/newsfirstlive-kannada/media/media_files/2025/08/06/pavitra-gowda-bail-2025-08-06-20-30-26.jpg)
ಪವಿತ್ರ ಗೌಡ
ಬೆಂಗಳೂರು: ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ನಡೆದಿದೆ ಎನ್ನಲಾದ ರೇಣುಕಾಸ್ವಾಮಿ ಕೊ* ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಜೈಲಿನಲ್ಲಿರುವ ಪ್ರಮುಖ ಆರೋಪಿ ಪವಿತ್ರಾ ಗೌಡ ಸೇರಿದಂತೆ ಮೂವರಿಗೆ ‘ಮನೆ ಊಟ’ ಒದಗಿಸಲು ಕೆಳಹಂತದ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಆರೋಪಿಗಳಾದ ಪವಿತ್ರಾ ಗೌಡ, ಲಕ್ಷ್ಮಣ್ ಮತ್ತು ನಾಗರಾಜ್‌ಗೆ ವಾರಕ್ಕೊಮ್ಮೆ ಮನೆ ಊಟ ಒದಗಿಸಲು 57ನೇ ಸಿಸಿಹೆಚ್ ಕೋರ್ಟ್ ಈ ಹಿಂದೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರದ ಪರವಾಗಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಹೈಕೋರ್ಟ್ ಏಕಸದಸ್ಯ ಪೀಠವು, ಕೆಳಹಂತದ ಕೋರ್ಟ್ ಆದೇಶವನ್ನು ವಜಾಗೊಳಿಸಿದೆ.
ಇದನ್ನೂ ಓದಿ: ಇರಾನ್ ವಿರುದ್ಧದ ಸಂಘರ್ಷಕ್ಕೆ ಅಮೆರಿಕಾದ ಖರ್ಚು ಎಷ್ಟು ಗೊತ್ತಾ?
ವೈದ್ಯರ ಸಲಹೆಯಿಲ್ಲದೆ ಮನೆ ಊಟ ನೀಡುವಂತಿಲ್ಲ
ವಿಚಾರಣೆ ವೇಳೆ ಮೌಖಿಕವಾಗಿ ಅಭಿಪ್ರಾಯ ಹಂಚಿಕೊಂಡ ನ್ಯಾಯಪೀಠ, ‘ಜೈಲಿನ ಕೈದಿಗಳಿಗೆ ಮನೆ ಊಟ ನಿಷಿದ್ಧವಲ್ಲ. ಆದರೆ ಅದನ್ನು ಕೇವಲ ನಿಯಮಗಳಿಗನುಸಾರವಾಗಿ ಮಾತ್ರ ನೀಡಬೇಕು. ಕೈದಿ ಕೇಳಿದ ಕೂಡಲೇ ಮನೆ ಊಟ ಒದಗಿಸಲು ಅವಕಾಶವಿಲ್ಲ. ಒಂದು ವೇಳೆ ವೈದ್ಯಕೀಯ ಸಲಹೆ (Medical advice) ಇದ್ದರೆ ಮಾತ್ರ ಅದಕ್ಕೆ ಅವಕಾಶ ನೀಡಬಹುದು. ಕೇವಲ ಒಬ್ಬರಿಗೆ ಮನೆ ಊಟಕ್ಕೆ ಅವಕಾಶ ನೀಡಿದರೆ ಜೈಲಿನಲ್ಲಿರುವ ಉಳಿದ ಕೈದಿಗಳೂ ಅದೇ ಬೇಡಿಕೆ ಮುಂದಿಡುತ್ತಾರೆ’ ಎಂದು ತಿಳಿಸಿತು.
