/newsfirstlive-kannada/media/media_files/2025/12/10/tirupati-tirumala-1-2025-12-10-13-20-27.jpg)
ತಿರುಮಲ ತಿರುಪತಿ ದೇವಸ್ಥಾನ ಸದ್ಯಕ್ಕೆ ವಿವಾದಗಳಿಂದ ಮುಕ್ತವಾಗುವಂತೆ ಕಾಣುತ್ತಿಲ್ಲ. ಕಲಬೆರಕೆ ಲಡ್ಡು ವಿವಾದ, ಹುಂಡಿ ಹಣ ಕಳ್ಳತನ (Parakamani case) ಪ್ರಕರಣದ ಬಳಿಕ ಇದೀಗ ದುಪ್ಪಟ್ಟ ವಿವಾದ ಬೆಳಕಿಗೆ ಬಂದಿದೆ.
ಹೌದು, ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಮತ್ತೊಂದು ವಿವಾದ ಬೆಳಕಿಗೆ ಬಂದಿದೆ. 2015 ರಿಂದ 2025ರ ಅವಧಿಯಲ್ಲಿ ರೇಷ್ಮೆ ದುಪ್ಪಟ್ಟಗಳ ಖರೀದಿಯಲ್ಲಿ ಬಹುದೊಡ್ಡ ಹಗರಣ (Silk dupatta scam) ನಡೆದಿರೋದನ್ನು ವಿಜಿಲೆನ್ಸಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. 2015 ರಿಂದ 2025 ಅವಧಿಯಲ್ಲಿ ಅಕ್ರಮ ನಡೆದಿದ್ದು, ಬರೋಬ್ಬರಿ 54 ಕೋಟಿ ಅವ್ಯವಹಾರ ನಡೆದಿರೋದು ತನಿಖೆಯಲ್ಲಿ ಗೊತ್ತಾಗಿದೆ.
54 ಕೋಟಿ ಹಗರಣ..
ಇಲ್ಲಿ ದೇವರ ಬಟ್ಟೆ ಖರೀದಿ ಹೆಸರಲ್ಲೂ ಟೋಪಿ ಹಾಕಲಾಗಿದೆ. ನಕಲಿ ರೇಷ್ಮೆ ದುಪ್ಪಟ್ಟಗಳನ್ನು ಪೂರೈಸಿ ಗೋಲ್ಮಾಲ್ ಮಾಡಲಾಗಿದೆ. 100 ಪರ್ಸೆಂಟ್ ಪಾಲಿಯೆಸ್ಟರ್-ಸಿಲ್ಕ್​ (Polyester-silk) ಎಂದು ಬಿಲ್​ನಲ್ಲಿ ನಮೂದಿಸಿ ನಕಲಿ ರೇಷ್ಮೆ ದುಪ್ಪಟ್ಟಗಳನ್ನು ದೇಗುಲಕ್ಕೆ ಪೂರೈಕೆ ಮಾಡಲಾಗಿದೆ. ಈ ಹಗರಣದ ಒಟ್ಟು ಮೊತ್ತ 54 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಬೆತ್ತಲೆ ಓಡುವುದನ್ನು ತಪ್ಪಿಸಿದ ಜೋ ರೂಟ್! ಜೋ ರೂಟ್‌ಗೆ ಗ್ರೇಸ್ ಹೇಡನ್ ರಿಂದ ಧನ್ಯವಾದ!
/filters:format(webp)/newsfirstlive-kannada/media/media_files/2025/12/10/tirupati-tirumala-2025-12-10-13-23-38.jpg)
ಅಧಿಕಾರಿಗಳ ಪ್ರಕಾರ, ಸುಮಾರು 15 ಸಾವಿರ ದುಪ್ಪಟ್ಟಗಳ ಖರೀದಿಯಲ್ಲಿ ಹಗರಣ ಆಗಿದೆ. ಒಂದು ದುಪ್ಪಟ್ಟಕ್ಕೆ 1389 ರೂಪಾಯಿಂತೆ ಖರೀದಿ ಮಾಡಲಾಗಿದೆ. ಎಲ್ಲಾ ದುಪ್ಪಟ್ಟಗಳನ್ನು ರೇಷ್ಮೆಯಿಂದ ಮಾಡಿರೋದು ಎಂದು ಖರೀದಿಸಿದ್ದಾರೆ. ಅನುಮಾನಗೊಂಡು ದುಪ್ಪಟ್ಟಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸೆಂಟ್ರಲ್ ಸಿಲ್ಕ್​ ಬೊರ್ಟ್​ ಹಾಗೂ ಎರಡು ಲ್ಯಾಬೊರೇಟರೀಸ್​ಗಳಿಂದ ಬಂದಿರುವ ವರದಿಯಲ್ಲಿ ಅದು ನಕಲಿ ಸಿಲ್ಕ್ ಅನ್ನೋದು ಸಾಬೀತಾಗಿದೆ ಎಂದು ತಿಳಿಸಿದ್ದಾರೆ.
ಸಿಲ್ಕ್ ದುಪ್ಪಟ್ಟ ಸ್ಕ್ಯಾಮ್ ಬಗ್ಗೆ ಪ್ರತಿಕ್ರಿಯಿಸಿರುವ ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು, ಖರೀದಯಲ್ಲಿ ಕೆಲವು ವ್ಯತ್ಯಾಸಗಳು ಆಗಿವೆ ಎಂದು ತಿಳಿದುಬಂದಿದೆ. ಕೂಡಲೇ ನಾವು ಪ್ರಕರಣದ ತನಿಖೆಯನ್ನು ಎಸಿಬಿಗೆ ನೀಡಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ:ಪೊಲೀಸರಿಗೆ ನಟ ಧನ್ವೀರ್ ಯಾಮಾರಿಸಿದ್ರಾ? ಧನ್ವೀರ್ ಮೊಬೈಲ್ ನಲ್ಲಿ ಡೇಟಾವೇ ಇಲ್ಲ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us