Advertisment

ಖ್ಯಾತ ಕಾದಂಬರಿಕಾರ ಎಸ್.​ಎಲ್ ಭೈರಪ್ಪ ಅವರಿಗೆ ಪ್ರಧಾನಿ ಮೋದಿ ಸಂತಾಪ.. ಏನಂದ್ರು?

ಕಾದಂಬರಿಕಾರ ಎಸ್.​ಎಲ್ ಭೈರಪ್ಪ ಅವರು ನಿಧನ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಇಡೀ ಭಾರತವನ್ನು ತುಂಬಾ ಆಳವಾಗಿ ಅಧ್ಯಯನ ಮಾಡಿದ ಧೀಮಂತ ವ್ಯಕ್ತಿಯನ್ನು ಇಂದು ನಾವೆಲ್ಲ ಕಳೆದುಕೊಂಡಿದ್ದೇವೆ.

author-image
Bhimappa
SL_BHYRAPPA (2)
Advertisment

ಬೆಂಗಳೂರು: ಲೇಖಕ, ವಿಮರ್ಶಕ, ಅಧ್ಯಾಪಕ ಎಸ್.​ಎಲ್ ಭೈರಪ್ಪ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಕಾರ್ಡಿಯಾಕ್ ಆರೆಸ್ಟ್​​ನಿಂದ ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ. ಈ ಸಂಬಂಧ ದೇಶದೆಲ್ಲೆಡೆ ಗಣ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಎಸ್.​ಎಲ್ ಭೈರಪ್ಪ ಅವರಿಗೆ ಸಂತಾಪ ಸೂಚಿಸಿದ್ದಾರೆ. 

Advertisment

ಖ್ಯಾತ ಕಾದಂಬರಿಕಾರ ಎಸ್.​ಎಲ್ ಭೈರಪ್ಪ ಅವರು ನಿಧನ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಇಡೀ ಭಾರತವನ್ನು ತುಂಬಾ ಆಳವಾಗಿ ಅಧ್ಯಯನ ಮಾಡಿದ ಧೀಮಂತ ವ್ಯಕ್ತಿಯನ್ನು ಇಂದು ನಾವೆಲ್ಲ ಕಳೆದುಕೊಂಡಿದ್ದೇವೆ. ನಿರ್ಭೀತ ಚಿಂತಕರಾಗಿದ್ದ ಅವರು ತಮ್ಮದೇ ಆದ ಚಿಂತನಶೀಲ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದರು. ಅವರ ಕೃತಿ, ಕಾದಂಬರಿಗಳು, ಬರಹಗಳು ಯುವ ಪೀಳಿಗೆಗೆ ಪ್ರೇರಣೆ ನೀಡುವಂತೆ ಇವೆ ಎಂದಿದ್ದಾರೆ.  

ಇದನ್ನೂ ಓದಿ:ನಾಡಿನ ಹಿರಿಯ ಸಾಹಿತಿ ಇನ್ನಿಲ್ಲ.. ಸರಸ್ವತಿ ಸಮ್ಮಾನ್ ಪುರಸ್ಕೃತ SL ಭೈರಪ್ಪರ ಜೀವನ ಹೇಗಿತ್ತು?

SL_BHYRAPPA_MODI

ಅವರ ಬರಹಗಳು ಪೀಳಿಗೆಗಳು ಸಮಾಜವನ್ನು ಚಿಂತಿಸಲು, ಪ್ರಶ್ನಿಸಲು ಮತ್ತು ಹೆಚ್ಚು ಆಳವಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಅವರಿಗಿದ್ದ ಅಚಲ ಉತ್ಸಾಹವು ಮುಂಬರುವ ವರ್ಷಗಳಲ್ಲಿ ಮನಸ್ಸುಗಳಿಗೆ ಸ್ಫೂರ್ತಿ ನೀಡುತ್ತದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬದವರಿಗೆ ದೇವರು ಶಕ್ತಿ ನೀಡಲಿ ಎಂದು ಎಂದು ಹೇಳಿದ್ದಾರೆ.  

Advertisment

ಇದು ಅಲ್ಲದೇ, ಪಾರ್ಲಿಮೆಂಟರಿಯಲ್ಲಿ ಪ್ರಧಾನಿ ಮೋದಿ ಅವರನ್ನು 2019ರಲ್ಲಿ ಎಸ್​.ಎಲ್​ ಭೈರಪ್ಪ, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ್ ಕಂಬಾರ ಅವರು ಭೇಟಿ ಮಾಡಿದ್ದರು. ಈ ವೇಳೆ ಪ್ರಹ್ಲಾದ್ ಜೋಶಿ ಕೂಡ ಜೊತೆಗಿದ್ದಾರೆ. ಸದ್ಯ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

PM Modi sL BYRAPPA NO MORE SL Bhyrappa
Advertisment
Advertisment
Advertisment