ಕೊಹ್ಲಿ ನಿವೃತ್ತಿಯಿಂದ ಕೋಟಿ ಕೋಟಿ ಲಾಸ್​.. ಮತ್ತೊಬ್ಬ ಸ್ಟಾರ್​​ಗೆ ಪಟ್ಟಾಭಿಷೇಕ ಮಾಡಲು BCCI ಪ್ಲಾನ್

ವಿರಾಟ್​​ ಕೊಹ್ಲಿ ಒನ್​ ಡೇ ಫಾರ್ಮೆಟ್​​ಗೂ ಗುಡ್​ ಬೈ ಹೇಳ್ತಾರೆ ಅನ್ನೋ ಸುದ್ದಿಯ ನಡುವೆ ಹೊಸ ಸೂಪರ್​ ಸ್ಟಾರ್​ನ ಹುಟ್ಟು ಹಾಕೋ ಯತ್ನ ಶುರುವಾಗಿದೆ. ಕಿಂಗ್​ ಕೊಹ್ಲಿ ಪಟ್ಟ ತ್ಯಜಿಸೋಕೆ ಕೌಂಟ್​​ಡೌನ್​ ಶುರುವಾಗಿರೋ ಸಮಯದಲ್ಲಿ ಪ್ರಿನ್ಸ್​​ ಶುಭ್​ಮನ್​ಗೆ ಪಟ್ಟಾಭಿಷೇಕ ನಡೀತಿದೆ.

author-image
Ganesh Kerekuli
World Cup: ಟೀಂ ಇಂಡಿಯಾದ ಈ ಸಮಸ್ಯೆಗೆ ಪರಿಹಾರ ವಿರಾಟ್ ಕೊಹ್ಲಿ ಒಬ್ಬರೇ.. ಅದು ಏನು ಗೊತ್ತಾ..?
Advertisment

ವಿರಾಟ್​​ ಕೊಹ್ಲಿ ಒನ್​ ಡೇ ಫಾರ್ಮೆಟ್​​ಗೂ ಗುಡ್​ ಬೈ ಹೇಳ್ತಾರೆ ಅನ್ನೋ ಸುದ್ದಿಯ ನಡುವೆ ಹೊಸ ಸೂಪರ್​ ಸ್ಟಾರ್​ನ ಹುಟ್ಟು ಹಾಕೋ ಯತ್ನ ಶುರುವಾಗಿದೆ. ಬಿಸಿಸಿಐ ಬಾಸ್​​ಗಳು, ಕೆಲ ಬಿಗ್ಗೆಸ್ಟ್​​ ಬ್ರ್ಯಾಂಡ್​​ಗಳು ಇದೀಗ ಯುವರಾಜನ ಹಿಂದೆ ಬಿದ್ದಿದೆ. ಕಿಂಗ್​ ಕೊಹ್ಲಿ ಪಟ್ಟ ತ್ಯಜಿಸೋಕೆ ಕೌಂಟ್​​ಡೌನ್​ ಶುರುವಾಗಿರೋ ಸಮಯದಲ್ಲಿ ಪ್ರಿನ್ಸ್​​ ಶುಭ್​ಮನ್​ಗೆ ಪಟ್ಟಾಭಿಷೇಕ ನಡೀತಿದೆ. 

ಕ್ರಿಕೆಟ್​​ ಲೋಕದ ಸುಲ್ತಾನ ವಿರಾಟ್​ ಕೊಹ್ಲಿ ನಿಧಾನವಾಗಿ ಕ್ರಿಕೆಟ್​ನಿಂದ ದೂರಾಗ್ತಿದ್ದಾರೆ. ಟೆಸ್ಟ್​​, ಟಿ20ಗೆ ಗುಡ್​ ಬೈ ಹೇಳಿರೋ ಕೊಹ್ಲಿ, ಇದೀಗ ಒನ್​ ಡೇ ಫಾರ್ಮೆಟ್​ಗೂ ನಿವೃತ್ತಿ ಘೋಷಿಸ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಕೊಹ್ಲಿಯ ವಿದಾಯದ ಸುದ್ದಿ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಬೇಸರ ತರಿಸಿದೆ. ನೆಚ್ಚಿನ ಸೂಪರ್​​ ಸ್ಟಾರ್​​ ಇನ್ಮೇಲೆ ಐಪಿಎಲ್​ಗೆ ಮಾತ್ರ ಸೀಮಿತವಾಗಿ ಬಿಡುತ್ತಾ? ಮುಂದಿನ ವಿಶ್ವಕಪ್​​ನಲ್ಲಿ ಕೊಹ್ಲಿ ಆಡಲ್ವಾ? ಎಂಬ ಬೇಸರದ ಪ್ರಶ್ನೆಗಳು ಫ್ಯಾನ್ಸ್​ ಮನದಲ್ಲಿವೆ. 

