/newsfirstlive-kannada/media/media_files/2025/09/14/karwar-case-2025-09-14-08-07-41.jpg)
ಹಣಕ್ಕಾಗಿಯೋ, ಆಸ್ತಿಗಾಗಿಯೋ ಕುಟುಂಬದವರಲ್ಲಿ ಜಗಳ ನಡೆಯೋದು ಸಾಮಾನ್ಯ. ಆದ್ರೆ ಉತ್ತರಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ದೇವರ ಕಾಯಿ ವಿಚಾರದಲ್ಲಿ ಕಲಹ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿ ಮಹಿಳೆಯೊಬ್ಬಳನ್ನು ಬರ್ಬರವಾಗಿ ಕೊ*ಲೆ ಮಾಡಿದ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದಲ್ಲಿ ಮಹಿಳೆಯೊಬ್ಬಳನ್ನ ಸ್ವಂತ ಬಾವನೇ ಕೊ*ಲೆ ಮಾಡಿದ ಘಟನೆ ನಡೆದಿದೆ. ಜೊಯಿಡಾ ತಾಲೂಕಿನ ಶಿಂಗರಗಾವ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮೇಶೆತ್ ಬಳಿ ಕೊಲೆ ನಡೆದಿದೆ. ಭಾಗ್ಯಶ್ರೀ ಸೋನು ವರಕ ಎಂಬಾಕೆಯನ್ನು ಅವಳ ಸ್ವಂತ ಬಾವ ದೊಂಡು ವರಕ ಎಂಬಾತ ಸಲಾಕೆಯಿಂದ ಹೊಡೆದು ಹ*ತ್ಯೆ ಮಾಡಿ ಪರಾರಿಯಾಗಿದ್ದಾನೆ. ದೇವರ ತೆಂಗಿನ ಕಾಯಿಯ ವಿಚಾರದಲ್ಲಿ ಕುಟುಂಬದಲ್ಲಿ ಜಗಳ ನಡೆಯುತಿತ್ತು. ಜಗಳ ವಿಕೋಪಕ್ಕೆ ತೆರಳಿ ಭಾಗ್ಯಶ್ರೀ ಕೊ*ಲೆಯಲ್ಲಿ ಅಂತ್ಯ ಆಗಿದೆ.
ಇದನ್ನೂ ಓದಿ:ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ ಜನ ಯಾಕೆ ಬೇರೆ ಧರ್ಮಕ್ಕೆ ಮತಾಂತರ ಆಗ್ತಿದ್ರು?
ಭಾಗ್ಯಶ್ರೀ ಮತ್ತು ಆರೋಪಿ ದೊಂಡು ವರಕ ಒಂದೇ ಕುಟುಂಬದವರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಮೂಲ ದೇವರ ಕಾಯಿ ನಮ್ಮ ಮನೆಯಲ್ಲಿ ಇರಬೇಕು. ನಮ್ಮ ಮನೆಯಲ್ಲಿ ಇರಬೇಕು ಎಂದು ಜಗಳ ನಡೀತಾನೇ ಇತ್ತು. ಊರಿನ ಹಿರಿಯರು ಹಿಂದೆ ಸಭೆ ಮಾಡಿ ಭಾಗ್ಯಶ್ರೀ ಮನೆಯಲ್ಲಿಯೇ ದೇವರು ಇರಲಿ ಎಂಬ ನಿರ್ಣಯ ತೆಗೆದುಕೊಂಡಿದ್ದರು. ಆದ್ರೆ ದೇವರು ನನ್ನ ಮನೆಯಲ್ಲಿ ಇಲ್ಲದ ಕಾರಣ ದೊಂಡು ವರಕ ತನ್ನ ಮಗನಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ ಅಂತ ಜಗಳ ಮಾಡುತ್ತಿದ್ದ. ರೊಚ್ಚಿಗೆದ್ದ ದೊಂಡು ಕುಟಾರಿಯಿಂದ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ:ಪಾತ್ರಧಾರಿ ನಾನಲ್ಲ ಹಾಡಲ್ಲಿ ಬಿಗ್ಬಾಸ್ ವಿನ್ನರ್ ಹನುಮಂತ ಫುಲ್ ಮಿಂಚಿಂಗ್
ಸದ್ಯ ತಾಯಿಯನ್ನು ಕಳೆದುಕೊಂಡ ನಾಲ್ವರು ಮಕ್ಕಳು ಅತಂತ್ರರಾಗಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದೀಪನ್ ಎನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಪೋಲಿಸರು ಹಂತಕನಿಗೆ ಬಲೆ ಬೀಸಿದ್ದಾರೆ. ಒಟ್ಟಿನಲ್ಲಿ ಕುಟುಂಬ ಕಾಯಬೇಕಾದ ದೇವರ ವಿಚಾರವೇ ಕೊ*ಲೆಯಲ್ಲಿ ಅಂತ್ಯ ಆಗಿದ್ದು ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