/newsfirstlive-kannada/media/media_files/2025/08/31/love-story-1-2025-08-31-13-24-12.jpg)
ಇಲ್ಲೊಬ್ಬ ಯುವತಿ ತನ್ನ ಪ್ರಿಯಕರನನ್ನ ಮದುವೆಯಾಗಲು ಮನೆಯಿಂದ ಓಡಿಹೋಗಿದ್ದಳು. ಆದ್ರೆ ಒಂದು ವಾರದ ನಂತರ ಆಕೆ ಇನ್ನೊಬ್ಬ ವ್ಯಕ್ತಿಯನ್ನ ಮದುವೆಯಾಗಿ ಮನೆಗೆ ಮರಳಿದ್ದಾಳೆ. ಆ ಒಂದು ವಾರದಲ್ಲಿ ಏನ್ ಆಯ್ತು ಅನ್ನೋ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಈ ಸ್ಟೋರಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿರೋದು. ಯುವತಿಯ ಹೆಸರು ಶ್ರದ್ಧಾ ತಿವಾರಿ. ಮದುವೆಯಾದ ಹುಡುಗನ ಹೆಸರು ಕರಣ್‌ದೀಪ್. ಕಾಲೇಜಿನ ಎಲೆಕ್ಟ್ರಿಷಿಯನ್. ಇವ್ರಿಬ್ಬರು ಮದುವೆಯಾಗಿದ್ದಾರೆ.. ಇವ್ರ ಮದುವೆಗೆ ಕಾರಣ ಈಕೆಯ ಮಾಜಿ ಲವರ್ ಸಾರ್ಥಕ್.
ಇದನ್ನೂ ಓದಿ:ಎಚ್ಚರ, ಎಚ್ಚರ! ಈಗ eSIM ಸಿಮ್ ಹಗರಣ ಜೋರು.. ಏನಿದು..?
ಶ್ರದ್ಧಾ ತಿವಾರಿ ವಾರದ ಹಿಂದೆ ತನ್ನ ಮನೆಯಿಂದ ಓಡಿ ಹೋಗಿದ್ದಳು. ಆಗಸ್ಟ್ 23 ರಂದು ಎಂಐಜಿ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಶ್ರದ್ಧಾ, ಮನೆ ಬಿಟ್ಟು ಸೀದಾ ತನ್ನ ಪ್ರಿಯಕರ ಸಾರ್ಥಕ್‌ನನ್ನ ಮೀಟ್ ಆಗೋದಕ್ಕೆ ಹೋಗಿದ್ದಳು. ರೈಲ್ವೆ ನಿಲ್ದಾಣ ಒಂದರಲ್ಲಿ ಸುಮಾರು ಹೊತ್ತು ಕಾದ್ರು. ಸಾರ್ಥಕ್ ಬರೋ ಮೂಮೆಂಟ್ ಕಾಣಿಲ್ಲ. ಎಷ್ಟೇ ಹೊತ್ತು ಕಾದರೂ ಆತ ಬರಲೇ ಇಲ್ಲ.
ಪ್ರೀತಿಯ ‘ಸಾರ್ಥಕ’ತೆ!
ಇದರಿಂದಾಗಿ ಶ್ರದ್ಧಾಗೆ ದಿಕ್ಕೇ ತೋಚದಂತಾಗಿತ್ತು. ಶ್ರದ್ಧಾ ವಾಪಸ್ ಮನೆಗೆ ಹೋಗದೇ ಯಾವುದೇ ಗುರಿ ತೋಚದೆ ಸುಮ್ಮನೆ ರೈಲು ಹತ್ತಿ ಪ್ರಯಾಣಿಸಿದ್ಲು.. ಕೆಲವು ಗಂಟೆಗಳ ಬಳಿಕ ಆಕೆ ಜಬ್ ವಿ ಮೆಟ್ ಸಿನಿಮಾದಿಂದ ಪ್ರಸಿದ್ಧವಾದ ರತ್ಲಂನಲ್ಲಿ ಇಳಿದಿದ್ಲು.. ಆಕೆ ತನ್ನ ಭವಿಷ್ಯದ ಬಗ್ಗೆ ತುಂಬಾ ಗೊಂದಲದಲ್ಲಿದ್ಲು.. ಅಷ್ಟರಲ್ಲಿ ಶ್ರದ್ಧಾ ಇಂದೋರ್‌ನ ತನ್ನ ಕಾಲೇಜಿನಲ್ಲಿ ಕೆಲಸ ಮಾಡ್ತಿದ್ದ ಎಲೆಕ್ಟ್ರಿಷಿಯನ್ ಕರಣ್‌ದೀಪ್‌ನನ್ನು ಭೇಟಿಯಾಗ್ತಾಳೆ. ಶ್ರದ್ಧಾ ಒಬ್ಬಂಟಿಯಾಗಿ ಕುಳಿತಿದ್ದನ್ನ ಕಂಡ ಕರಣ್‌ದೀಪ್ ಅವಳ ಬಳಿಗೆ ಬಂದು ಏನಾಯ್ತು ಅಂತ ವಿಚಾರಿಸಿದ್ದ.. ಆಗ ಅವಳ ಮಾತು ಕೇಳಿದ ನಂತರ ಮನೆಗೆ ಹಿಂತಿರುಗಿ ಪೋಷಕರಿಗೆ ನಡೆದ ಘಟನೆ ವಿವರಿಸುವಂತೆ ಶ್ರದ್ಧಾಗೆ ಸಲಹೆ ಕೊಟ್ಟಿದ್ದ.. ಆದ್ರೆ ಶ್ರದ್ಧಾ ಅದಕ್ಕೆ ಒಪ್ಪದೇ, ತಾನು ಮದುವೆಯಾಗಲು ಮನೆ ಬಿಟ್ಟಿದ್ದೆ.. ಈಗ ಮದುವೆ ಆಗದೇ ಮನೆಗೆ ವಾಪಸ್ ಹೋಗಲಾರೆ ಎಂದಿದ್ಲು..
