Advertisment

ನಾಳಿನ ಪಂದ್ಯಕ್ಕೂ ಮುನ್ನವೇ ಗಂಭೀರ್ ಗರಂ.. ಕ್ಯುರೇಟರ್ ಜೊತೆ ವಾಗ್ವಾದ, ಕಾರಣವೇನು?

ಐಸಿಸಿ ಟಿ20 ವಿಶ್ವಕಪ್ 2026ರ (T20 World Cup 2026) ಎರಡನೇ ಸೆಮಿಫೈನಲ್ ಪಂದ್ಯ ಗುರುವಾರ (ಮಾರ್ಚ್ 5) ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಫೈನಲ್ ಟಿಕೆಟ್‌ಗಾಗಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ (India vs England) ತಂಡಗಳು ಮುಖಾಮುಖಿಯಾಗಲಿವೆ.

author-image
Ganesh Kerekuli
gambhir (8)
Advertisment

ಐಸಿಸಿ ಟಿ20 ವಿಶ್ವಕಪ್ 2026ರ (T20 World Cup 2026) ಎರಡನೇ ಸೆಮಿಫೈನಲ್ ಪಂದ್ಯ ಗುರುವಾರ (ಮಾರ್ಚ್ 5) ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಫೈನಲ್ ಟಿಕೆಟ್‌ಗಾಗಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ (India vs England) ತಂಡಗಳು ಮುಖಾಮುಖಿಯಾಗಲಿವೆ. 

Advertisment

ಆದರೆ, ಈ ಮಹತ್ವದ ಪಂದ್ಯಕ್ಕೂ ಮುನ್ನವೇ ವಾಂಖೆಡೆಯ ‘ಪಿಚ್’ ವಿಚಾರವಾಗಿ ದೊಡ್ಡ ವಿವಾದವೊಂದು ಸೃಷ್ಟಿಯಾಗಿದೆ. ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಅವರು ಪಿಚ್ ಕ್ಯುರೇಟರ್ (Pitch Curator) ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾದ ಸುದ್ದಿಯೊಂದು ಭಾರೀ ಸಂಚಲನ ಮೂಡಿಸಿದೆ.

ಇದನ್ನೂ ಓದಿ: ಅಂತರ್ಜಾತಿ ಮದ್ವೆಗೆ ವಿರೋಧ.. ಸಿನಿಮಾ ಸ್ಟೈಲ್​ನಲ್ಲಿ ಯುವಕನಿಗೆ ಥಳಿಸಿ ಯುವತಿಯ ಎತ್ತಾಕೊಂಡು ಹೋದ ಪೋಷಕರು..

ಕ್ರಿಕೆಟ್‌ನಲ್ಲಿ ಯಾವುದೇ ಪ್ರಮುಖ ಪಂದ್ಯ ನಡೆಯುವ ಮುನ್ನ ಪಿಚ್‌ ಹೇಗಿದೆ ಎಂಬುದು ಸಹಜವಾಗಿಯೇ ಚರ್ಚೆಯ ವಿಷಯವಾಗಿರುತ್ತದೆ. ಅದರಲ್ಲೂ ಸೆಮಿಫೈನಲ್‌ನಂತಹ ಮಹತ್ವದ ಘಟ್ಟದಲ್ಲಿ ಇದು ಇನ್ನಷ್ಟು ಪ್ರಾಮುಖ್ಯತೆ ಪಡೆಯುತ್ತದೆ. ಇದೀಗ ಮುಂಬೈನ ವಾಂಖೆಡೆ ಪಿಚ್‌ ಅನ್ನು ನೋಡಿದ ಗೌತಮ್ ಗಂಭೀರ್ ಅಕ್ಷರಶಃ ಕೆಂಡಾಮಂಡಲರಾಗಿದ್ದಾರೆ ಎನ್ನಲಾಗಿದೆ.

Advertisment

ಗಂಭೀರ್ ಗರಂ ಆಗಿದ್ದೇಕೆ?

ಮಂಗಳವಾರ ತಡರಾತ್ರಿ ಟೀಮ್ ಇಂಡಿಯಾ ವಾಂಖೆಡೆ ಮೈದಾನದಲ್ಲಿ ಅಭ್ಯಾಸ (Practice Session) ನಡೆಸಿತು. ಈ ವೇಳೆ ತಂಡದೊಂದಿಗೆ ಉಪಸ್ಥಿತರಿದ್ದ ಗಂಭೀರ್, ಪಿಚ್ ಪರಿಶೀಲನೆ ನಡೆಸಿದ್ದಾರೆ. ಅಚ್ಚರಿಯೆಂದರೆ, ಬ್ಯಾಟಿಂಗ್‌ಗೆ ಸ್ವರ್ಗ ಎಂದೇ ಹೆಸರಾಗಿರುವ ವಾಂಖೆಡೆ ಟ್ರ್ಯಾಕ್ ಮೇಲೆ ದಟ್ಟವಾದ 'ಹಸಿರು ಹುಲ್ಲು' (Green Grass) ಬಿಡಲಾಗಿತ್ತು. ಈ ಮಟ್ಟಿಗಿನ ಹುಲ್ಲು ಟಿ20 ಕ್ರಿಕೆಟ್‌ಗೆ ಸರಿಹೊಂದುವುದಿಲ್ಲ ಎಂಬುದು ಗಂಭೀರ್ ಅವರ ಕೋಪಕ್ಕೆ ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ: ಇವತ್ತು ದಕ್ಷಿಣ ಆಫ್ರಿಕಾ ತಂಡಕ್ಕಿದೆ ಸೈಕಲಾಜಿಕಲ್ ಅಂಡ್ವಾಂಟೇಜ್.. ಹೇಗೆ ಗೊತ್ತಾ..?

