/newsfirstlive-kannada/media/media_files/2026/03/04/south-afirca-2026-03-04-18-15-56.jpg)
ದಕ್ಷಿಣ ಆಫ್ರಿಕಾ ತಂಡದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಚೋಕರ್ಸ್​ ಹಣೆಪಟ್ಟಿಯಿಂದ ಹೊರಬರಲು ಆಫ್ರಿಕಾ ದಿಟ್ಟ ಹೋರಾಟ ನಡೆಸಲಿದೆ. ಇಂದು ನಡೆಯೋ ಸೆಮಿಫೈನಲ್ ಪಂದ್ಯದಲ್ಲಿ ಆಫ್ರಿಕಾ, ನ್ಯೂಜಿಲೆಂಡ್ ತಂಡಕ್ಕೆ ಸೋಲಿನ ರುಚಿ ತೋರಿಸಲು ಮುಂದಾಗಿದೆ. ಆ ಮೂಲಕ ಪ್ರಶಸ್ತಿ ಗೆಲ್ಲೋ ಫೇವರಿಟ್ಸ್​ ಅಂತ ಗುರುತಿಸಿಕೊಳ್ಳಲು ಹೊರಟಿದೆ.
ಕೊಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಅಗ್ನಿ ಪರೀಕ್ಷೆ ಎದುರಾಗಿದೆ. ವಿಶ್ವಕಪ್​ನಲ್ಲಿ ಅಜೇಯ ಗೆಲುವಿನ ಓಟ ಮುಂದುವರೆಸುತ್ತಿರುವ ಆಫ್ರಿಕಾ, ಟೂರ್ನಿ ಗೆಲ್ಲೋ ಫೇವರಿಟ್ ಎನಿಸಿಕೊಂಡಿದೆ. ಕ್ಯಾಪ್ಟನ್ ಏಡನ್ ಮಾರ್ಕ್ರಮ್ ನಾಯಕತ್ವದಲ್ಲಿ ಮಿಂಚ್ತಿರುವ ಆಫ್ರಿಕಾ, ಇಂದು ಕೊಲ್ಕತ್ತಾದಲ್ಲಿ ಕಿವೀಸ್ ಮಾಡುವ ಲೆಕ್ಕಾಚಾರದಲ್ಲಿದೆ. ಆಫ್ರಿಕಾ ಗೆಲುವಿಗೆ 5 ಪ್ರಮುಖ ಕಾರಣಗಳಿವೆ.
ಸಾಲಿಡ್​ ಫಾರ್ಮ್​ನಲ್ಲಿ ದಕ್ಷಿಣ ಆಫ್ರಿಕಾ ತಂಡ
ಟಿ-20 ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ಸಾಲಿಡ್ ಫಾರ್ಮ್​ನಲ್ಲಿದೆ. ಗ್ರೂಪ್​ ಸ್ಟೇಜ್​ನ ಎಲ್ಲಾ ಪಂದ್ಯಗಳನ್ನ ಗೆದ್ದಿರುವ ಅಫ್ರಿಕಾ, ಸೂಪರ್ ಏಯ್ಟ್​ ಹಂತದಲ್ಲೂ ಒಂದೇ ಒಂದು ಸೋಲು ಕಂಡಿಲ್ಲ. ಈ ಗೆಲುವಿನ ಓಟ, ಆಫ್ರಿಕಾ ತಂಡಕ್ಕೆ ಸ್ಟ್ರಾಂಗ್ ಮೊಮೆಂಟಮ್ ಎಡ್ಜ್ ಇದೆ.
ಇದನ್ನೂ ಓದಿ:ಇವತ್ತು ಆತ ಇದ್ದಿದ್ರೆ ಇರಾನ್ ನೋಡುತ್ತಿದ್ದ ನರಕವೇ ಬೇರೆ! ಇವನು ಕಿಂಗ್ ಆಫ್ ಶಾಡೋಸ್!
ಏಡನ್ ಮಾರ್ಕ್ರಮ್, ಕ್ವಿಂಟನ್ ಡಿಕಾಕ್, ರಿಯಾನ್ ರಿಕಲ್ಟನ್​​ರಂತಹ ಟಾಪ್ ಆರ್ಡರ್​ ಬ್ಯಾಟಿಂಗ್ ಲೈನ್​ಅಪ್, ಹರಿಣಗಳ ಜೋಷ್ ಹೆಚ್ಚಿಸಿದೆ. ಮಿಡಲ್ ಆರ್ಡರ್​ನಲ್ಲೂ ಆಫ್ರಿಕನ್ನರು ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿದ್ದಾರೆ. ಡೆವಾಲ್ಡ್ ಬ್ರೇವಿಸ್, ಡೇವಿಡ್ ಮಿಲ್ಲರ್ ಮತ್ತು ಟ್ರಿಸ್ಟನ್ ಸ್ಟಬ್ಸ್​ ಪಂದ್ಯದ ಗತಿಯನ್ನೇ ಬದಲಿಸುವ ಶಕ್ತಿ ಹೊಂದಿದ್ದಾರೆ. ಇದು ಹರಿಣಗಳಿಗೆ ಬಿಗ್ ಪ್ಲಸ್ ಪಾಯಿಂಟ್.
