43 ವರ್ಷಕ್ಕೆ ಪ್ರಶಾಂತ್ ತಮಾಂಗ್ ಹಠಾತ್ ನಿಧನ.. ಕಾನ್​ಸ್ಟೇಬಲ್ ಆಗಿದ್ದ ಇವರು ಜನಪ್ರಿಯತೆ ಗಳಿಸಿದ್ದೇಗೆ?

ತಮ್ಮ ಕಂಠಸಿರಿಯಿಂದಲೇ ಮೋಡಿ ಮಾಡಿದ್ದ ಇಂಡಿಯನ್ ಐಡಲ್ 3 ( Indian Idol 3) ವಿಜೇತ ಪ್ರಶಾಂತ್ ತಮಾಂಗ್​ (Prashant Tamang) ಅವರು ತಮ್ಮ 43 ನೇ ವಯಸ್ಸಿನಲ್ಲಿ ಹೃದಯ ಸ್ತಂಭನದಿಂದಾಗಿ (cardiac arrest) ನಿಧನರಾಗಿದ್ದಾರೆ. ಪ್ರಶಾಂತ್ ತಮಾಂಗ್ ಅವರು ಪತ್ನಿ ಮತ್ತು ಚಿಕ್ಕ ಮಗಳನ್ನು ಅಗಲಿದ್ದಾರೆ.

author-image
Ganesh Kerekuli
Prashant Tamang
Advertisment

ತಮ್ಮ ಕಂಠಸಿರಿಯಿಂದಲೇ ಮೋಡಿ ಮಾಡಿದ್ದ ಇಂಡಿಯನ್ ಐಡಲ್ 3 ( Indian Idol 3) ವಿಜೇತ ಪ್ರಶಾಂತ್ ತಮಾಂಗ್​ (Prashant Tamang) ಅವರು ತಮ್ಮ 43 ನೇ ವಯಸ್ಸಿನಲ್ಲಿ  ಹೃದಯ ಸ್ತಂಭನದಿಂದಾಗಿ (cardiac arrest) ನಿಧನರಾಗಿದ್ದಾರೆ. ಪ್ರಶಾಂತ್ ತಮಾಂಗ್ ಅವರು ಪತ್ನಿ ಮತ್ತು ಚಿಕ್ಕ ಮಗಳನ್ನು ಅಗಲಿದ್ದಾರೆ.

ಪ್ರಶಾಂತ್ ತಮಾಂಗ್​​ಗೆ ಕೇವಲ 43 ವರ್ಷ. ಇಂದು ಬೆಳಗ್ಗೆ ಹಠಾತ್ ನಿಧನರಾಗಿದ್ದಾರೆ. ದುರಂತ ಅಂತ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಸ್ನೇಹಿತ ಭಾವೇನ್ ಧನಕ್, ಇಂದು ಬೆಳಗ್ಗೆ ನಮ್ಮನ್ನ ಅಗಲಿದ್ದಾರೆ. ಕಾರ್ಡಿಯಾಕ್ ಅರೆಸ್ಟ್​ ಎಂದು ಹೇಳಲಾಗಿದ್ದು, ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಾವು ಅಂತ್ಯಕ್ರಿಯೆಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ. 

ಇದನ್ನೂ ಓದಿ: ದೈವದ ಮೊರೆ ಹೋದ ಸಿಂಪಲ್​ ಸ್ಟಾರ್​ .. ಹೊಸ ಸಿನಿಮಾ ಮಾಡ್ತಾರಂತೆ ಶೆಟ್ರು!

Prashant Tamang (1)

