/newsfirstlive-kannada/media/media_files/2025/08/30/modi-trump-2025-08-30-22-11-33.jpg)
ಅಮೆರಿಕ ಅಧ್ಯಕ್ಷ ಟ್ರಂಪ್ (Trump) ಶೇಕಡಾ 50 ರಷ್ಟು ಸುಂಕ ವಿಧಿಸಿದ ನಂತರ ಎರಡೂ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿವೆ. ಉಭಯ ದೇಶಗಳ ಸಂಬಂಧ ಹಾಳಾಗಲು ಕಾರಣ ಇದೊಂದೇ ಅಲ್ಲ.
ಆಪರೇಷನ್ ಸಿಂಧೂರ್ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಟ್ರಂಪ್ ಪದೇಪದೆ ಹೇಳ್ತಿದ್ದಾರೆ. ಆದರೆ ಭಾರತ ಪ್ರತಿ ಬಾರಿಯೂ ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿದೆ. ಪಾಕ್ ಟ್ರಂಪ್ ಅವರನ್ನು ನೊಬೆಲ್ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿದಾಗ ಅಮೆರಿಕ ಅಧ್ಯಕ್ಷರು ಭಾರತದಿಂದಲೂ ಅದನ್ನೇ ನಿರೀಕ್ಷೆ ಮಾಡಿದ್ದರು. ಆದರೆ ಅದು ಆಗಲಿಲ್ಲ.
ಟ್ರಂಪ್ ವಿರುದ್ಧ ಕೆರಳಿದ ಮೋದಿ
ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ.. ಜೂನ್ 17, 2025 ರಂದು ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರಧಾನಿ ಮೋದಿಗೆ ಕರೆ ಮಾಡಿದ್ದರು. ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಬೇಕು ಅಂತಾ ಮೋದಿಯಿಂದ ಟ್ರಂಪ್ ಬಯಸಿದ್ದರು. ಇಬ್ಬರು ನಾಯಕರು ಸುಮಾರು 35 ನಿಮಿಷಗಳ ಕಾಲ ಮಾತನಾಡಿದ್ದರು.
ಇದನ್ನೂ ಓದಿ: ಪೋಲೆಂಡ್‌ನಲ್ಲಿ ಎಫ್-16 ಫೈಟರ್ ಜೆಟ್ ಪತನ, ದುರಂತದ ವಿಡಿಯೋ ನೋಡಿ
ಟ್ರಂಪ್ ಬೇಡಿಕೆಗೆ ಮೋದಿ ಕೋಪಗೊಂಡರು. ಟ್ರಂಪ್ ಫೋನ್ ಕರೆಯಲ್ಲಿ ಪಾಕಿಸ್ತಾನ ತಮ್ಮನ್ನ (ಟ್ರಂಪ್) ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಿದೆ ಎಂದಿದ್ದಾರೆ. ಇದರರ್ಥ ಭಾರತವೂ ಅದೇ ರೀತಿ ಮಾಡಬೇಕೆಂದು ಅವರು ಬಯಸಿದ್ದರು. ಆದರೆ ಭಾರತ ಅಂತಹ ತೀರ್ಮಾನ ಕೈಗೊಳ್ಳಲಿಲ್ಲ.
ಯಾಕೆ ಸಂಬಂಧ ಹದಗೆಟ್ಟಿದ್ದು..?
ಟ್ರಂಪ್ ಅವರ ಈ ಕರೆಗೆ ಮೋದಿ ಕೋಪಗೊಂಡಿದ್ದಾರೆ. ಭಾರತ - ಪಾಕಿಸ್ತಾನ ಕದನ ವಿರಾಮಕ್ಕೂ ಅಮೆರಿಕಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಪ್ರಧಾನಿ ಮೋದಿಯವರ ಈ ಮಾತುಗಳನ್ನು ಟ್ರಂಪ್ ನಿರ್ಲಕ್ಷಿಸಿದ್ದಾರೆ. ಟ್ರಂಪ್ ಅವರನ್ನು ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡದಿರುವುದು ಅಮೆರಿಕಾದ ಅಧ್ಯಕ್ಷರಿಗೆ ಬೇಸರ ತರಿಸಿದೆ. ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಯುತ್ತಿರುವ ಸಮಯದಲ್ಲಿ ಇದೆಲ್ಲ ಸಂಭವಿಸಿದೆ.
ಇದನ್ನೂ ಓದಿ:7 ವರ್ಷಗಳ ಬಳಿಕ ಪ್ರಧಾನಿ ಮೋದಿ ಚೀನಾ ಭೇಟಿ.. ಹೇಗಿತ್ತು ಸ್ವಾಗತ..? Photos
ಜೂನ್‌ನಲ್ಲಿ ಪ್ರಧಾನಿಗೆ ಕರೆ ಮಾಡಿದ ಕೆಲವೇ ವಾರಗಳಲ್ಲಿ ಟ್ರಂಪ್ ಭಾರತದ ಮೇಲೆ ಶೇಕಡಾ 25 ರಷ್ಟು ಸುಂಕ ಘೋಷಿಸಿದರು. ಕೆಲವು ದಿನಗಳ ನಂತರ ರಷ್ಯಾ ಜೊತೆ ಭಾರತ ತೈಲ ಒಪ್ಪಂದ ಮಾಡಿಕೊಂಡಾಗ ಮತ್ತೆ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕ ವಿಧಿಸಿದರು. ಆ ಮೂಲಕ ಟ್ರಂಪ್ ವಿಧಿಸಿದ ಸುಂಕದ ಮೊತ್ತ 50ಕ್ಕೆ ಏರಿಕೆ ಆಗಿದೆ. ಜೂನ್ 17 ರಂದು ನಡೆದ ದೂರವಾಣಿ ಸಂಭಾಷಣೆಯ ನಂತರ ಇಬ್ಬರು ನಾಯಕರ ಮಧ್ಯೆ ಯಾವುದೇ ಸಂಭಾಷಣೆ ನಡೆದಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: ಪುಟಿನ್ ಭೇಟಿಗೂ ಮುನ್ನ ಉಕ್ರೇನ್ ಜೊತೆ ಮೋದಿ ಮಾತು -ಭಾರತ ಕೊಟ್ಟ ಭರವಸೆಯೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