/newsfirstlive-kannada/media/media_files/2025/09/24/indor_mp-2025-09-24-22-36-40.jpg)
ಇಂದೋರ್​: ವಿಮಾನ ಪ್ರಯಾಣಿಕನೊಬ್ಬನ ಪ್ಯಾಂಟ್​ ಒಳಗೆ ಇಲಿ ನುಗ್ಗಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಇಂದೋರ್​ನ ದೇವಿ ಅಹಲ್ಯಾ ಬಾಯಿ ಹೋಳ್ಕರ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಭೋಪಾಲ್​ ನಗರದ ನಿವಾಸಿ ಅರುಣ್ ಮೋದಿ ಎನ್ನುವ ಐಟಿ ಉದ್ಯೋಗಿ (Software Developer) ತನ್ನ ಹೆಂಡತಿಯೊಂದಿಗೆ ಬೆಂಗಳೂರಿಗೆ ಬರುತ್ತಿದ್ದರು. ಹೀಗಾಗಿ ಇಂದೋರ್​ನ ದೇವಿ ಅಹಲ್ಯಾ ಬಾಯಿ ಹೋಳ್ಕರ್ ವಿಮಾನ ನಿಲ್ದಾಣದ ಕೆಳ ಮಹಡಿಗೆ ಬಂದು, ಕುಳಿತುಕೊಂಡು ಪ್ಲೇನ್​​ಗಾಗಿ ಕಾಯುತ್ತಿದ್ದರು. 3:05 ಗಂಟೆಗೆ ಇದ್ದ ವಿಮಾನಕ್ಕಾಗಿ ಅರುಣ್ ಮೋದಿ ತನ್ನ ಹೆಂಡತಿ ಜತೆ ಏರ್​ಪೋರ್ಟ್​ಗೆ ಮಧ್ಯಾಹ್ನ 1 ಗಂಟೆಗೆ ಬಂದಿದ್ದರು.
ಕೆಳ ಮಹಡಿಯ ಹಾಲ್​ನಲ್ಲಿ ಚೇರ್​ ಮೇಲೆ ಕುಳಿತುಕೊಂಡು ಕಾಯುತ್ತಿರುವಾಗ ಇಲಿ ಓಡೋಡಿ ಬಂದು ನೇರ ಅವರ ಪ್ಯಾಂಟ್​ ಒಳಗೆ ಹೋಗಿದೆ. ಇದರಿಂದ ಗಾಬರಿಗೊಂಡ ಅವರು ಅದನ್ನು ಹೊರ ತೆಗೆಯಲು ಹರಸಾಹಸ ಪಟ್ಟರು. ಪ್ಯಾಂಟ್​ ಅನ್ನು ಅಲ್ಲೇ ಬಿಚ್ಚಿ ಇಲಿಯನ್ನು ಹೇಗೋ ಮಾಡಿ ಭಯದಿಂದಲೇ ಹಿಡಿದುಕೊಂಡು ಬೀಸಾಡಿದರು. ಆದರೆ ಇಲಿ ಒಳಗೆ ಹೋಗಿದ್ದಾಗ ಎರಡು ಬಾರಿ ಅವರ ಮೊಣಕಾಲಿಗೆ ಕಚ್ಚಿತ್ತು.
ಇದನ್ನೂ ಓದಿ: 6, 6, 6, 6, 6; ಬಾಂಗ್ಲಾ ವಿರುದ್ಧವೂ ಮುಂದುವರೆದ ಅಭಿಷೇಕ್ ಶರ್ಮಾ ಘರ್ಜನೆ.. ಹಾಫ್ ಸೆಂಚುರಿ
ಈ ಘಟನೆ ಗೊತ್ತಾಗುತ್ತಿದ್ದಂತೆ ಏರ್​​ಪೋರ್ಟ್​ ಸಿಬ್ಬಂದಿ ಅವರ ಬಳಿಗೆ ಆಗಮಿಸಿ ತಕ್ಷಣ ಮೆಡಿಕಲ್​ ರೂಮ್​ಗೆ ಕರೆದುಕೊಂಡು ಹೋದರು. ಆದರೆ ಅಲ್ಲಿ ರೇಬಿಸ್ ಲಸಿಕೆ ಇರಲಿಲ್ಲ. ಟಿಟನಸ್​​ ಶಾಟ್​ (Tetanus Shot) ಕೂಡ ಲಭ್ಯ ಇರಲಿಲ್ಲ. ಬಳಿಕ ಅಲ್ಲಿನ ಮತ್ತೊಬ್ಬ ಸಿಬ್ಬಂದಿ ಬಂದು ಟಿಟನಸ್​ ಅನ್ನ ವ್ಯವಸ್ಥೆ ಮಾಡಿದರು ಎನ್ನಲಾಗಿದೆ.
ಹೀಗಾಗಿ ಅರುಣ್ ಮೋದಿ ತಮ್ಮ ಡಾಕ್ಟರ್​ ಅನ್ನು ಸಂಪರ್ಕ ಮಾಡಿದಾಗ ತಕ್ಷಣವೇ ರೇಬಿಸ್​ ಲಸಿಕೆ ತೆಗೆದುಕೊಳ್ಳಿ ಎಂದು ಹೇಳಿದರು. ಆದರೆ ಇಂದೋರ್​ ಏರ್​ಪೋರ್ಟ್​ನಲ್ಲಿ ಅವರಿಗೆ ವಿಮಾನ ನಿಲ್ದಾಣದ ವೈದ್ಯರು ಕೇವಲ ಪ್ರಿಸ್ಕ್ರಿಪ್ಷನ್ ನೀಡಿದರು ಅಷ್ಟೇ. ಇಂದೋರ್​ನಿಂದ ವಿಮಾನದ ಮೂಲಕ ಬೆಂಗಳೂರಿಗೆ ಬಂದ ನಂತರವೇ ಇಲಿ ಕಚ್ಚಿದ್ದಕ್ಕೆ ರೇಬಿಸ್​ ಲಸಿಕೆ ತೆಗೆದುಕೊಂಡರು. ಇಂದೋರ್ ವಿಮಾನ ನಿಲ್ದಾಣದಲ್ಲಿ ಈ ರೀತಿಯಾದ ಘಟನೆ ನಡೆಯುವುದು ಇದೇ ಮೊದಲಲ್ಲ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