/newsfirstlive-kannada/media/media_files/2025/08/31/sim-2025-08-31-12-16-46.jpg)
ಮೊಬೈಲ್ ಬಳಕೆದಾರರಿಗೆ eSIM ಹಗರದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಭಾರತ ಸರ್ಕಾರ ಸೂಚಿಸಿದೆ. ಸೈಬರ್ ವಂಚನೆ ಎಷ್ಟು ಅಪಾಯಕಾರಿ ಎಂದರೆ ವಂಚಕರು OTP ಅಥವಾ ATM ವಿವರಗಳನ್ನು ನಮೂದಿಸದೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕದಿಯಬಹುದು ಎಂದು ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಎಚ್ಚರಿಸಿದೆ.
eSIM ವಂಚನೆ ಹೇಗೆ ನಡೆಯುತ್ತದೆ..?
I4C ಪ್ರಕಾರ.. ವಂಚಕರು ಮೊದಲು ಬಳಕೆದಾರರಿಗೆ ಕರೆ ಮಾಡ್ತಾರೆ. ನಂತರ ನಕಲಿ eSIM ಸಕ್ರಿಯಗೊಳಿಸುವ ಲಿಂಕ್ ಕಳುಹಿಸುತ್ತಾರೆ. ಆ ಲಿಂಕ್ ಕ್ಲಿಕ್ ಮಾಡಿದ ತಕ್ಷಣ, ಆ ಸಿಮ್ ಸ್ವಯಂಚಾಲಿತವಾಗಿ eSIM ಆಗಿ ಪರಿವರ್ತನೆಗೊಳ್ಳುತ್ತದೆ. ನಂತರ ಫೋನ್ನಲ್ಲಿರುವ ಅಸಲಿ ಸಿಮ್ ಕಾರ್ಯ ನಿರ್ವಹಿಸೋದನ್ನು ನಿಲ್ಲಿಸುತ್ತದೆ. ನೆಟ್‌ವರ್ಕ್ ಸಿಗ್ನಲ್‌ಗಳು ಕೂಡ ಕಣ್ಮರೆಯಾಗುತ್ತವೆ.
ಇದನ್ನೂ ಓದಿ: ಪ್ರಸಾರಭಾರತಿಯಿಂದ ಸದ್ಯದಲ್ಲೇ ದೇಶಾದ್ಯಂತ 30 ಸಾವಿರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
ಬಳಿಕ ಆ ನಂಬರ್ಗೆ ಕರೆಗಳು ಮತ್ತು SMS ಬರೋದು ಸ್ಥಗಿತಗೊಳ್ಳುತ್ತದೆ. ಎಲ್ಲಾ ಸಂದೇಶಗಳು ಮತ್ತು ವಂಚಕರ ಬಳಿಯಿರುವ eSIM ಗೆ ಹೋಗಲು ಪ್ರಾರಂಭಿಸುತ್ತದೆ. ಆ ಮೂಲಕ ಸೈಬರ್ ವಂಚಕರು ನಿಮ್ಮ ಖಾತೆಯಿಂದ ಹಣ ದೋಚುತ್ತಾರೆ.
ರಕ್ಷಿಸಿಕೊಳ್ಳುವುದು ಹೇಗೆ..?
ಈ ವಂಚನೆಯನ್ನು ತಪ್ಪಿಸಲು I4C ಕೆಲವು ಪ್ರಮುಖ ಸಲಹೆ ನೀಡಿದೆ
ಅಪರಿಚಿತ ಸಂಖ್ಯೆಗಳಿಂದ, ಅನುಮಾನಾಸ್ಪದ ಲಿಂಕ್‌ಗಳಿಂದ ಬರುವ ಕರೆಗಳನ್ನ ನಂಬಬೇಡಿ
ಟೆಲಿಕಾಂ ಕಂಪನಿಯ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ eSIM ಪರಿವರ್ತನೆ ಮಾಡಿ
ಫೋನ್‌ನಲ್ಲಿ ನೆಟ್‌ವರ್ಕ್ ಸಿಗ್ನಲ್ ಇದ್ದಕ್ಕಿದ್ದಂತೆ ಕಣ್ಮರೆಯಾದರೆ, ತಕ್ಷಣ ಬ್ಯಾಂಕ್ ಮತ್ತು ಮೊಬೈಲ್ ಸೇವಾ ಪೂರೈಕೆದಾರರ ಸಂಪರ್ಕಿಸಿ
ಇದನ್ನೂ ಓದಿ: ಕೊಹ್ಲಿ ನಿವೃತ್ತಿಯಿಂದ ಕೋಟಿ ಕೋಟಿ ಲಾಸ್.. ಮತ್ತೊಬ್ಬ ಸ್ಟಾರ್ಗೆ ಪಟ್ಟಾಭಿಷೇಕ ಮಾಡಲು BCCI ಪ್ಲಾನ್
ಈ ಕಾಳಜಿ ಏಕೆ ಹೆಚ್ಚಾಗಿದೆ?
ಗೃಹ ಸಚಿವಾಲಯದ ಅಡಿಯಲ್ಲಿ ಜನವರಿ 2020 ರಲ್ಲಿ I4C ರಚಿಸಲಾಗಿದೆ. ಇದು ಸೈಬರ್ ಅಪರಾಧಗಳನ್ನು ನಿಗ್ರಹಿಸುವ ಗುರಿ ಹೊಂದಿದೆ. ನಿರಂತರವಾಗಿ ಹೆಚ್ಚುತ್ತಿರುವ ಡಿಜಿಟಲ್ ವಹಿವಾಟುಗಳು ಮತ್ತು ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆಯೊಂದಿಗೆ ಅಂತಹ ವಂಚನೆಗಳ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಈ ಕಾರಣಕ್ಕಾಗಿ ಸರ್ಕಾರ eSIM ಹಗರಣದ ಬಗ್ಗೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಎಲ್ಲೆಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿವೆ, ಯಾವ್ಯಾವ ಕೋರ್ಸ್ ಗಳಿವೆ ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