Advertisment

ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ.. CM ಸ್ಥಾನ ತೊರೆಯಲು ಮುಂದಾದ ನಿತೀಶ್ ಕುಮಾರ್?

ಬಿಹಾರ ರಾಜಕೀಯದಲ್ಲಿ (Bihar Politics) ಮತ್ತೊಮ್ಮೆ ಭಾರೀ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ (CM Nitish Kumar) ಅವರು ರಾಜ್ಯಸಭೆ ಪ್ರವೇಶಿಸಲು ಸಜ್ಜಾಗಿದ್ದು, ಶೀಘ್ರದಲ್ಲೇ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ದಟ್ಟವಾಗಿದೆ.

author-image
Ganesh Kerekuli
nitish kumar
Advertisment
  • ಸಕ್ರಿಯ ರಾಜಕಾರಣಕ್ಕೆ ನಿತೀಶ್ ಪುತ್ರ ನಿಶಾಂತ್ ಎಂಟ್ರಿ
  • ಸಿಎಂ ಸ್ಥಾನಕ್ಕೆ ಬಿಜೆಪಿ ಪಟ್ಟು? ಪುತ್ರನಿಗೆ ಡಿಸಿಎಂ ಪಟ್ಟ?
  • ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರ ಆಗ್ತಾರೆ?

ಬಿಹಾರ ರಾಜಕೀಯದಲ್ಲಿ (Bihar Politics) ಮತ್ತೊಮ್ಮೆ ಭಾರೀ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ (CM Nitish Kumar) ಅವರು ರಾಜ್ಯಸಭೆ ಪ್ರವೇಶಿಸಲು ಸಜ್ಜಾಗಿದ್ದು, ಶೀಘ್ರದಲ್ಲೇ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ದಟ್ಟವಾಗಿದೆ. ಇದರೊಂದಿಗೆ ಬಿಹಾರದ ಮುಂದಿನ ಆಡಳಿತದ ಚುಕ್ಕಾಣಿ ಯಾರ ಕೈ ಸೇರಲಿದೆ ಎಂಬ ತೀವ್ರ ಕುತೂಹಲ ರಾಷ್ಟ್ರ ರಾಜಕಾರಣದಲ್ಲಿ ಮೂಡಿದೆ.

Advertisment

ನಾಮಪತ್ರ ಸಲ್ಲಿಕೆಗೆ ಬಹುತೇಕ ಸಿದ್ಧತೆ

ಜೆಡಿಯು (JDU) ಮೂಲಗಳ ಪ್ರಕಾರ, ನಿತೀಶ್ ಕುಮಾರ್ ಅವರ ರಾಜ್ಯಸಭೆ ನಾಮಪತ್ರ ಸಲ್ಲಿಕೆಗೆ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿವೆ. ನಾಮಪತ್ರ ಸಿದ್ಧವಾಗಿದ್ದು, ಕೇವಲ ಮುಖ್ಯಮಂತ್ರಿಗಳ ಸಹಿಯಷ್ಟೇ ಬಾಕಿ ಇದೆ. ಮಾರ್ಚ್ 5 ರಂದು ಅವರು ಅಧಿಕೃತವಾಗಿ ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದೆ. ವಿಶೇಷವೆಂದರೆ, ನಿತೀಶ್ ಕುಮಾರ್ ಅವರು ಇತ್ತೀಚೆಗಷ್ಟೇ (ಮಾರ್ಚ್ 1ರಂದು) ತಮ್ಮ 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

ಇದನ್ನೂ ಓದಿ:ರಾಜ್ಯದಲ್ಲಿ ವಾಣಿಜ್ಯ, ಕೈಗಾರಿಕೆ ವಿದ್ಯುತ್ ದರ ಹೆಚ್ಚಳ: ಕೃಷಿ ಪಂಪ್ ಸೆಟ್ ವಿದ್ಯುತ್ ದರ ಕಡಿತ

ಮಾರ್ಚ್ 16 ರಂದು ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೆ ಮಾತ್ರ ಅವರು ಸಿಎಂ ಆಗಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ. ಆ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ. ಅವರು ಮೇಲ್ಮನೆಗೆ ತೆರಳಿದ್ದೇ ಆದಲ್ಲಿ, ಬಿಹಾರದಲ್ಲಿ ದೊಡ್ಡ ಮಟ್ಟದ ರಾಜಕೀಯ ದಲಾವಣೆಯಾಗಲಿದೆ.

