ಧೋನಿ ನಾಯಕತ್ವದ ಬಗ್ಗೆ ದಿಗ್ಗಜರ ಬಿಗ್​ ಬಾಂಬ್.. ಸಿಡಿದೆದ್ದ ಮಾಜಿ ಟೀಮ್​ಮೇಟ್ಸ್..!

MS ಧೋನಿ ಟೀಮ್​ ಇಂಡಿಯಾ ಕಂಡ ಸಕ್ಸಸ್​​ಫುಲ್​ ಕ್ಯಾಪ್ಟನ್​. ಹಾಗೇ ಅತಿ ಹೆಚ್ಚು ಕಾಂಟ್ರವರ್ಸಿಗೊಳಗಾದ ನಾಯಕ ಕೂಡ. ಧೋನಿ ಜೊತೆ ಆಡಿದ ಟೀಮ್​​ಮೇಟ್ಸ್​ಗಳೇ ಧೋನಿಯನ್ನ ಕಂಡ್ರೆ ಉರಿದು ಬೀಳ್ತಾರೆ. ಧೋನಿ ನಮ್ಮ ಕತೆ ಮುಗಿಸಿದ್ರು ಅಂತಾ ಹೇಳಿದವರು ಹಲವರಿದ್ದಾರೆ.

author-image
Ganesh Kerekuli
DHONI
Advertisment

MS ಧೋನಿ.. ಟೀಮ್​ ಇಂಡಿಯಾ ಕಂಡ ಸಕ್ಸಸ್​​ಫುಲ್​ ಕ್ಯಾಪ್ಟನ್​. ಹಾಗೇ ಅತಿ ಹೆಚ್ಚು ಕಾಂಟ್ರವರ್ಸಿಗೊಳಗಾದ ನಾಯಕ ಕೂಡ. ಬೇರೆ ಯಾರೋ ಹೊರಗಿನವರಲ್ಲ. ಧೋನಿ ಜೊತೆ ಆಡಿದ ಟೀಮ್​​ಮೇಟ್ಸ್​ಗಳೇ ಧೋನಿಯನ್ನ ಕಂಡ್ರೆ ಉರಿದು ಬೀಳ್ತಾರೆ. ಧೋನಿ ನಮ್ಮ ಕತೆ ಮುಗಿಸಿದ್ರು ಅಂತಾ ಹೇಳಿದವರು ಹಲವರಿದ್ದಾರೆ. ಧೋನಿ ನಿವೃತ್ತಿಯಾಗಿ 6 ವರ್ಷವಾದ್ರೂ, ಮಾಜಿ ಟೀಮ್​ಮೇಟ್ಸ್​​ ಕೋಪ ಕಡಿಮೆಯಾಗಿಲ್ಲ.

ಇದನ್ನೂ ಓದಿ:ಮೂರು ತಿಂಗಳ ಬಳಿಕ ಬಿಗ್​ ಅಪ್​ಡೇಟ್ಸ್.. ಅಭಿಮಾನಿಗಳಿಗಾಗಿ RCB ಹೊಸ ಯೋಜನೆ

ಎಮ್​.ಎಸ್​ ಧೋನಿ.. ಒಂದಲ್ಲ.. ಎರಡಲ್ಲ.. ಮೂರು ಐಸಿಸಿ ಟ್ರೋಫಿಗಳನ್ನ ಗೆದ್ದ ಏಕೈಕ ನಾಯಕ. ಭಾರತಕ್ಕೆ  ಚೊಚ್ಚಲ ಟಿ20 ವಿಶ್ವಕಪ್​, 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್​, 2013ರಲ್ಲಿ ಚಾಂಪಿಯನ್ಸ್​ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ. 3 ಐಸಿಸಿ ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕ.

