Advertisment

ಯಾವುದೇ ಕೆಲಸ ಇಲ್ಲ, ಆದರೂ ಹೆಂಡತಿಗೆ 37.54 ಲಕ್ಷ ರೂ ಸಂಬಳ ಕೊಡಿಸಿದ ಗಂಡ.. ಹೇಗೆ?

ಎರಡು ವರ್ಷದಲ್ಲಿ ಪೂನಮ್ ಒಂದು ಬಾರಿಯೂ ಆ ಕಂಪನಿಗೆ ಭೇಟಿಯೇ ನೀಡಿಲ್ಲ. ಉದ್ಯೋಗಿ ಎಂದು ತೋರಿಸಲು ಪ್ರದ್ಯುಮನ್ ದೀಕ್ಷಿತ್, ಫೇಕ್​ ಹಾಜರಾತಿ ಕ್ರಿಯೇಟ್ ಮಾಡಿದ್ದನು. ಒಂದೇ ಬಾರಿಗೆ 2 ಕಂಪನಿಗಳಿಂದ ಸ್ಯಾಲರಿ ಪಡೆದಿದ್ದಾಳೆ.

author-image
Bhimappa
RR_WIFE_HuSBAND
Advertisment

ಜೈಪುರ್: ಸರ್ಕಾರಿ ಅಧಿಕಾರಿಗಳ ಕೆಲಸ ಹೇಗಿರುತ್ತೆ ಎಂದರೆ ಕೋತಿ ಕೈಯಲ್ಲಿ ಬೆಣ್ಣೆ ಇದ್ದಂಗೆ. ಹಣ, ದುಡ್ಡು, ಕಾಸು ಅಂತರಲ್ಲ, ಅದು ಇದೆ ಎನ್ನುವುದು ಗೊತ್ತಾದರೆ ಸಾಕು ಹೇಗದರೂ ಮಾಡಿ ನುಂಗೋಕೆ ನೋಡ್ತಾರೆ. ಇದೇ ರೀತಿ ಇಲ್ಲೊಬ್ಬ ಸರ್ಕಾರಿ ಅಧಿಕಾರಿ ತನ್ನ ಹೆಂಡತಿ ಯಾವ ಕೆಲಸ ಮಾಡದಿದ್ದರೂ ಉದ್ಯೋಗಿ ಎಂದು ಸೃಷ್ಟಿ ಮಾಡಿ 37.54 ಲಕ್ಷ ರೂಪಾಯಿ ಸಂಬಳ ಕೊಡಿಸಿದ್ದಾನೆ. 

Advertisment

ರಾಜಸ್ಥಾನದ ರಾಜ್‌ಕಾಂಪ್ ಇನ್ಫೋ ಸರ್ವೀಸಸ್‌ನ ಮಾಹಿತಿ ತಂತ್ರಜ್ಞಾನ ಇಲಾಖೆಯ ಜಂಟಿ ನಿರ್ದೇಶಕ ಪ್ರದ್ಯುಮನ್ ದೀಕ್ಷಿತ್ ಇವರು ಕಾನೂನು ಬಾಹಿರವಾಗಿ ತನ್ನ ಹೆಂಡತಿ ಪೂನಮ್​ ದೀಕ್ಷಿತ್​ಗೆ ತಿಂಗಳ ಸಂಬಳ ಕೊಡಿಸಿದ್ದಾನೆ. ಅದು ಲಕ್ಷ ಅಲ್ಲ, ಎರಡು ಲಕ್ಷ ಅಲ್ಲ ಬರೋಬ್ಬರಿ 2 ವರ್ಷದಲ್ಲಿ 37.54 ಲಕ್ಷ ರೂಪಾಯಿ ಸಂಬಳ. ಸರ್ಕಾರಿ ಆಫೀಸರ್ ಅಂತಲ್ಲ, ಖಾಸಗಿ ಕಂಪನಿ ಉದ್ಯೋಗಿ ಎಂದು ಪತ್ನಿಗೆ ಕಾನೂನು ಬಾಹಿರವಾಗಿ ಮಾಸಿಕ ಸಂಬಳ ಹಾಕಿಸಿದ್ದಾನೆ ಎನ್ನಲಾಗಿದೆ.

ರಾಜಸ್ಥಾನ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದಾಗ ಈ ಬಗ್ಗೆ ಸಂಪೂರ್ಣ ಮಾಹಿತಿ ಬಹಿರಂಗಗೊಂಡಿದೆ. ಕಳೆದ ವರ್ಷ ಸೆಪ್ಟೆಂಬರ್ 6 ರಂದು ಹೈಕೋರ್ಟ್ ನೀಡಿದ ಆದೇಶದ ಮೇರೆಗೆ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಈ ವರ್ಷ ಜುಲೈ 3 ರಂದು ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿತು. ಈ ವೇಳೆ ಎರಡು ಖಾಸಗಿ ಕಂಪನಿಗಳು ಸರ್ಕಾರಿ ಅಧಿಕಾರಿಯ ಪತ್ನಿ ಉದ್ಯೋಗಿ ಎಂದು ತಪ್ಪಾಗಿ ತೋರಿಸಿರುವುದು ಕಂಡು ಬಂದಿದೆ.  

