Advertisment

ಅಂತರ್ಜಾತಿ ಮದ್ವೆಗೆ ವಿರೋಧ.. ಸಿನಿಮಾ ಸ್ಟೈಲ್​ನಲ್ಲಿ ಯುವಕನಿಗೆ ಥಳಿಸಿ ಯುವತಿಯ ಎತ್ತಾಕೊಂಡು ಹೋದ ಪೋಷಕರು..

ಮಗಳ ಅಂತರಜಾತಿ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿ ಸಿನಿಮಾ ಸ್ಟೈಲ್​ನಲ್ಲಿ ಯುವತಿಯನ್ನ ಎಳೆದುಕೊಂಡು ಹೋಗಿದ್ದಾರೆ. ಜಿಲ್ಲೆಯ ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮವು ಈ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ.

author-image
Ganesh Kerekuli
haveri love marriage case
Advertisment
  • ಕಾಲೇಜ್ ದಿನಗಳಿಂದಲೂ ಒಬ್ಬರಿಗೊಬ್ಬರು ಪ್ರೀತಿಸ್ತಿದ್ದ ಜೋಡಿ
  • ಎರಡು ದಿನಗಳ ಹಿಂದಷ್ಟೇ ದೇವಸ್ಥಾನದಲ್ಲಿ ಮದುವೆ
  • ಅಂತರಜಾತಿ ವಿಚಾರಕ್ಕೆ ಮದುವೆಗೆ ನಿರಾಕರಿಸ್ತಿರೋ ಆರೋಪ

ಹಾವೇರಿ: ಮಗಳ ಅಂತರಜಾತಿ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿ ಸಿನಿಮಾ ಸ್ಟೈಲ್​ನಲ್ಲಿ ಯುವತಿಯನ್ನ ಎಳೆದುಕೊಂಡು ಹೋಗಿದ್ದಾರೆ. ಜಿಲ್ಲೆಯ ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮವು ಈ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. 

Advertisment

ಏನಿದು ಪ್ರಕರಣ..? 

ಗ್ರಾಮದ ಮಣಿಕಂಠ ಸ್ವಾಮಿ ಎಂಬ ಯುವಕ ಮತ್ತು ಕೆಲವೂರುಕೊಪ್ಪ ಗ್ರಾಮದ ಸೃಷ್ಠಿ ಎಂಬ ಯುವತಿಯನ್ನ ಪ್ರೀತಿಸುತ್ತಿದ್ದ. ಇಬ್ಬರ ಮಧ್ಯೆ ಕಾಲೇಜು ದಿನಗಳಿಂದಲೇ ಪ್ರೀತಿ ಚಿಗುರಿತ್ತು ಎನ್ನಲಾಗಿದೆ. ಅಂತೆಯೇ ಮದುವೆಯಾಗಿ ಜೀವನ ನಡೆಸಬೇಕೆಂಬ ಕನಸು ಕಂಡಿದ್ದರು. ಎರಡು ದಿನಗಳ ಹಿಂದಷ್ಟೇ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದರು.

ಇದನ್ನೂ ಓದಿ:ಆರೋಪಿ ಪವಿತ್ರ ಗೌಡಗೆ ಮತ್ತೊಮ್ಮೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್..!​​

haveri love marriage case (1)

ದೇಗುಲದಲ್ಲಿ ಮದುವೆಯಾದ ಬಳಿಕ ರಿಜಿಸ್ಟರ್ ಕಚೇರಿಗೆ ತೆರಳಿದ್ದರು. ಅಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿ ಊರಿಗೆ ಬರುತ್ತಿದ್ದಾಗ ಯುವತಿ ಹೆತ್ತವರು ಪ್ರೇಮಿಗಳಿದ್ದ ಕಾರನ್ನು  ಬೆನ್ನಟ್ಟಿ ಬಂದಿದ್ದಾರೆ. ಕಾರಿಗೆ ಅಡ್ಡ ಹಾಕಿದ ಯುವತಿಯ ಪೋಷಕರು, ಇಬ್ಬರನ್ನು ಇಳಿಸಿದ್ದಾರೆ. ಬಳಿಕ ಮದುಮಗ ಮಣಿಕಂಠ ಸ್ವಾಮಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಯುವತಿ, ಎಷ್ಟೇ ಕಿರುಚಾಡಿದಿರೂ ಬಿಡಲಿಲ್ಲ. ಅಲ್ಲದೇ ಯುವತಿ ತನ್ನ ಗಂಡನನ್ನು ಬಿಟ್ಟು ಬರದಂತೆ ಹಟ ಹಿಡಿದಿದ್ದಾಳೆ.

ಇದಕ್ಕೆ ನಿರಾಕರಿಸಿದ ಯುವತಿ, ಪೋಷಕರು ಆಕೆಯನ್ನು ಬಲವಂತವಾಗಿ ಮನೆಗೆ ಎಳೆದುಕೊಂಡು ಹೋಗಿದ್ದಾರೆ. ಇತ್ತ ಒದೆ ತಿಂದು ಪ್ರೇಯಸಿಯನ್ನ ಕಳೆದುಕೊಂಡ ಮಣಿಕಂಠ ಸ್ವಾಮಿ ಕಂಗಾಲಾಗಿದ್ದಾನೆ. ಅಲ್ಲದೇ, ಆಕೆಯನ್ನು ತನಗೆ ಒಪ್ಪಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisment

ಇದನ್ನೂ ಓದಿ: ಇವತ್ತು ಆತ ಇದ್ದಿದ್ರೆ ಇರಾನ್‌ ನೋಡುತ್ತಿದ್ದ ನರಕವೇ ಬೇರೆ! ಇವನು ಕಿಂಗ್‌ ಆಫ್ ಶಾಡೋಸ್‌!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

inter-caste marriage marriage Haveri news LOVE MARRIAGE
Advertisment
Advertisment
Advertisment