/newsfirstlive-kannada/media/media_files/2025/08/31/modi-and-jinping-2025-08-31-11-15-56.jpg)
ಬರೋಬ್ಬರಿ 7 ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ (PM Narendra Modi) ಚೀನಾಗೆ ಭೇಟಿ ನೀಡಿದ್ದಾರೆ. ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆ (SCO) ಟಿಯಾಂಜಿನ್ ತಲುಪಿರುವ ಮೋದಿ, ಇಂದು ಬೆಳಗ್ಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿಯಾದರು.
ಚೀನಾಗೆ ಧನ್ಯವಾದ
ಟಿಯಾಂಜಿನ್‌ನಲ್ಲಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ದ್ವಿಪಕ್ಷೀಯ ಸಭೆ ನಡೆಸಿದರು. ದ್ವಿಪಕ್ಷೀಯ ಸಭೆಯಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ‘ಎರಡೂ ದೇಶಗಳು ಸಂಬಂಧಗಳನ್ನ ಮುಂದಕ್ಕೆ ಕೊಂಡೊಯ್ಯಲು ಬದ್ಧವಾಗಿವೆ. ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಯ ವಾತಾವರಣ ಇದೆ. ನಮ್ಮ ಸಂಬಂಧಗಳು ಸಕಾರಾತ್ಮಕ ದಿಕ್ಕು ಪಡೆದುಕೊಂಡಿವೆ. ಪರಸ್ಪರ ನಂಬಿಕೆಯೊಂದಿಗೆ ಮುಂದುವರಿಯುತ್ತೇವೆ. ಕೈಲಾಸ ಮಾನಸ ಸರೋವರ ಯಾತ್ರೆ ಮತ್ತೆ ಆರಂಭವಾಗಿದೆ ಎಂದರು.
ಇದನ್ನೂ ಓದಿ:ಚೀನಾದಲ್ಲಿ SCO ಶೃಂಗಸಭೆ.. ಇಂದು ಮೋದಿ, ಜಿನ್‌ಪಿಂಗ್ ಭೇಟಿ..!
ಎರಡೂ ದೇಶಗಳ ನಡುವೆ ನೇರ ವಿಮಾನಯಾನ ಪುನರಾರಂಭಗೊಳ್ಳುತ್ತಿವೆ. ಎರಡೂ ದೇಶಗಳ 2.8 ಶತಕೋಟಿ ಜನರ ಹಿತಾಸಕ್ತಿಗಳು ನಮ್ಮ ಸಹಕಾರದೊಂದಿಗೆ ಸಂಬಂಧ ಹೊಂದಿವೆ. ಇದು ಮಾನವೀಯತೆಯ ಕಲ್ಯಾಣಕ್ಕೂ ಕಾರಣವಾಗುತ್ತದೆ. ಚೀನಾದಿಂದ SCO ನ ಯಶಸ್ವಿ ಅಧ್ಯಕ್ಷತೆಗಾಗಿ ನಾನು ಅಭಿನಂದಿಸುತ್ತೇನೆ ಎಂದರು.
ಮೋದಿಗೆ ಧನ್ಯವಾದ
ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ಕ್ಸಿ ಜಿನ್‌ಪಿಂಗ್ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದರು. ಭಾರತ ಮತ್ತು ಚೀನಾ ಎರಡು ದೊಡ್ಡ ನಾಗರಿಕತೆಗಳು. ಡ್ರ್ಯಾಗನ್ ಮತ್ತು ಆನೆಯ ಬೆಂಬಲ ಮುಖ್ಯ. ಭಾರತ ಮತ್ತು ಚೀನಾ ನಡುವಿನ ಸ್ನೇಹ ಮುಖ್ಯ ಎಂದರು.
ಚೀನಾಗೆ ಮೋದಿ ಮೂರು ಸಂದೇಶ
ಜಿನ್‌ಪಿಂಗ್ ಭೇಟಿಯ ಸಮಯದಲ್ಲಿ ಮೋದಿ ಅವರು 3 ಪದಗಳನ್ನು ಬಳಸಿದರು. ನಂಬಿಕೆ, ಗೌರವ ಮತ್ತು ಸೂಕ್ಷ್ಮತೆ. ಈ ಮೂರು ವಿಷಯಗಳ ಬಗ್ಗೆ ನೀವು ಪ್ರಾಮಾಣಿಕವಾಗಿ ನಿಂತರೆ ಮಾತ್ರ ನಾವು ನಿಮ್ಮನ್ನು ನಂಬುತ್ತೇವೆ ಎಂಬ ಸಂದೇಶವನ್ನ ಚೀನಾಗೆ ರವಾನಿಸಿದ್ದಾರೆ.
ಇದನ್ನೂ ಓದಿ:ಟ್ರಂಪ್ ಅವರ ಈ ಮಾತಿಗೆ ಮೋದಿಗೆ ಸಿಟ್ಟು -ಸಿಕ್ರೇಟ್ ರಿವೀಲ್ ಮಾಡಿದ ನ್ಯೂಯಾರ್ಕ್ ಟೈಮ್ಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