ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ ಜನ ಯಾಕೆ ಬೇರೆ ಧರ್ಮಕ್ಕೆ ಮತಾಂತರ ಆಗ್ತಿದ್ರು? -CM ಸಿದ್ದರಾಮಯ್ಯ

ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ, ಎಲ್ಲರಿಗೂ ಸಮಾನ ಅವಕಾಶಗಳಿದ್ದರೆ ಜನ ಯಾಕೆ ಮತಾಂತರಗೊಳ್ಳುತ್ತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

author-image
Ganesh Kerekuli
Advertisment

ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ, ಎಲ್ಲರಿಗೂ ಸಮಾನ ಅವಕಾಶಗಳಿದ್ದರೆ ಜನ ಯಾಕೆ ಮತಾಂತರಗೊಳ್ಳುತ್ತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. 

ಮೈಸೂರಿನಲ್ಲಿ ನಿನ್ನೆ ಮಾಧ್ಯಮಗಳು, ಜಾತಿ ಗಣತಿ ವಿಚಾರವಾಗಿ ಪ್ರಶ್ನೆ ಮಾಡಿದವು. ಜಾತಿ ಗಣತಿ ಹೆಸರಲ್ಲಿ ಕಾಂಗ್ರೆಸ್​ ಸರ್ಕಾರ ಹೊಸ ಹೊಸ ಜಾತಿಯನ್ನ ಸೃಷ್ಟಿ ಮಾಡ್ತಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡ್ತಿದ್ದಾರೆ ಎಂದು ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ.. ಕೇಂದ್ರ ಸರ್ಕಾರದವರೇ ಜಾತಿ ಗಣತಿ ಮಾಡ್ತಿದ್ದಾರೆ. ಅದು ಏನು ಮಾಡುತ್ತದೆ..? ಯಾರೆಲ್ಲ ಕನ್ವರ್ಟ್ ಆಗಿದ್ದಾರೆ ಅದಕ್ಕಾಗಿ ಹೊಸ ಕಾಲಂ ಬಿಡಲಾಗಿದೆ. 

ಇದನ್ನೂ ಓದಿ:ತುಮಕೂರಿನ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಲ್ಲ ಎಂದ ಡಿಸಿಎಂ ಡಿಕೆಶಿ: ಮತ್ತೆ ಕಾಮಗಾರಿ ಆರಂಭ ಮಾಡುತ್ತೇವೆ ಎಂದು ಘೋಷಣೆ

ಕೆಲವು ವ್ಯವಸ್ಥೆಗಳ ಪರಿಣಾಮವಾಗಿ ಕನ್ವರ್ಟ್ ಆಗುತ್ತಾರೆ. ನಮ್ಮ ಹಿಂದೂ ಸಮಾಜದಲ್ಲಿ ಎಲ್ಲರಿಗೂ ಸಮಾನತೆ ಇದ್ದಿದ್ದರೆ ಯಾಕೆ ಮತಾಂತರ ಆಗುತ್ತಿದ್ದರು? ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ, ಎಲ್ಲರಿಗೂ ಸಮಾನ ಅವಕಾಶಗಳಿದ್ದರೆ ಜನ ಯಾಕೆ ಮತಾಂತರಗೊಳ್ಳುತ್ತಿದ್ದರು. ಆಸ್ಪೃಶ್ಯತೆ ಏಕೆ ಬಂತು? ಅದನ್ನು ನಾವು ಹುಟ್ಟು ಹಾಕಿದ್ದೇವಾ? ಎಂದು ಪ್ರಶ್ನಿಸಿದರು.

ಅಸಮಾನತೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಎಲ್ಲಾ ಧರ್ಮದಲ್ಲಿ ಇದ್ದರೂ, ಮತಾಂತರ ಆಗಿ ಎಂದು ಹೇಳಿಲ್ಲ. ಬಿಜೆಪಿ ಅವರೂ ಹೇಳಿಲ್ಲ. ಆದರೂ ಮತಾಂತರವಾಗಿದ್ದಾರೆ. ಮತಾಂತರವಾಗುವುದು ಅವರ ಹಕ್ಕು ಎಂದು ಹೇಳಿದರು. ಸಿದ್ದರಾಮಯ್ಯ ಏನು ಹೇಳಿದರು ಅನ್ನೋದನ್ನ ತಿಳಿದುಕೊಳ್ಳಲು ಮೇಲಿನ ವಿಡಿಯೋ ನೋಡಿ..  

ಇದನ್ನೂ ಓದಿ:ರಾಜಕೀಯ ಸಿಂಹಾಸನ ಅಲಂಕರಿಸಿದ AI; ಅಲ್ಬೇನಿಯಾ ಸರ್ಕಾರದಲ್ಲಿ ಎಐಗೆ ಸಚಿವ ಸ್ಥಾನ..!


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH
Advertisment