/newsfirstlive-kannada/media/media_files/2025/11/27/highway-2025-11-27-11-46-02.jpg)
ರಾಜಸ್ಥಾನದಲ್ಲಿರುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಕಾರ್ಯನಿರ್ವಹಿಸ್ತಿರುವ ಮದ್ಯದಂಗಡಿಗಳ ಮೇಲೆ ಹೈಕೋರ್ಟ್ ಕಠಿಣ ನಿಲುವು ತೆಗೆದುಕೊಂಡಿದೆ. ನ್ಯಾಯಮೂರ್ತಿ ಡಾ. ಪುಷ್ಪೇಂದ್ರ ಸಿಂಗ್ ಭಾಟಿ ಮತ್ತು ನ್ಯಾಯಮೂರ್ತಿ ಸಂಜಿತ್ ಪುರೋಹಿತ್ ಅವರ ಪೀಠವು ಹೆದ್ದಾರಿಯಿಂದ 500 ಮೀಟರ್‌ಗಳೊಳಗಿನ ಎಲ್ಲಾ ಮದ್ಯದಂಗಡಿಗಳನ್ನ ತೆರವು ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಹೈಕೋರ್ಟ್​ ಆದೇಶದಿಂದ ಒಟ್ಟು 1,102 ಮದ್ಯದಂಗಡಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದ್ಯದಂಗಡಿಗಳನ್ನು ತೆಗೆದುಹಾಕಿ. ಇಲ್ಲ, ಅಲ್ಲಿಂದ ಸ್ಥಳಾಂತ ಮಾಡುವಂತೆ ಕೋರ್ಟ್, ರಾಜಸ್ಥಾನ ಸರ್ಕಾರಕ್ಕೆ ಎರಡು ತಿಂಗಳ ಕಾಲಾವಕಾಶ ನೀಡಿದೆ.
ಇದನ್ನೂ ಓದಿ:ಕೆಂಪು ಸುಂದರಿ ಬಲು ದುಬಾರಿ..! ಬೆಂಗಳೂರಲ್ಲಿ ಟೊಮ್ಯಾಟೋಗೆ ಭಾರೀ ಡಿಮ್ಯಾಂಡ್!
ಹೆದ್ದಾರಿಯಲ್ಲಿರುವ ಈ 1,102 ಅಂಗಡಿಗಳು ನಗರ ಅಥವಾ ಪುರಸಭೆಯ ಪ್ರದೇಶಗಳಿಗೆ ಸೇರುತ್ತವೆ. ಇವು ಸುಮಾರು 2,221.78 ಕೋಟಿ ಆದಾಯ ಗಳಿಸುತ್ತವೆ ಎಂದು ರಾಜ್ಯ ಸರ್ಕಾರ ಕೋರ್ಟ್​ನಲ್ಲಿ ವಾದಿಸಿತ್ತು. ಹೈಕೋರ್ಟ್ ಈ ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಆದಾಯದ ನೆಪದಲ್ಲಿ ಸುಪ್ರೀಂ ಕೋರ್ಟ್ ಆದೇಶಗಳನ್ನು ಉಲ್ಲಂಘಿಸಲು ಆಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಹೆದ್ದಾರಿಯನ್ನು ‘ಮದ್ಯ ಸ್ನೇಹಿ ಕಾರಿಡಾರ್’ ಆಗಿ ಪರಿವರ್ತಿಸಲು ಸರ್ಕಾರ ‘ಪುರಸಭೆ ಪ್ರದೇಶ’ ವರ್ಗೀಕರಣವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಕೋರ್ಟ್ ಗರಂ ಆಗಿದೆ.
ಅಪಘಾತಗಳ ಬಗ್ಗೆ ಕಳವಳ
ರಾಜಸ್ಥಾನದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಬಗ್ಗೆ ನ್ಯಾಯಾಲಯವು ತೀವ್ರ ಕಳವಳ ವ್ಯಕ್ತಪಡಿಸಿದೆ. ಕೇವಲ 2 ದಿನಗಳಲ್ಲಿ 28 ಜನರ ಪ್ರಾಣವನ್ನು ಬಲಿ ಪಡೆದ ಹರ್ಮರಾ (ಜೈಪುರ) ಮತ್ತು ಫಲೋಡಿಯಲ್ಲಿ ಸಂಭವಿಸಿದ ಭೀಕರ ಅಪಘಾತಗಳನ್ನು ಅದು ಉಲ್ಲೇಖಿಸಿದೆ. ಕುಡಿದು ವಾಹನ ಚಲಾಯಿಸುವುದು ಮತ್ತು ಅತಿ ವೇಗದ ಚಾಲನೆ ಅಪಘಾತಗಳಿಗೆ ಪ್ರಮುಖ ಕಾರಣ. 2025 ರಲ್ಲಿ ಕುಡಿದು ವಾಹನ ಚಲಾಯಿಸುವ ಪ್ರಕರಣಗಳು ಶೇಕಡಾ 8 ರಷ್ಟು ಹೆಚ್ಚಾಗಿದೆ ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ: ವಿದ್ಯುತ್ ಶಾಕ್ ಹೊಡೆದು ಜೀವಬಿಟ್ಟ ಮೇಘನಾ.. ಹುಬ್ಬಳ್ಳಿಯಲ್ಲಿ ದಾರುಣ ಘಟನೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us