ಇದನ್ನೂ ಓದಿ: ಧೋನಿ ನಾಯಕತ್ವದ ಬಗ್ಗೆ ದಿಗ್ಗಜರ ಬಿಗ್​ ಬಾಂಬ್.. ಸಿಡಿದೆದ್ದ ಮಾಜಿ ಟೀಮ್​ಮೇಟ್ಸ್..!

KOHLI_BATTING

ಬಿಸಿಸಿಐಗೆ ಕೊಹ್ಲಿ ನಿವೃತ್ತಿಯದ್ದೇ ದೊಡ್ಡ ಟೆನ್ಶನ್​

ಒಂದೆಡೆ ಬಿಸಿಸಿಐ ಬಾಸ್​ಗಳು ವಿರಾಟ್​ ಕೊಹ್ಲಿಯನ್ನ ಸೈಡ್​​ಲೈನ್​ ಮಾಡೋ ಸಿದ್ಧತೆ ಮಾಡ್ತಿದ್ದಾರೆ. ಇನ್ನೊಂದೆಡೆ ಇದೇ ಬಿಸಿಸಿಐ ಬಾಸ್​​ಗಳಿಗೆ ಕೊಹ್ಲಿ ಹೋದ್ರೆ ಮುಂದೆ ಏನಪ್ಪಾ​ ಗತಿ ಎಂಬ ಚಿಂತೆಯೂ ಕಾಡ್ತಿದೆ. ಬಿಸಿಸಿಐ ವಲಯದಲ್ಲಿ ಮಾತ್ರವಲ್ಲ. ಜಾಹೀರಾತು ಲೋಕಕ್ಕೂ ಕ್ರಿಕೆಟ್​ನಿಂದ ಕಿಂಗ್​ ದೂರ ಸರೀತಾರೆ ಎಂಬ ಸುದ್ದಿಯನ್ನ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಕಿಂಗ್​ ಕೊಹ್ಲಿ ಕ್ರಿಕೆಟ್​ ಲೋಕವನ್ನ ಮಾತ್ರ ಆಡಿರಲಿಲ್ಲ. ಜಾಹೀರಾತು ಲೋಕಕ್ಕೂ ವಿರಾಟ್​ ಸುಲ್ತಾನನಾಗಿದ್ರು. 

ಪ್ರಿನ್ಸ್​​ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡ್​​

ವಿರಾಟ್​​ ಕೊಹ್ಲಿ ದೂರ ಸರೀತಿದಾರೆ ಎಂದ ಬೆನ್ನಲ್ಲೇ ಜಾಹೀರಾತು ಲೋಕ ಹಾಗೂ ಬಿಸಿಸಿಐ ನೆಕ್ಸ್ಟ್​ ಸೂಪರ್​ ಸ್ಟಾರ್​​ನ ಹುಟ್ಟುಹಾಕೋ ಪ್ರಯತ್ನ ಆರಂಭಿಸಿದೆ. ಕೊಹ್ಲಿ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಯುವರಾಜ ಶುಭ್​ಮನ್​ ಗಿಲ್​ಗೆ ಪಟ್ಟಾಭಿಷೇಕ ಮಾಡೋ ಯತ್ನಗಳು ನಡೀತಿವೆ. ಟೆಸ್ಟ್​ ನಾಯಕತ್ವ ನೀಡಿರೋ ಬಿಸಿಸಿಐ ಬಾಸ್​ಗಳು, ಏಕದಿನ, ಟಿ20ಯ ಕ್ಯಾಪ್ಟನ್ಸಿಯನ್ನೂ ನೀಡಿ ಗಿಲ್​ನ ಪವರ್​ಫುಲ್​ ಮಾಡೋ ಯತ್ನಕ್ಕೆ ಕೈ ಹಾಕಿದ್ದಾರೆ. ಅತ್ತ ಜಾಹೀರಾತು ಲೋಕ ಕೂಡ ಅಷ್ಟೇ ಗಿಲ್​ ಹಿಂದೆ ಬಿದ್ದಿದೆ.