ಇದನ್ನೂ ಓದಿ:ಚೀನಾದಲ್ಲಿ SCO ಶೃಂಗಸಭೆ.. ಇಂದು ಮೋದಿ, ಜಿನ್ಪಿಂಗ್ ಭೇಟಿ..!
ಕರಣ್‌ದೀಪ್ ಎಷ್ಟು ಮನವೊಲಿಕೆ ಮಾಡಿದ್ರು ಕರಗದ ಶ್ರದ್ಧಾಗೆ, ಫೈನಲಿ ತನ್ನನ್ನ ಮದುವೆ ಆಗುವಂತೆ ಕರಣ್ ಪ್ರಪೋಸ್ ಮಾಡಿದ್ದಾನೆ. ಇದಕ್ಕೆ ಶ್ರದ್ಧಾ ಕೂಡಾ ಓಕೆ ಎಂದು ಸೂಚನೆ ಕೊಟ್ಟಿದ್ದಾಳೆ. ನಂತರ ಇಬ್ಬರೂ ಮಹೇಶ್ವರ-ಮಂಡಲೇಶ್ವರಕ್ಕೆ ಪ್ರಯಾಣ ಬೆಳೆಸಿ. ಅಲ್ಲಿ ಮದುವೆಯಾಗಿದ್ದಾರೆ. ನಂತರ ಅಲ್ಲಿಂದ ಅವರು ಮಂದಸೌರ್‌ಗೆ ಹೋಗಿದ್ದಾರೆ.
ಇವ್ರದ್ದು ಇಷ್ಟಾದ್ರೆ, ಈ ನಡುವೆ ಶ್ರದ್ಧಾಳ ತಂದೆ ಅನಿಲ್ ತಿವಾರಿಯ ತೀವ್ರ ಹುಡುಕಾಟ ಶುರುವಾಗಿ ಬಿಟ್ಟಿತ್ತು. ತನ್ನ ಮಗಳನ್ನ ಹುಡುಕಿಕೊಡುವವರಿಗೆ 50 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ರು. ಆಗಸ್ಟ್ 28 ರಂದು ಶ್ರದ್ಧಾ ಕೊನೆಗೂ ತನ್ನ ತಂದೆಗೆ ಕರೆ ಮಾಡಿ ಮಂದ್ಸೌರ್‌ನಲ್ಲಿ ತಾನು ಸುರಕ್ಷಿತವಾಗಿರೋ ಬಗ್ಗೆ ತಿಳಿಸಿದ್ದಾಳೆ.. ಸಮಾಧಾನಗೊಂಡ ತಂದೆ ರೈಲು ಟಿಕೆಟ್ ಖರೀದಿಗೆ ಕರಣ್‌ದೀಪ್‌ಗೆ ಫೋನ್ಪೇ ಮಾಡಿದ್ದ..
ಇಂದೋರ್ಗೆ ಹಿಂತಿರುಗಿದ ಶ್ರದ್ಧಾ ಮತ್ತು ಕರಣ್‌ದೀಪ್ ಸೀದಾ ಎಂಐಜಿ ಪೊಲೀಸ್ ಠಾಣೆಗೆ ಹೋಗಿ ನಡೆದ ಘಟನೆ ವಿವರಿಸಿದ್ರು. ಸದ್ಯ ಶ್ರದ್ಧಾ ತಂದೆ ಅನಿಲ್ ತಿವಾರಿ, ತಮ್ಮ ಮಗಳು ವಾಪಾಸ್ ಬಂದಿರೋದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಇಬ್ಬರ ಮದುವೆಯನ್ನ ಶ್ರದ್ಧಾ ಕುಟುಂಬ ಒಪ್ಪಿಕೊಂಡಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ. ಈ ಸ್ಟೋರಿ ನೋಡಿದ್ರೆ ದೊಡ್ಡವರು ಹೇಳಿದ ಮಾತೊಂದು ನೆನಪಾಗುತ್ತೆ.. ಪ್ರೀತಿ ಹುಟ್ಟೋದಕ್ಕೆ 100 ವರ್ಷ ಬೇಕಾಗಿಲ್ಲ.. ಒಂದು ಕ್ಷಣ ಸಾಕು.
ಇದನ್ನೂ ಓದಿ: ಪುಟಿನ್ ಭೇಟಿಗೂ ಮುನ್ನ ಉಕ್ರೇನ್ ಜೊತೆ ಮೋದಿ ಮಾತು -ಭಾರತ ಕೊಟ್ಟ ಭರವಸೆಯೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