ಮಾಹಿತಿ ತಂತ್ರಜ್ಞಾನ ಇಲಾಖೆಯ ಜಂಟಿ ನಿರ್ದೇಶಕ ಪ್ರದ್ಯುಮನ್ ದೀಕ್ಷಿತ್, ಈ ಹಿಂದೆ ಓರಿಯನ್‌ಪ್ರೊ ಸೊಲ್ಯೂಷನ್ಸ್ ಮತ್ತು ಟ್ರೀಜೆನ್ ಸಾಫ್ಟ್‌ವೇರ್ ಲಿಮಿಟೆಡ್ ಕಂಪನಿಗೆ ಸರ್ಕಾರಿ ಟೆಂಡರ್​ ಕೊಡಿಸಿದ್ದರು. ಇದಕ್ಕಾಗಿ ನನ್ನ ಹೆಂಡತಿಗೆ ಉದ್ಯೋಗ ಕೊಟ್ಟು, ಮಾಸಿಕ ಸಂಬಳ ನೀಡಬೇಕು ಎಂದು ಎರಡು ಕಂಪನಿಗಳಿಗೆ ಹೇಳಿದ್ದರು.

Advertisment

ಇದನ್ನೂ ಓದಿ:ನನ್ನ ತಲೆಗೆ ಕಟ್ಟಿದ್ರು.. ಯಾವಾತ್ತೂ ಕಣ್ಣಲ್ಲಿ ನೀರಾಕಿದವನಲ್ಲ, ನಾನು ಹೇಡಿ ಅಲ್ಲ; ನಿಖಿಲ್ ಕುಮಾರಸ್ವಾಮಿ ಗರಂ

JOB_NEWS (2)

ಎಸಿಬಿ ತನಿಖೆಯಲ್ಲಿ ಬಹಿರಂಗವಾಗಿರುವುದು ಏನು ಎಂದರೆ, ಈ ಎರಡು ಖಾಸಗಿ ಕಂಪನಿಗಳು ಪೂನಮ್ ದೀಕ್ಷಿತ್​ ಉದ್ಯೋಗಿ ಅಲ್ಲದಿದ್ದರೂ ಆಕೆಯ 5 ವೈಯಕ್ತಿಕ ಬ್ಯಾಂಕ್​ ಅಕೌಂಟ್​ಗೆ ಹಣವನ್ನು ಟ್ರಾನ್ಸಫರ್ ಮಾಡಿರುವುದು ಪತ್ತೆ ಆಗಿದೆ. 2019 ಜನವರಿಯಿಂದ 2020 ಸೆಪ್ಟೆಂಬರ್​ವರೆಗೆ ಸರ್ಕಾರಿ ಅಧಿಕಾರಿ ಪತ್ನಿ ಪೂನಮ್​ಗೆ ಒಟ್ಟು 37,54,405 ರೂಪಾಯಿ ಹಾಕಲಾಗಿದೆ. ಇದನ್ನು ಮಾಸಿಕ ಸಂಬಳ ಎಂದು ತೋರಿಸಲಾಗಿದೆ. 

ಆದರೆ ಈ ಎರಡು ವರ್ಷದಲ್ಲಿ ಪೂನಮ್ ಒಂದು ಬಾರಿಯೂ ಆ ಕಂಪನಿಗೆ ಭೇಟಿಯೇ ನೀಡಿಲ್ಲ. ಉದ್ಯೋಗಿ ಎಂದು ತೋರಿಸಲು ಪ್ರದ್ಯುಮನ್ ದೀಕ್ಷಿತ್, ಫೇಕ್​ ಹಾಜರಾತಿ ಕ್ರಿಯೇಟ್ ಮಾಡಿದ್ದನು. ಒಂದೇ ಬಾರಿಗೆ 2 ಕಂಪನಿಗಳಿಂದ ಸ್ಯಾಲರಿ ಪಡೆದಿದ್ದಾಳೆ. ಇದು ಅಲ್ಲದೇ ಟ್ರೀಜೆನ್ ಸಾಫ್ಟ್​ವೇರ್​ ಲಿಮಿಟೆಡ್​ನಿಂದಲೂ ಪೇಮೆಂಟ್ ಪಡೆದಿರುವುದು ಕೂಡ ತನಿಖೆಯಿಂದ ಬೆಳಕಿಗೆ ಬಂದಿದೆ. ಅಂದರೆ ಪ್ರದ್ಯುಮನ್ ತನ್ನ ಹೆಂಡತಿ ಖಾತೆಗೆ 1.6 ಲಕ್ಷ ರೂಪಾಯಿಗಳನ್ನು ಕಿಕ್​ಬ್ಯಾಕ್​ ಆಗಿ ಹಣ ಜಮಾ ಮಾಡುತ್ತಿದ್ದನು. ಸದ್ಯ ಈ ಬಗ್ಗೆ ಇನ್ನು ತನಿಖೆ ನಡೆಯುತ್ತಿದೆ.   

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News Rajasthan
Advertisment
Advertisment
Advertisment