Advertisment

ಜೆಡಿಯು ಪಾಳೆಯದಲ್ಲಿ ಬಿರುಸಿನ ಚಟುವಟಿಕೆ

ಈ ಹಠಾತ್ ಬೆಳವಣಿಗೆಗಳ ಬೆನ್ನಲ್ಲೇ ಜನತಾದಳ ಯುನೈಟೆಡ್ (JDU) ಪಾಳೆಯದಲ್ಲಿ ಸರಣಿ ಸಭೆಗಳು ನಡೆಯುತ್ತಿವೆ. ಹಿರಿಯ ನಾಯಕ ಹಾಗೂ ಸಚಿವ ವಿಜೇಂದ್ರ ಪ್ರಸಾದ್ ಯಾದವ್, ಸಚಿವ ಅಶೋಕ್ ಚೌಧರಿ ಹಾಗೂ ಜೆಡಿಯು ರಾಷ್ಟ್ರೀಯ ಕಾರ್ಯಾಧ್ಯಕ್ಷ ಸಂಜಯ್ ಝಾ ಅವರು ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಇದು ಪಕ್ಷದ ಮುಂದಿನ ರಾಜಕೀಯ ತಂತ್ರಗಾರಿಕೆಯ ಭಾಗ ಎಂದು ಮೂಲಗಳು ತಿಳಿಸಿವೆ.

ಸಿಎಂ ಸ್ಥಾನಕ್ಕೆ ಬಿಜೆಪಿ ಪಟ್ಟು? ಪುತ್ರನಿಗೆ ಡಿಸಿಎಂ ಪಟ್ಟ?

ನಿತೀಶ್ ಕುಮಾರ್ ಅವರು ಮೇಲ್ಮನೆಗೆ ಹೋದರೆ, ಬಿಹಾರದ ನೂತನ ಸಿಎಂ ಗಾದಿಯನ್ನು ತಮಗೆ ಬಿಟ್ಟುಕೊಡಬೇಕೆಂದು ಮಿತ್ರಪಕ್ಷ ಬಿಜೆಪಿ (BJP) ಪಟ್ಟು ಹಿಡಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನೊಂದೆಡೆ, ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ (Nishant Kumar) ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡಲು ವೇದಿಕೆ ಸಿದ್ಧವಾಗುತ್ತಿದೆ. ಅವರನ್ನು ಬಿಹಾರದ ರಾಜಕೀಯ ಭೂಪಟಕ್ಕೆ ಅಧಿಕೃತವಾಗಿ ಪರಿಚಯಿಸಲು ಜೆಡಿಯು ತಯಾರಿ ನಡೆಸಿದ್ದು, ಉಪಮುಖ್ಯಮಂತ್ರಿ (Deputy CM) ಸ್ಥಾನಕ್ಕೆ ತರುವ ಬಗ್ಗೆಯೂ ತೀವ್ರ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಇನ್ನಷ್ಟೇ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

ನಿತೀಶ್ ಕುಮಾರ್ ಅವರು ಈಗಾಗಲೇ ಬಿಹಾರ ವಿಧಾನಸಭೆ, ಬಿಹಾರ ವಿಧಾನ ಪರಿಷತ್ ಹಾಗೂ ಲೋಕಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಅವರು ರಾಜ್ಯಸಭೆಗೆ ಆಯ್ಕೆಯಾದರೆ, ಸಂಸತ್ತಿನ ಉಭಯ ಸದನಗಳು (ಲೋಕಸಭೆ, ರಾಜ್ಯಸಭೆ) ಹಾಗೂ ರಾಜ್ಯದ ಉಭಯ ಸದನಗಳ (ವಿಧಾನಸಭೆ, ವಿಧಾನ ಪರಿಷತ್) ಸದಸ್ಯರಾದ ಅಪರೂಪದ ಹಾಗೂ ವಿಶಿಷ್ಟ ರಾಜಕೀಯ ಮೈಲಿಗಲ್ಲನ್ನು ತಲುಪಿದ ಕೆಲವೇ ನಾಯಕರ ಸಾಲಿಗೆ ಸೇರ್ಪಡೆಯಾಗಲಿದ್ದಾರೆ.

Advertisment

ಇದನ್ನೂ ಓದಿ: ನಾಳಿನ ಪಂದ್ಯಕ್ಕೂ ಮುನ್ನವೇ ಗಂಭೀರ್ ಗರಂ.. ಕ್ಯುರೇಟರ್ ಜೊತೆ ವಾಗ್ವಾದ, ಕಾರಣವೇನು?

ಸದ್ಯಕ್ಕೆ ಜೆಡಿಯು ವತಿಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಆದರೆ, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಹಾಗೂ ತೆರೆಮರೆಯ ಸಭೆಗಳನ್ನು ಗಮನಿಸಿದರೆ, ಬಿಹಾರವು ಮುಂಬರುವ ದಿನಗಳಲ್ಲಿ ನಿರ್ಣಾಯಕ ರಾಜಕೀಯ ಬದಲಾವಣೆಗೆ ಸಾಕ್ಷಿಯಾಗುವುದು ಬಹುತೇಕ ಖಚಿತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Nitish Kumar
Advertisment
Advertisment
Advertisment