/newsfirstlive-kannada/media/media_files/2025/09/24/abhishek_sharma-7-2025-09-24-20-57-13.jpg)
ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಏಷ್ಯಾಕಪ್​ನ ಸೂಪರ್-4 ಪಂದ್ಯದಲ್ಲಿ ಟೀಮ್ ಇಂಡಿಯಾದ ಓಪನರ್​ ಅಭಿಷೇಕ್ ಶರ್ಮಾ ಸಿಡಿಲಬ್ಬರ ಅರ್ಧಶತಕ ಸಿಡಿಸಿದ್ದಾರೆ.
ದುಬೈನ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ನಾಯಕ ಜಾಕೇರ್ ಅಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡುತ್ತಿದೆ. ಓಪನರ್​ ಆಗಿ ಕ್ರೀಸ್​ಗೆ ಆಗಮಿಸಿದ್ದ ಅಭಿಷೇಕ್ ಶರ್ಮಾ ಆರಂಭದಿಂದಲೇ ಎದುರಾಳಿ ಬೌಲರ್​ಗಳ ಎದೆಯಲ್ಲಿ ಭಯವನ್ನಿಟ್ಟರು.
ಇದನ್ನೂ ಓದಿ:ಟೀಮ್ ಇಂಡಿಯಾ ಜಯಭೇರಿ.. ಪಾಕ್​ಗೆ ಮತ್ತೆ ಮುಖಭಂಗ, ತಲೆ ತಗ್ಗಿಸಿದ ಬದ್ಧ ವೈರಿ..!
ಆದರೆ ಇನ್ನೊಂದೆಡೆ ಬ್ಯಾಟ್ ಬೀಸುತ್ತಿದ್ದ ಶುಭ್​ಮನ್ ಗಿಲ್ ಅವರು 19 ಎಸೆತದಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್​​ನಿಂದ 29 ರನ್​ ಗಳಿಸಿ ಆಡುವಾಗ ಕ್ಯಾಚ್​ ಕೊಟ್ಟು ಹೊರ ನಡೆದರು. ಗಿಲ್ ಹೊರ ಹೋಗುತ್ತಿದ್ದಂತೆ ಕ್ರೀಸ್​ಗೆ ಆಗಮಿಸಿದ ಶಿವಂ ದುಬೆ ಮತ್ತೊಮ್ಮೆ ಬ್ಯಾಟಿಂಗ್​ನಲ್ಲಿ ವಿಫಲತೆ ಅನುಭವಿಸಿ ಕೇವಲ 2 ರನ್​ಗೆ ಕ್ರೀಸ್​ ಖಾಲಿ ಮಾಡಿದರು. ಆದರೆ ಇನ್ನೊಂದೆಡೆ ಅಭಿಷೇಕ್ ಶರ್ಮಾ ಅಬ್ಬರ ಮುಂದುವರೆದಿತ್ತು.
ಅಭಿಷೇಕ್ ಶರ್ಮಾ ಬಾಂಗ್ಲಾ ಬೌಲರ್​ಗಳ ಮೇಲೆ ಸವಾರಿಯೇ ಮಾಡಿ ಬಿಟ್ಟರು. ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಅಭಿಷೇಕ್ ಶರ್ಮಾ ಕೇವಲ 27 ಎಸೆತಗಳಲ್ಲಿ 5 ಮನಮೋಹಕವಾದ ಬೌಂಡರಿ ಹಾಗೂ 3 ಆಕಾಶದೆತ್ತರದ ಸಿಕ್ಸರ್​ಗಳಿಂದ ಭರ್ಜರಿ ಅರ್ಧಶತಕ ಬಾರಿಸಿದರು. ಅಭಿಷೇಕ್ ಶರ್ಮಾ 6 ಬೌಂಡರಿ, 5 ಸಿಕ್ಸರ್​ನಿಂದ 75 ರನ್​ ಗಳಿಸಿ ಬ್ಯಾಟಿಂಗ್ ಮಾಡುವಾಗ ರನ್​ ಔಟ್​ಗೆ ಬಲಿಯಾದರು. ಕ್ಯಾಪ್ಟನ್ ಸೂರ್ಯ, ಪಾಂಡ್ಯ ಜೊತೆಯಾಗಿದ್ದು, ಟೀಮ್ ಇಂಡಿಯಾ 11 ಓವರ್​ಗೆ 113 ರನ್​ಗಳಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