsfirstlive-kannada/media/media_files/2025/10/11/bihar_election-2025-10-11-08-55-08.jpg)
ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) 40 ರಿಂದ 50 ಸ್ಥಾನಗಳಲ್ಲಿ ಸ್ಪರ್ಧೆ ಮಾಡುವುದಾಗಿ ಬೇಡಿಕೆ ಇಟ್ಟಿದೆ. ಆದರೆ ಬಿಜೆಪಿಯು 20 ರಿಂದ 25 ಸ್ಥಾನಗಳ ಆಫರ್ ನೀಡಿದೆ. ಕೇಂದ್ರ ಸಚಿವ ಜಿತನ್ ರಾಮ್​ ಮಾಂಜಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ ಪಕ್ಷ 15 ಕ್ಷೇತ್ರಗಳು ಬೇಕೆಂದು ಬೇಡಿಕೆ ಇಟ್ಟರೇ, ಇದಕ್ಕೆ ಬಿಜೆಪಿ ಕೇವಲ 7 ಕ್ಷೇತ್ರಗಳು ನೀಡುವುದಾಗಿ ಹೇಳಿದೆ. ಸದ್ಯ ಎನ್​ಡಿಎಗೆ ಸೀಟ್​ಗಳ ಹಂಚಿಕೆಯು ದೊಡ್ಡ ತಲೆ ನೋವಾಗಿದ್ದು ಶೀಘ್ರದಲ್ಲೇ ಅಂತಿಮ ಘೋಷಣೆ ಹೊರ ಬೀಳಲಿದೆ.
ಕೇಂದ್ರ ಚುನಾವಣಾ ಆಯೋಗವು ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ದಿನಾಂಕ ಘೋಷಣೆ ಮಾಡಿದೆ. ಎರಡು ಹಂತದಲ್ಲಿ ಎಲೆಕ್ಷನ್ ನಡೆಯಲಿದ್ದು ನೆವೆಂಬರ್​ 6 ಹಾಗೂ ನವೆಂಬರ್ 11 ರಂದು ಮತದಾನ ನಡೆಯಲಿದೆ. ನವೆಂಬರ್ 14 ರಂದು ವೋಟ್​ಗಳ ಕೌಂಟಿಂಗ್ ಇರಲಿದ್ದು ಅಂತಿಮ ಫಲಿತಾಂಶ ಹೊರ ಬೀಳಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us