ಜೈಲಿನ ಬಾಗಿಲಿನಲ್ಲಿ ಮಾನವೀಯ ಘನತೆ ಕೊನೆಯಾಗಬಾರದು
ಇದೇ ವೇಳೆ ರಾಜ್ಯದ ಜೈಲುಗಳಲ್ಲಿರುವ ಕೈದಿಗಳ ಆಹಾರದ ಗುಣಮಟ್ಟದ ಬಗ್ಗೆ ನ್ಯಾಯಾಲಯ ತೀವ್ರ ಕಳವಳ ವ್ಯಕ್ತಪಡಿಸಿದೆ. ವ್ಯಕ್ತಿಗಿರುವ ಮಾನವೀಯ ಘನತೆ ಕೇವಲ ಜೈಲಿನ ಬಾಗಿಲಿನಲ್ಲೇ ಕೊನೆಯಾಗಬಾರದು. ಕೈದಿಯೊಬ್ಬರಿಗೆ ದಿನಕ್ಕೆ 85 ರೂ. ಮೌಲ್ಯದ ಆಹಾರ ಸಮರ್ಪಕವಲ್ಲ. 85 ರೂಪಾಯಿಯಲ್ಲಿ ಪೌಷ್ಟಿಕ ಆಹಾರ ನೀಡಲು ಸಾಧ್ಯವಿಲ್ಲ. ಆದ್ದರಿಂದ ಊಟದ ಗುಣಮಟ್ಟದ ಬಗ್ಗೆ ಮರುಪರಿಶೀಲನೆ ಅಗತ್ಯವಿದೆ ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ:ಇವತ್ತಿನ ಸಮಾಜಕ್ಕೆ ಕತ್ತರಿಗಳಲ್ಲ; ಸೂಜಿಗಳ ಅಗತ್ಯವಿದೆ: ಕೆ.ವಿ.ಪ್ರಭಾಕರ್ ಅಭಿಮತ
ಇದಕ್ಕೆ ಉತ್ತರಿಸಿದ ಸರ್ಕಾರದ ಪರ ಹೆಚ್ಚುವರಿ ಎಸ್‌ಪಿಪಿ ಬಿ.ಎನ್. ಜಗದೀಶ್ ಅವರು, ಸದ್ಯ ಕೈದಿಯೊಬ್ಬರ ಊಟಕ್ಕೆ ದಿನಕ್ಕೆ 125 ರೂ. ಖರ್ಚು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಆದರೂ ಆಹಾರದ ಗುಣಮಟ್ಟದ ಬಗ್ಗೆ ಮರುಪರಿಶೀಲನೆ ಅಗತ್ಯವಿದೆ ಎಂದ ಹೈಕೋರ್ಟ್, ಜೈಲಿನ ಊಟವನ್ನು ಆಗಿಂದಾಗ್ಗೆ 'ಡಯಟೀಷಿಯನ್' (ಆಹಾರ ತಜ್ಞರು) ಪರಿಶೀಲಿಸಿ, ಗುಣಮಟ್ಟದ ಪ್ರಮಾಣಪತ್ರ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಸರ್ಕಾರಕ್ಕೆ ಹೈಕೋರ್ಟ್‌ನ ಪ್ರಮುಖ ನಿರ್ದೇಶನಗಳು
- ಜೈಲಿನಲ್ಲಿರುವ ಕೈದಿಗಳ ಅಹವಾಲು ಹಾಗೂ ಕುಂದುಕೊರತೆಗಳನ್ನು ಆಲಿಸಲು ತಕ್ಷಣವೇ 'ಡಿಜಿಟಲ್ ವ್ಯವಸ್ಥೆ' (Digital System) ರೂಪಿಸಬೇಕು.
- ಕೈದಿಗಳ ಆಹಾರದ ಗುಣಮಟ್ಟ ಹಾಗೂ ಪೌಷ್ಟಿಕತೆಯ ಬಗ್ಗೆ ಗಮನಹರಿಸಬೇಕು.
- ಹೈಕೋರ್ಟ್ ನೀಡಿರುವ ಈ ಮೇಲಿನ ಎಲ್ಲಾ ಆದೇಶಗಳ ಅನುಸಾರ ಜೈಲುಗಳ ನಿರ್ವಹಣೆ ಕುರಿತು ರಾಜ್ಯ ಸರ್ಕಾರ ಹೊಸ 'ಸುತ್ತೋಲೆ' (Circular) ಹೊರಡಿಸಬೇಕು ಎಂದು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಇರಾನ್ ವಿರುದ್ಧದ ಸಂಘರ್ಷಕ್ಕೆ ಅಮೆರಿಕಾದ ಖರ್ಚು ಎಷ್ಟು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us