ಪೇಸ್ ಌಂಡ್ ಬೌನ್ಸ್​ನಿಂದ ಅಟ್ಯಾಕ್
ದಕ್ಷಿಣ ಆಫ್ರಿಕಾ ಬೌಲಿಂಗ್ ಅಟ್ಯಾಕ್​ನಲ್ಲಿ ವೆರೈಟಿ ಇದೆ. ಕ್ವಾಲಿಟಿ ಫಾಸ್ಟ್ ಬೌಲರ್ಸ್​ ಇದ್ದಾರೆ. ಪೇಸ್ ಌಂಡ್ ಬೌನ್ಸ್ ಜನರೇಟ್ ಮಾಡುವ ಸ್ಕಿಲ್ಸ್ ಹೊಂದಿದ್ದಾರೆ. ಎದುರಾಳಿಗಳನ್ನ ಕಟ್ಟಿಹಾಕಲು ಆಫ್ರಿಕನ್ನರಿಗೆ ಇದೇ ದೊಡ್ಡ ಅಸ್ತ್ರವಾಗಿದೆ. ಜೊತೆಗೆ ಆಫ್ರಿಕನ್ ಬೌಲರ್​ಗಳಿಗೆ ಸಡನ್ ಕಮ್​ಬ್ಯಾಕ್ ಗೊತ್ತಿದೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಪಿಚ್, ದಕ್ಷಿಣ ಆಫ್ರಿಕಾ ಬ್ಯಾಟರ್ಸ್​ಗೆ ಸಖತ್ ಸೂಟ್ ಆಗುತ್ತದೆ. ಇಲ್ಲಿನ ಪಿಚ್​​​​​ನಲ್ಲಿ ವೇಗವಾಗಿ ರನ್​ ಸ್ಕೋರ್ ಮಾಡೋ ತಂಡಕ್ಕೆ, ತುಂಬಾ ಅಡ್ವಾಂಟೇಜ್ ಇದೆ. ಹಾಗೇ ಪೇಸ್ ಎಫೆಕ್ಟೀವ್ ಆಗಿ ಬಳಸಿಕೊಳ್ಳೋ ಆಫ್ರಿಕಾಕ್ಕೆ ನೆರವಾಗಲಿದೆ. ಆಫ್ರಿಕಾದ ಪವರ್ ಪ್ಲೇ ಅಗ್ರೆಶನ್ ಮತ್ತು ಪೇಸ್ ಅಟ್ಯಾಕ್, ಈ ಕಂಡೀಷನ್ಸ್​ನಲ್ಲಿ ವರ್ಕ್​ಔಟ್ ಆಗಲಿದೆ.
ಇದನ್ನೂ ಓದಿ:ಪತ್ನಿ ಸಂಗೀತಾಗೆ 250 ಕೋಟಿ ರೂ. ಜೀವನಾಂಶ ನೀಡಲು ದಳಪತಿ ವಿಜಯ ನಿರ್ಧಾರ
ಪ್ರಸಕ್ತ ಟಿ-20 ವಿಶ್ವಕಪ್​ನಲ್ಲಿ ಸೌತ್ ಆಫ್ರಿಕಾ ತಂಡ ಒಂದೇ, ಅನ್​ಬೀಟನ್ ಟೀಮ್ ಆಗಿರೋದು. ಜೊತೆಗೆ ಲೀಗ್ ಹಂತದಲ್ಲಿ ಸೌತ್ ಆಫ್ರಿಕಾ, ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು. ಇದಷ್ಟೇ ಅಲ್ಲ. ಟಿ-20 ವಿಶ್ವಕಪ್ ಇತಿಹಾಸದಲ್ಲಿ ಕಿವೀಸ್, ಸೌತ್ ಆಫ್ರಿಕಾ ವಿರುದ್ಧ ಒಂದೇ ಒಂದು ಪಂದ್ಯ ಗೆದ್ದಿಲ್ಲ. ಈ ಸೈಕಲಾಜಿಕಲ್ ಅಡ್ವಾಂಟೇಜ್, ಖಂಡಿತ ಆಫ್ರಿಕಾಕ್ಕಿದೆ.
ಐಸಿಸಿ ನಾಕೌಟ್ ಗೇಮ್​ಗಳಲ್ಲಿ ನ್ಯೂಜಿಲೆಂಡ್ ಪಂಟರ್ಸ್ ಇರಬಹುದು. ಆದ್ರೀಗ ಕಾಲ ಬದಲಾಗಿದೆ. ಚೋಕರ್ಸ್​ ಅಂತ ಕರೆಸಿಕೊಳ್ತಿದ್ದ ಆಫ್ರಿಕನ್ಸ್ ಇದೀಗ ವಿನ್ನರ್ಸ್ ಆಗಲು ಹೊರಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us