/newsfirstlive-kannada/media/media_files/2025/09/13/hanumantha_1-2025-09-13-22-57-41.jpg)
ಕಿರುತೆರೆ ಸ್ಟಾರ್ ಸರಿಮಗಪ ಸಿಂಗರ್, ಬಿಗ್ಬಾಸ್ ವಿನ್ನರ್ ಹನುಮಂತ ಲಮಾಣಿ. ತನ್ನ ಮುಗ್ಧತೆಯಿಂದ ಜನರ ಮನೆ ಮತ್ತು ಮನಸ್ಸುಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡು ಚಿಲ್ಲೂರು ಬಡ್ನಿ ತಾಂಡಾದ ಹೈದ ಈ ಲುಂಗಿ ಬಾಯ್ ಹನುಮಂತ. ಬಿಗ್ಬಾಸ್ ಮುಗಿದ್ಮೇಲೆ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನ್ಲ್ಲಿ ಕಾಣಿಸಿಕೊಂಡಿದ್ದು ಬಿಟ್ರೆ ಹನುಮಂತ ಏನ್ ಮಾಡ್ತಿದ್ದಾರೆ ಅನ್ನೋದು ಗುಟ್ಟಾಗಿಯೇ ಇತ್ತು.
ಆದ್ರೀಗ ಅಭಿಮಾನಿಗಳ ದಿಲ್ಖುಷ್ ಆಗುವಂತ ಸುದ್ದಿಯೊಂದನ್ನ ಹನುಮಂತ ನೀಡಿದ್ದಾನೆ. ಅದೇನೆಂದ್ರೆ ಹನುಂತ ತನ್ನದೇ ಒಂದು ಯ್ಯೂಟೂಬ್ ಚಾನಲ್ ಮಾಡಿದ್ದು, ಆ ಚಾನಲ್ನಲ್ಲಿ ತಾನೇ ಹಾಡಿರೋ ಹೊಸ ಹಾಡಿನ ಪ್ರೋಮೋ ಕೂಡ ರಿಲೀಸ್ ಮಾಡಿದ್ದಾನೆ. ಪ್ರೋಮೋದಲ್ಲಿ ಹೊಸ ಲುಕ್ನಲ್ಲಿ ಹನುಮಂತ ಫುಲ್ ಮಿಂಚಿದ್ದಾನೆ.
ಇದನ್ನೂ ಓದಿ:ಚಂದ್ರಮೌಳಿ ನಾಗಮಲ್ಲಯ್ಯ ಯಾರು..? ಬೆಂಗಳೂರಿನಿಂದ ಅಮೆರಿಕ ಜೀವನ ಹೇಗಿತ್ತು..?
ಪಾತ್ರಧಾರಿ ನಾವೆಲ್ಲ ಹಾಡಿಗೆ ಧ್ವನಿಯಾದ ಹನುಮಂತ
ಎಲ್ಲರಿಗೂ ಗೊತ್ತಿರೋ ಹಾಗೆ ಹನುಮಂತ ಅಪ್ಪಟ ಹಳ್ಳಿ ಪ್ರತಿಭೆ. ಜಾನಪದ ಗೀತೆಗಳನ್ನ ಅರಗಿ ಕುಡಿದಿರೋ ಗಾಯಕ. ಸಂಗೀತ ಕಲಿಯದೇ ಇದ್ದರೂ ಭಜನೆ ಹಾಡುಗಳನ್ನ ಹಾಡೋ ಮೂಲಕವೇ ಸರಸ್ವತಿಯನ್ನ ಒಲಿಸಿಕೊಂಡಿರುವ ಕಲಾವಿದ. ಹನುಮಂತನ ತತ್ವಪದಗಳು, ಜನಪದದ ಹಾಡುಗಳಿಗೆ ಒಂದು ಫ್ಯಾನ್ ಬೇಸ್ ಇದೆ ಅಂದ್ರೂ ತಪ್ಪಾಗಲ್ಲ. ಯಾಕಂದ್ರೆ ಈ ಹಾಡುಗಳಿಂದಲೇ ಹನುಮಂತ ಜನರ ಮನಸ್ಸನ್ನ ಗೆದ್ದಿರೋದು. ಹೀಗಾಗಿ ಸರಿಗಮಪ ಮತ್ತು ಬಿಗ್ಬಾಸ್ನಲ್ಲಿ ಸದಾಕಾಲ ಗುನಗುತ್ತಿದ್ದ ಹಾಡನ್ನೆ ಹನುಮಂತ ಆಲ್ಬಂ ಸಾಂಗ್ ಮಾಡಿದ್ದಾನೆ. ಈ ಆಲ್ಬಂ ಸಾಂಗ್ನ ಪ್ರೋಮೋ ರಿಲೀಸ್ ಮಾಡಿದ್ದಾನೆ. ಪಾತ್ರಧಾರಿ ನಾವೆಲ್ಲ ಸೂತ್ರಧಾರಿ ಶಿವಮೇಲು ಅನ್ನೋ ಹಾಡಲ್ಲಿ ಹನುಮಂತ ಕಾಣಿಸಿಕೊಂಡಿದ್ದು, ಹಣಗೆ ವಿಭೂತಿ ಹಾಕಿ, ಶಿವಲಿಂಗ ಪೂಜೆ ಮಾಡೋ ಹಾಡಿನ ಪ್ರೋಮೋ ಬಿಡುಗೆ ಮಾಡಿದ್ದಾನೆ.
ಆಲ್ಬಂ ಸಾಂಗ್ ಪ್ರೋಮೋ ರಿಲೀಸ್..
ಸದ್ಯಕ್ಕೆ ಪಾತ್ರಧಾರಿ ಹಾಡಿನ ಪ್ರೋಮೋ ಮಾತ್ರವನ್ನೆ ರಿಲೀಸ್ ಮಾಡಲಾಗಿದೆ. ಹನುಮಂತನ ಈ ಹಾಡು ನೋಡಿ ಅಭಿಮಾನಿಗಳು ಕೂಡ ಖುಷಿ ಪಟ್ಟಿದ್ದು, ಆದಷ್ಟು ಬೇಗ ಫುಲ್ ಸಾಂಗ್ ಬರಲಿ ಅಂತ ಚಿಲ್ಲೂರು ಬಡ್ನಿ ಹೈದನಿಗೆ ಶುಭ ಹಾರೈಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