/newsfirstlive-kannada/media/media_files/2025/12/13/shashi-tharoor-2025-12-13-09-56-48.jpg)
ರಷ್ಯಾದಲ್ಲಿ ರುಂಜನ್ ಶರ್ಮಾ ಹಾಗೂ ಸಂಸದ ಶಶಿ ತರೂರ್
ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಖಾಸಗಿ ಸುದ್ದಿ ಸಂಸ್ಥೆ ಮುಖ್ಯಸ್ಥೆ ರುಂಜುನ್ ಶರ್ಮಾ (Runjhun Sharma) ಫೋಟೋ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ರುಂಜುನ್ ಶರ್ಮಾ ಪೋಸ್ಟ್ ಮಾಡಿದ ಈ ಚಿತ್ರಗಳು.. ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ರುಂಜುನ್ ಮಧ್ಯೆ ಇರೋ ರಿಲೇಷನ್​ ಶಿಪ್​ ಅನ್ನು ಪ್ರಶ್ನೆ ಮಾಡುವಂತೆ ಮಾಡಿದೆ. ಫೋಟೋದಲ್ಲಿ ತರೂರ್ ಸಿಂಗಲ್ ಸೀಟರ್ ಸೋಫಾದಲ್ಲಿ ಕುಳಿತಿದ್ರೆ.. ಪತ್ರಕರ್ತ ರುಂಜುನ್ ಶರ್ಮಾ, ಅವರ ಪಕ್ಕದ ಆರ್ಮ್‌ರೆಸ್ಟ್‌ನಲ್ಲಿ ಕುಳಿತಿದ್ದಾರೆ. ರುಂಜನ್ ಶರ್ಮಾ ಅವರ ಒಂದು ಕೈ ಶಶಿ ತರೂರ್ ಅವರ ಭುಜದ ಮೇಲೆ ಮತ್ತು ಇನ್ನೊಂದು ಕೈ ಮೇಲೆ ಶಶಿ ತರೂರ್ ಕೈ ಹಾಕಿದ್ದಾರೆ. ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ಇದೀಗ ಸಖತ್​ ಚರ್ಚೆ ಎದ್ದಿದೆ.
ರುಂಜುನ್ ಶರ್ಮಾ ಯಾರು?
ರುಂಜುನ್ ಶರ್ಮಾ ಒಬ್ಬ ಅನುಭವಿ ಪತ್ರಕರ್ತೆ. ರಷ್ಯಾದ ಪ್ರಮುಖ ಸುದ್ದಿಸಂಸ್ಥೆ ಆರ್​​ಟಿದ ದಕ್ಷಿಣ ಏಷ್ಯಾದ ಪ್ರಮುಖ ವರದಿಗಾರರಲ್ಲಿ ಒಬ್ಬರು. ಆರ್‌ಟಿ ಇಂಡಿಯಾದ ನ್ಯೂಸ್ ಮುಖ್ಯಸ್ಥೆ. ಉಕ್ರೇನ್ ಯುದ್ಧಕ್ಕೂ ಮುಂಚೆಯೇ ಅವರು ಆರ್‌ಟಿ ಮಾಸ್ಕೋದಲ್ಲಿ ಕೆಲಸ ಮಾಡಿದ್ದರು. ಇತ್ತೀಚೆಗೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆರ್‌ಟಿ ಇಂಡಿಯಾ ಟಿವಿ ಚಾನೆಲ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:ಭಾರತಕ್ಕೆ ಲಿಯೋನೆಲ್ ಮೆಸ್ಸಿ ಭೇಟಿ.. ‘ಸೆಲ್ಫಿ ವಿತ್ ಮೆಸ್ಸಿ’ಗೆ 9.95 ಲಕ್ಷ ರೂಪಾಯಿ ನಿಗಧಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us