ಇದನ್ನೂ ಓದಿ: ಒಂದಕ್ಕಿಂತ ಒಂದು ಸೂಪರ್ ಲವ್ ಸ್ಟೋರಿ.. ಕ್ರಿಕೆಟರ್ಸ್​ ಪ್ರೇಮಕಥೆಗಳು..!

GILL_KOHLI (2)

ಬೆಂಝ್​​​ ಶೂಟ್​ನಲ್ಲಿ ಮಿರಮಿರ ಮಿಂಚಿದ ಗಿಲ್​

ಇಂಗ್ಲೆಂಡ್​ ಪ್ರವಾಸ ಮುಗಿಸಿ ಭಾರತಕ್ಕೆ ವಾಪಾಸ್ಸಾಗಿರೋ ಗಿಲ್, 2 ದಿನದ ಹಿಂದೆ ದೆಹಲಿಯಲ್ಲಿ ಮರ್ಸಿಡೀಸ್​​ ಬೆಂಝ್​​​​ನ ಇವೆಂಟ್​ನಲ್ಲಿ ಭಾಗಿಯಾಗಿದ್ರು. ಬೆಂಝ್​​​ ಪ್ರಮೋಶನ್ ಇವೆಂಟ್​​ನಲ್ಲಿ​ ಅಕ್ಷರಶಃ ಮಿರಮಿರ ಮಿಂಚಿದ್ರು. 

ಮೊನ್ನೆಯ ಇವೆಂಟ್​ ನೋಡಿದವರಿಗೆಲ್ಲಾ ನೆನಪಾಗಿದ್ದು ಕೊಹ್ಲಿ. ಈ ಹಿಂದೆ ವಿರಾಟ್​ ಕೊಹ್ಲಿ ಬೆಂಜ್​​ನ ಅಂಬಾಸಿಡರ್ ಆಗಿದ್ರು. ಕೊಹ್ಲಿ ಕ್ರಿಕೆಟ್​​ನಿಂದ ದೂರಾಗ್ತಿದ್ದಾರೆ ಎಂದ ಬೆನ್ನಲ್ಲೇ ಬೆಂಜ್​ ಗಿಲ್​ ಹಿಂದೆ ಬಿದ್ದಿದೆ.

ಕೊಹ್ಲಿ ಬಳಿಕ ಗಿಲ್​ಗೆ ಗಾಳ ಹಾಕಿದ MRF

MRF ಸ್ಟಿಕರ್​ ಅಂಟಿಸಿದ ಬ್ಯಾಟ್​ ಹಿಡಿದವರೆಲ್ಲಾ ಕ್ರಿಕೆಟ್​ ಲೋಕವನ್ನ ಆಳಿದವರೆ ಸಚಿನ್​ ತೆಂಡುಲ್ಕರ್​, ಎಬಿ ಡಿವಿಲಿಯರ್ಸ್​​, ಬ್ರಯನ್​ ಲಾರಾ, ಸ್ಟೀವ್​ ವಾ. ಈಗ ವಿರಾಟ್​ ಕೊಹ್ಲಿ ಎಲ್ರೂ ದಿಗ್ಗಜರೇ. ಇದೀಗ ಕೊಹ್ಲಿ ಬಳಿಕ ಶುಭ್​ಮನ್​ ಗಿಲ್​ಗೆ ಎಮ್​ಆರ್​​ಎಫ್​ ಗಾಳ ಹಾಕಿದೆ. 

