/newsfirstlive-kannada/media/media_files/2025/08/26/modi_car-2025-08-26-13-36-07.jpg)
ಗಾಂಧಿನಗರ: ಮಾರುತಿ ಸುಜುಕಿ ಕಂಪನಿಯಿಂದ ತಯಾರಿಸಲ್ಪಟ್ಟಿರುವ ಮೊದಲ ಬ್ಯಾಟರಿ ಎಲೆಕ್ಟ್ರಿಕ್ ವಾಹನ (BEV) ಇ-ವಿಟಾರಾದ ಜಾಗತಿಕ ರಫ್ತಿಗಾಗಿ ಪ್ರಧಾನಿ ಮೋದಿ ಅವರು ಚಾಲನೆ ನೀಡಿದರು. ಗುಜರಾತ್ನ ಅಹಮದಾಬಾದ್ನ ಹಂಸಲಪುರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿಯವರು ಸ್ವದೇಶಿಯವಾಗಿ ತಯಾರದಂತಹ ಮೊದಲ ಬ್ಯಾಟರಿ ಎಲೆಕ್ಟ್ರಿಕ್ ಕಾರಿಗೆ ಫ್ಲ್ಯಾಗ್ ಮಾಡಿದರು.
ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳನ್ನು ಯೂರೋಪ್ ರಾಷ್ಟ್ರಗಳು ಸೇರಿದಂತೆ ವಿಶ್ವದ 100 ದೇಶಗಳಿಗೆ ರಫ್ತು ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಇದರಿಂದ ಭಾರತ ಸ್ವಾವಲಂಬಿಯಾಗಿ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದೆ ಎಂದು ಗೊತ್ತಾಗುತ್ತದೆ. ಈ ವಾಹನಗಳು ಹೈಬ್ರಿಡ್ ಮಾದರಿ ಬ್ಯಾಟರಿಗಳನ್ನು ಹೊಂದಿರುತ್ತವೆ. ಅಂದರೆ ಎರಡು ಬ್ಯಾಟರಿಗಳು ಇರುತ್ತವೆ. ಎಲೆಕ್ಟ್ರಿಕ್ ವಾಹನಗಳು ಆಗಿದ್ದರಿಂದ ಪರಿಸರಕ್ಕೆ ಉತ್ತಮ ಎಂದು ಹೇಳಲಾಗಿದೆ.
ಇದನ್ನೂ ಓದಿ:ಅಂಬಾನಿಯ ‘ವಂತಾರ’ದಲ್ಲಿ ಕಳ್ಳಸಾಗಣೆ ಸೇರಿ ಅಕ್ರಮ ಆರೋಪ.. SIT ರಚಿಸಿದ ಸುಪ್ರೀಂ ಕೋರ್ಟ್
ನವದೆಹಲಿಯಲ್ಲಿ ಇದೇ ವರ್ಷದ ಆರಂಭದಲ್ಲಿ ನಡೆದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋದಲ್ಲಿ ಮೊದಲ ಬಾರಿಗೆ ಇದನ್ನು ಪ್ರದರ್ಶನ ಮಾಡಿತ್ತು. ಇ-ವಿಟಾರಾದ ಮಾರುತಿ ಸುಜುಕಿಯ ಇವಿ ಹಾಗೂ ಎಲೆಕ್ಟ್ರಿಕ್ ವಾಹನಗಳನ್ನ ವಿಶ್ವದ ಇತರೆ ದೇಶಗಳಿಗೆ ರಫ್ತು ಮಾಡಲು ಯೋಜಿಸಲಾಗಿತ್ತು. ಅದರಂತೆ ಇಂದು ಮೊದಲ ಬ್ಯಾಟರಿ ಎಲೆಕ್ಟ್ರಿಕ್ ವಾಹನ ಇ-ವಿಟಾರಾದ ಜಾಗತಿಕ ರಫ್ತಿಗೆ ಪ್ರಧಾನಿಗಳು ಹಸಿರು ನಿಶಾನೆ ತೋರಿದ್ದಾರೆ.
ಮಾರುತಿ ಸುಜುಕಿ ಬ್ಯಾಟರಿ ಎಲೆಕ್ಟ್ರಿಕ್ ವಾಹನ ಇ-ವಿಟಾರಾ ಕಾರನ್ನು ಒಮ್ಮೆ ಚಾರ್ಜ್ ಮಾಡಿದರೆ 500 ಕಿಲೋ ಮೀಟರ್ ವರೆಗೆ ಪ್ರಯಾಣ ಮಾಡಬಹುದು. ಇನ್ನೊಂದು ಬ್ಯಾಟರಿ ಕಡಿಮೆ ದೂರದ ಚಾರ್ಜ್ ಅನ್ನು ಹೊಂದಿರುತ್ತದೆ. 49 kWh ಸಣ್ಣ ಬ್ಯಾಟರಿ ಹಾಗೂ 61 kWh ದೊಡ್ಡ ಬ್ಯಾಟರಿ ಆಗಿದೆ ಎಂದು ಅಧಿಕೃತವಾಗಿ ಕಂಪನಿ ಮಾಹಿತಿ ನೀಡಿದೆ ಎನ್ನಲಾಗಿದೆ.
ಇವಿ ರಫ್ತು ಉದ್ಘಾಟನೆಯ ಜೊತೆಗೆ, ಪ್ರಧಾನಿ ಮೋದಿ ಅವರು ಡೆನ್ಸೊ, ತೋಷಿಬಾ ಹಾಗೂ ಸುಜುಕಿಯ ಉದ್ಯಮವಾದ ಟಿಡಿಎಸ್ ಲಿಥಿಯಂ-ಐಯಾನ್ ಬ್ಯಾಟರಿ ಸ್ಥಾವರದಲ್ಲಿ ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್‌ಗಳ ಸ್ಥಳೀಯ ಉತ್ಪಾದನೆಯನ್ನು ಉದ್ಘಾಟನೆ ಮಾಡಿದರು. ಬ್ಯಾಟರಿಯು ಶೇ. 80ರಷ್ಟು ಭಾರತದಲ್ಲೇ ತಯಾರಾಗುತ್ತದೆ. ಇದು ದೇಶದ ಇವಿ ಬ್ಯಾಟರಿ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.
ಈ ಎಲೆಕ್ಟ್ರಿಕ್ ಎಸ್ಯುವಿ ಎರಡು ಬ್ಯಾಟರಿಗಳ ಆಯ್ಕೆಯನ್ನು ಹೊಂದಿರುತ್ತದೆ. 49 kWh ಮತ್ತು 61 kWh ದೊಡ್ಡ ಬ್ಯಾಟರಿಯು ಡ್ಯುಯಲ್ AWD (AllGrip-e) ರಚನೆಯಲ್ಲಿ ಲಭ್ಯ ಇರುತ್ತದೆ. ಈ ವಾಹನಗಳ ವಿವರ, ವೇರಿಯಂಟ್ಸ್, ಲಾಂಚಿಂಗ್ ಟೈಮ್ಲೈನ್, ಫ್ಯೂಚರ್ಸ್ ಭಾರತದಲ್ಲಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