/newsfirstlive-kannada/media/media_files/2025/09/14/water-bottle-2025-09-14-09-00-11.jpg)
ಆಂಧ್ರ ಪ್ರದೇಶದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ದುರಾದೃಷ್ಟವಶಾತ್ ನೀರಿನ ಬಾಟಲಿಯ ಮುಚ್ಚಳ ಗಂಟಲಿನಲ್ಲಿ ಸಿಲುಕಿ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ.
ಅನಂತಪುರ ಜಿಲ್ಲೆಯ ಗುಥಿ ಪಟ್ಟಣದ ಯುಗಂಧರ್ ಮತ್ತು ಮೌನಿಕಾ ದಂಪತಿಯ ಮಗು ಜೀವ ಕಳೆದುಕೊಂಡಿದೆ. ರಕ್ಷಿತ್ ರಾಮ್ ಮೃತ ಮಗುವಿನ ಹೆಸರು. ಯುಗಂಧರ್ ಮತ್ತು ಮೌನಿಕಾ ಇಬ್ಬರೂ ಸರ್ಕಾರಿ ನೌಕರರು. ಯುಗಂಧರ್ ಅನಂತಪುರದ ಆರ್ ಅಂಡ್ ಬಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದಾರೆ. ಮೌನಿಕಾ ಗುಥಿ ಪಟ್ಟಣದ ಟ್ರಾನ್ಸ್‌ಕೋ ಇಲಾಖೆಯಲ್ಲಿ ಎಡಿಇ ಆಗಿದ್ದಾರೆ.
ಮೌನಿಕಾ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಒಂದೂವರೆ ವರ್ಷದ ಮಗನ ಕೆಲಸಕ್ಕೆ ಕರೆದುಕೊಂಡು ಹೋಗಿದ್ದರು. ಮೌನಿಕಾ ಕರ್ತವ್ಯದಲ್ಲಿದ್ದಾಗ ಒಂದೂವರೆ ವರ್ಷದ ಮಗ ಆಟವಾಡುತ್ತ ನೀರಿನ ಬಾಟಲಿಯನ್ನ ನುಂಗಲು ಪ್ರಯತ್ನಿಸಿದೆ. ಅದು ಗಂಟಲಿನಲ್ಲಿ ಸಿಲುಕಿ ಉಸಿರುಗಟ್ಟಿದೆ. ಕೂಡಲೇ ತಾಯಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ವೈದ್ಯರು ಸಿಪಿಆರ್ ಮಾಡಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಇದನ್ನೂ ಓದಿ:ದೇವರ ಕಾಯಿ ವಿಚಾರಕ್ಕೆ ಅತ್ತಿಗೆಯ ತಲೆ ಒಡೆದ ಬಾಮೈದ -ಅಸಲಿಗೆ ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us