/newsfirstlive-kannada/media/media_files/2025/08/13/rahul-gandi-2025-08-13-14-52-35.jpg)
ಮನೇಕಾ ಗಾಂಧಿ ಹಾಗೂ ರಾಹುಲ್ ಗಾಂಧಿ
ಬೀದಿ ನಾಯಿ ಸಮಸ್ಯೆಯು ವಿಭಜನೆಗೊಂಡ ಗಾಂಧಿ ಕುಟುಂಬವನ್ನು ಒಂದು ಮಾಡಿದೆ. ರಾಜಕೀಯ ಹಾಗೂ ವೈಯಕ್ತಿಕವಾಗಿ ಬೇರ್ಪಟ್ಟಿದ್ದ ಗಾಂಧಿ ಕುಟುಂಬ ಈ ವಿಚಾರಕ್ಕೆ ಒಂದಾಗಿದೆ. ರಾಷ್ಟ್ರ ರಾಜಧಾನಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳನ್ನು ಹಿಡಿದು ಆಶ್ರಯಕ್ಕೆ ಸ್ಥಳಾಂತರಿಸುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಆದ್ರೆ, ಸುಪ್ರೀಂಕೋರ್ಟ್ ಆದೇಶವನ್ನು ನೆಹರು- ಗಾಂಧಿ ಕುಟುಂಬ ವಿರೋಧಿಸಿದೆ.
ಇದನ್ನೂ ಓದಿ: ‘ನಾವಿಬ್ಬರು ಮ್ಯೂಚುಯಲ್ ಬ್ರೇಕಪ್ ಆಗಿದ್ದೇವೆ..’ ಭರ್ಜರಿ ಬ್ಯಾಚ್ಯುಲರ್ಸ್ ವಿನ್ನರ್ ಸುನಿಲ್, ಅಮೃತಾ ಹೇಳಿದ್ದೇನು
ಕೇಂದ್ರದ ಮಾಜಿ ಸಚಿವೆ ಮತ್ತು ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ, ಪುತ್ರ ವರುಣ್ ಗಾಂಧಿ ಮತ್ತು ಅವರ ಸೋದರ ಸಂಬಂಧಿಗಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಎಲ್ಲರೂ ದೆಹಲಿ-ಎನ್‌ಸಿಆರ್‌ನಲ್ಲಿ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಸಾರ್ವಜನಿಕವಾಗಿ ವಿರೋಧಿಸಿದ್ದಾರೆ.
ರಾಹುಲ್ ಗಾಂಧಿ ಎರಡು ಸಾಕುಪ್ರಾಣಿಗಳನ್ನು ದತ್ತು ಪಡೆಯಲು ಗೋವಾಕ್ಕೆ ಪ್ರಯಾಣ ಬೆಳೆಸಿದರು, ಅದರಲ್ಲಿ ಒಂದನ್ನು ತಾಯಿ ಸೋನಿಯಾ ಗಾಂಧಿಗೆ ಉಡುಗೊರೆಯಾಗಿ ನೀಡಿದರು. ಪ್ರಿಯಾಂಕಾ ವಾದ್ರಾ ಮತ್ತು ಅವರ ಪತಿ ರಾಬರ್ಟ್ ವಾದ್ರಾ, ಗೋಲ್ಡನ್ ರಿಟ್ರೀವರ್‌ಗಳ ದೊಡ್ಡ ಕುಟುಂಬಕ್ಕೆ ಹೆಸರುವಾಸಿಯಾಗಿದ್ದಾರೆ. ಇಂದಿರಾ ಗಾಂಧಿಯವರ ಮರಣದ ನಂತರ ಕುಟುಂಬವು ಬೇರ್ಪಟ್ಟಿತ್ತು. ಆದ್ರೆ, ಈಗ ನಾಯಿ ವಿಚಾರಕ್ಕೆ ಸಾರ್ವಜನಿಕವಾಗಿ ಒಗ್ಗಟ್ಟಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