‘ನಮ್ಮ ಇಂಡಿಯಾ ಐಡಲ್ ಸ್ಟಿಂಟ್’ ಸಮಯದಲ್ಲಿ ನಾವು ರೂಮ್‌ಮೇಟ್‌ಗಳಾಗಿದ್ದೇವು. ಅವರೊಬ್ಬ ಒಳ್ಳೆಯ ವ್ಯಕ್ತಿಯಾಗಿದ್ದರು. ನಾವೆಲ್ಲರೂ ಅವರನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತೇವೆ. ಅವರು ನಿಜವಾಗಿಯೂ ಒಳ್ಳೆಯ ವ್ಯಕ್ತಿಯಾಗಿದ್ದರು. ಅವರ ಅಗಲಿಗೆ ನಮಗೆ ಆಘಾತವನ್ನುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಎಕ್ಸ್‌ನಲ್ಲಿ (ಟ್ವಿಟರ್) ಪೋಸ್ಟ್ ಮುಖಾಂತರ ಬೇಸರ ವ್ಯಕ್ತಪಡಿಸಿದ್ದಾರೆ. ‘ಇಂಡಿಯನ್ ಐಡಲ್ ಖ್ಯಾತಿಯ ಜನಪ್ರಿಯ ಗಾಯಕ ಮತ್ತು ರಾಷ್ಟ್ರೀಯ ಖ್ಯಾತಿಯ ಕಲಾವಿದ ಪ್ರಶಾಂತ್ ತಮಾಂಗ್ ಅವರ ಹಠಾತ್ ಮತ್ತು ಅಕಾಲಿಕ ನಿಧನದಿಂದ ದುಃಖವಾಗಿದೆ. ನಮ್ಮ ಡಾರ್ಜಿಲಿಂಗ್ ಬೆಟ್ಟಗಳಲ್ಲಿ ಅವರ ಬೇರುಗಳು ಮತ್ತು ಕೋಲ್ಕತ್ತಾ ಪೊಲೀಸರೊಂದಿಗೆ ಒಂದು ಬಾರಿಯ ಒಡನಾಟವು ಬಂಗಾಳದಲ್ಲಿ ನಮಗೆ ವಿಶೇಷವಾಗಿ ಪ್ರೀತಿಸುವಂತೆ ಮಾಡಿತು. ಅವರ ಕುಟುಂಬಕ್ಕೆ ಹಾಗೂ ಅನುಯಾಯಿಗಳಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲೆಂದು ಸಂತಾಪ ಸೂಚಿಸುತ್ತೆನೆ. ಅಂತ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೋಲ್ಕತ್ತಾ ಪೊಲೀಸ್​ನಿಂದ ಇಂಡಿಯನ್ ಐಡಲ್ 

ಪ್ರಶಾಂತ್ ತಮಾಂಗ್ ಅವರು 2007 ರಲ್ಲಿ ಕೋಲ್ಕತ್ತಾ ಪೊಲೀಸ್‌ ಇಲಾಖೆಯ ಕಾನ್‌ಸ್ಟೆಬಲ್ ಆಗಿದ್ದರು. ಈ ಸಮಯದಲ್ಲೆ ‘ಇಂಡಿಯನ್ ಐಡಲ್ ಸೀಸನ್ 3’ ಗೆ ಆಡಿಷನ್ ಕೊಟ್ಟರು. ಆವಾಗಲೇ ಅವರು ಇಡೀ ದೇಶಕ್ಕೆ ಫೇಮಸ್ ಆಗಿದ್ದು, ಇಂಡಸ್ಟ್ರಿಯಲ್ಲಿ ಅಷ್ಟೊಂದು ಸಪೋರ್ಟ್ ಇರಲಿಲ್ಲ. ಆದರೂ ತಮ್ಮ ಪ್ರಾಮಾಣಿಕತೆ ಮತ್ತು ಟ್ಯಾಲೆಂಟ್ ನೋಡಿ ಜನ ಫಿದಾ ಆಗಿದ್ದರು. ಅದರಲ್ಲೂ ವಿಶೇಷವಾಗಿ ಡಾರ್ಜಿಲಿಂಗ್ ಮತ್ತು ಈಶಾನ್ಯ ಭಾರತದ ಜನರ ಬೆಂಬಲ ಅವರಿಗೆ ಆನೆಬಲ ನೀಡಿತ್ತು. 

ಇದನ್ನೂ ಓದಿ: ‘ಕೊಹ್ಲಿ ಶಿಷ್ಯ’ನನ್ನ ಆರ್​​ಸಿಬಿ ಕೈ ಬಿಟ್ಟಿದ್ದು ಇದೇ ಕಾರಣಕ್ಕಾ? ಏನಿದು ಸ್ವಸ್ತಿಕ್ ಚಿಕಾರ್​..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  

Prashant Tamang
Advertisment