ಪಿಚ್ ಮೇಲೆ ಇಷ್ಟೊಂದು ಹುಲ್ಲು ಬಿಟ್ಟಿರುವುದನ್ನು ಕಂಡು ಕೆರಳಿದ ಗೌತಮ್ ಗಂಭೀರ್, ನೇರವಾಗಿ ಪಿಚ್ ಕ್ಯುರೇಟರ್ ಬಳಿ ತೆರಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಯುರೇಟರ್ ಜೊತೆ ಗಂಭೀರ್ ಸೀರಿಯಸ್ ಆಗಿ ಚರ್ಚೆ ನಡೆಸುತ್ತಿರುವ, ಕೋಪದಿಂದ ಪ್ರತಿಕ್ರಿಯಿಸುತ್ತಿರುವ ದೃಶ್ಯಗಳು ಹಾಗೂ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

Advertisment

ಇಂಗ್ಲೆಂಡ್ ತಂಡಕ್ಕೆ ಲಾಭವಾಗಲಿದೆಯೇ?

ವಾಂಖೆಡೆಯ ಈ ಹಸಿರು ಪಿಚ್ ವೇಗದ ಬೌಲರ್‌ಗಳಿಗೆ (Fast Bowlers) ಹೆಚ್ಚಿನ ನೆರವು ನೀಡುವ ಸಾಧ್ಯತೆಯಿದೆ. ಇದು ಟೀಮ್ ಇಂಡಿಯಾ ಪಾಳಯದಲ್ಲಿ ಆತಂಕ ಮೂಡಿಸಿದೆ. ಇಂಗ್ಲೆಂಡ್ ತಂಡದಲ್ಲಿ ಬಲಿಷ್ಠ ವೇಗಿಗಳ ಪಡೆಯೇ ಇದೆ. ಅಲ್ಲದೆ ಜೋಸ್ ಬಟ್ಲರ್, ಫಿಲ್ ಸಾಲ್ಟ್ ಅವರಂತಹ ಇಂಗ್ಲೆಂಡ್ ಬ್ಯಾಟರ್‌ಗಳಿಗೆ ಇಂತಹ ವೇಗ ಮತ್ತು ಬೌನ್ಸ್ ಇರುವ ಪಿಚ್‌ಗಳು ಹೆಚ್ಚು ಇಷ್ಟವಾಗುತ್ತವೆ. ಜೊತೆಗೆ ಇಂಗ್ಲೆಂಡ್ ಆಟಗಾರರಿಗೆ ಐಪಿಎಲ್ ಆಡಿ, ಇಲ್ಲಿನ ಪರಿಸ್ಥಿತಿಗಳ ಬಗ್ಗೆ ಸಂಪೂರ್ಣ ಅರಿವಿದೆ. ಹೀಗಾಗಿ ಇಂತಹ ನಿರ್ಣಾಯಕ ಸೆಮಿಫೈನಲ್ ಪಂದ್ಯದಲ್ಲಿ ವೇಗಿಗಳಿಗೆ ಹೆಚ್ಚು ನೆರವಾಗುವ ಪಿಚ್ ನಿರ್ಮಿಸಿರುವುದು ವಿವಾದಕ್ಕೆ ನಾಂದಿ ಹಾಡಿದೆ.

ಇದನ್ನೂ ಓದಿ: ರಾಜ್ಯದಲ್ಲಿ ವಾಣಿಜ್ಯ, ಕೈಗಾರಿಕೆ ವಿದ್ಯುತ್ ದರ ಹೆಚ್ಚಳ: ಕೃಷಿ ಪಂಪ್ ಸೆಟ್ ವಿದ್ಯುತ್ ದರ ಕಡಿತ

ಬಿಸಿಲಿನ ತಾಪಮಾನ ಹೆಚ್ಚಿರುವ ಕಾರಣ ಪಿಚ್ ಒಡೆದುಹೋಗದಿರಲಿ (Dry out) ಎಂದು ಕ್ಯುರೇಟರ್‌ಗಳು ಹುಲ್ಲು ಬಿಟ್ಟಿರುವ ಸಾಧ್ಯತೆಯೂ ಇದೆ. ಪಂದ್ಯ ಆರಂಭಕ್ಕೂ ಮುನ್ನ ಗುರುವಾರ ಎಷ್ಟು ಪ್ರಮಾಣದ ಹುಲ್ಲನ್ನು ಕತ್ತರಿಸಿ ತೆಗೆಯಲಾಗುತ್ತದೆ (Grass Trimming) ಎಂಬುದರ ಮೇಲೆ ಪಂದ್ಯದ ಭವಿಷ್ಯ ಹಾಗೂ ಟೀಮ್ ಇಂಡಿಯಾದ ಗೆಲುವಿನ ಲೆಕ್ಕಾಚಾರ ನಿಂತಿದೆ. ಒಟ್ಟಿನಲ್ಲಿ, ಪಂದ್ಯಕ್ಕೂ ಮುನ್ನವೇ ವಾಂಖೆಡೆ ಪಿಚ್ ಕ್ರಿಕೆಟ್ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Semi-Final, India vs England T20 world cup
Advertisment
Advertisment
Advertisment