ಇದನ್ನೂ ಓದಿ: ಕೊಹ್ಲಿ ಮಾಡಿದ ಒಂದು ಯಡವಟ್ಟು.. ಈಕೆಯ ಅದೃಷ್ಟವೇ ಬದಲಾಗಿದೆ ನೋಡಿ..!

shubman_gill_batting

ಒಂದರ್ಥದಲ್ಲಿ ಕೊಹ್ಲಿ ಬಳಿಕ ಗಿಲ್​ನ ನೆಕ್ಸ್ಟ್​ ಸೂಪರ್​ ಸ್ಟಾರ್​ ಮಾಡೋ ಯತ್ನಕ್ಕೆ ಮೊದಲು ಕೈ ಹಾಕಿದ್ದೇ MRF. ಆಗಿನ್ನೂ ಬಿಸಿಸಿಐ ವಲಯದಲ್ಲಿ ಗಿಲ್​​ಗೆ ಟೆಸ್ಟ್​ ನಾಯಕತ್ವ ಕಟ್ಟೋ ಚರ್ಚೆ ನಡೀತಿತ್ತು. ಆಗಲೇ ಗಿಲ್​ಗೆ ಗಾಳ ಹಾಕಿ ಎಮ್​​ಆರ್​ಎಫ್​ ಅಗ್ರಿಮೆಂಟ್​ ಮಾಡಿಕೊಳ್ತು. ಅದೇನು ಅದೃಷ್ಟವೋ ಏನೋ ಗೊತ್ತಿಲ್ಲ. MRF ಬ್ಯಾಟ್​​ ಕೈ ಬಂದ ಮೊದಲ ಸರಣಿಯಲ್ಲಿ ಗಿಲ್​ ಮೋಡಿ ಮಾಡಿದ್ರು. 

ಆನ್​​ ಫೀಲ್ಡ್​ನಲ್ಲಿ ಕೊಹ್ಲಿ ಅಬ್ಬರಿಸ್ತಿದ್ದ ಕೊಹ್ಲಿ ಫ್ಯಾನ್ಸ್​ಗೆ ಜಬರ್ದಸ್ತ್​​​ ಎಂಟರ್​​ಟೈನ್​ಮೆಂಟ್​ ನೀಡುತ್ತಿದ್ದರು. ತಮ್ಮ ಅಮೋಘ ಆಟದಿಂದ ಟೀಮ್​ ಇಂಡಿಯಾದ ಮ್ಯಾಚ್​ ವಿನ್ನರ್​ ಅನಿಸಿದ್ರು. ಬಿಸಿಸಿಐ ಪಾಲಿಗೆ ಅಷ್ಟೇ ಆದಾಯದ ಮೂಲವಾಗಿದ್ರು. ಜಾಹೀರಾತುದಾರರಿಗಂತೂ ನೆಚ್ಚಿನ ಡಾರ್ಲಿಂಗ್​ ಆಗಿದ್ರು. ಇದೀಗ ಕೊಹ್ಲಿ ಕ್ರಿಕೆಟ್​ನಿಂದ ದೂರಾಗ್ತಿರೋದು ಬಿಸಿಸಿಐ ಗಳಿಕೆಗೆ, ಕೆಲ ಬ್ರ್ಯಾಂಡ್​​ಗಳ ಆದಾಯಕ್ಕೆ ಹೊಡೆತ ಕೊಟ್ಟಿದೆ. ಹೀಗಾಗಿ ಇವರೆಲ್ಲರ ಕಣ್ಣು ಗಿಲ್​ ಮೇಲೆ ಬಿದ್ದಿದೆ. ಈ ಹಿಂದೆ ಸಚಿನ್​ ಸ್ಥಾನವನ್ನ ಕೊಹ್ಲಿ ತುಂಬಿದಂತೆ, ಕೊಹ್ಲಿ ಸ್ಥಾನವನ್ನ ಗಿಲ್​ ತುಂಬ್ತಾರಾ? ಕಾದು ನೋಡೋಣ.

ಇದನ್ನೂ ಓದಿ:ಒಂದು ಬಾಲ್​ನಲ್ಲಿ 22 ರನ್​ ಚಚ್ಚಿದ RCB ಸ್ಟಾರ್​..! ಅದು ಹೆಂಗೆ..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Virat Kohli beard Rohit Sharma-Virat Kohli Virat Kohli Shubman Gill Captaincy
Advertisment