ನಾಯಕನ ಮೇಲೆ ಟೀಮ್​​ಮೇಟ್ಸ್​​ ಕೆಂಡ

ಕ್ಯಾಪ್ಟನ್​ ಧೋನಿ ಎರಡು ವಿಚಾರಕ್ಕೆ ಸದಾ ಸುದ್ದಿಯಲ್ಲಿರ್ತಾರೆ. ಒಂದು ಚಾಣಾಕ್ಯ ನಾಯಕತ್ವ, ಅತ್ಯದ್ಭುತ ಸಾಧನೆಗಳಿಂದ. ಇನ್ನೊಂದು ಮಾಜಿ ಟೀಮ್​ಮೇಟ್ಸ್​​ಗಳ ಕಂಪ್ಲೇಂಟ್​ನಿಂದ​.. ಸದ್ಯ ಮಾಜಿ ಕ್ರಿಕೆಟಿಗ ಮನೋಜ್​ ತಿವಾರಿ ಕೂಡ ತಮ್ಮ ಕರಿಯರ್​ ಅಂತ್ಯವಾಗೋದಕ್ಕೆ ಧೋನಿ ಕಾರಣ ಎಂದು ಬ್ಲೇಮ್​ ಮಾಡಿದ್ದಾರೆ. ಧೋನಿಗೆ ನನ್ನನ್ನ ಕಂಡ್ರೆ ಆಗ್ತಿರಲಿಲ್ಲ. ನನಗೆ ಬೆಂಬಲವನ್ನೂ ನೀಡಲಿಲ್ಲ. ಅವಕಾಶವನ್ನೂ ನೀಡಲಿಲ್ಲ. ನನ್ನ ಕರಿಯರ್ ಬೇಗ ಅಂತ್ಯವಾಗೋದಕ್ಕೆ ಧೋನಿಯೇ ಕಾರಣ ಎಂದು ಹೊಸ ಬಾಂಬ್​ ಸಿಡಿಸಿದ್ದಾರೆ.

ಧೋನಿ ನನ್ನ ಕರಿಯರ್​ ಮುಗಿಸಿದ್ರು ಎಂದ ಪಠಾಣ್​

YES.. ತುಂಬಾ ಹಿಂದಲ್ಲ.. 4-5 ದಿನಗಳ ಹಿಂದೆ  ಧೋನಿ ವಿಚಾರದಲ್ಲಿ ಮಾಜಿ ಆಲ್​​ರೌಂಡರ್​ ಇರ್ಫಾನ್​ ಪಠಾಣ್ ಬಾಂಬ್​ ಸಿಡಿಸಿದ್ರು. ಒನ್​ ಅಫ್​​ ದ ಬೆಸ್ಟ್​​ ಅಲ್​​ರೌಂಡರ್​ ಎನಿಸಿಕೊಂಡಿದ್ದ ಇರ್ಫಾನ್​, ಇದಕ್ಕಿದ್ದಂತೆ ಟೀಮ್​ ಇಂಡಿಯಾದಿಂದ ದೂರವಾಗಿದ್ದು ನಿಮಗೆ ಗೊತ್ತಿರಬಹುದು. ಇದಕ್ಕೆ ಕಾರಣ ಧೋನಿ ಎಂದು ಪಠಾಣ್​ ಹೇಳಿದ್ರು. ನನ್ನನ್ನ ಡ್ರಾಪ್​ ಮಾಡಿದ್ಯಾಕೆ ಎಂದು ಕೋಚ್​ ಗ್ಯಾರಿ ಕರ್ಸ್ಟನ್​ ಬಳಿ ಕೇಳಿದ್ದೆ. ಅದಕ್ಕೆ ಗ್ಯಾರಿ ನನ್ನ ಕೈಯಲ್ಲಿ ಏನೂ ಇಲ್ಲ ಎಂದಿದ್ರು. ಆ ಬಳಿಕ ಗೊತ್ತಾಗಿದ್ದು, ಇದ್ರ ಹಿಂದಿರೋದು ಧೋನಿ ಅಂತಾ ಎಂದಿದ್ರು.

ಇದನ್ನೂ ಓದಿ:ರೋಹಿತ್ ಶರ್ಮಾರ ಹೊರದಬ್ಬಲು BCCI ಮಾಸ್ಟರ್ ಪ್ಲಾನ್..!

ಟಿ20 ವಿಶ್ವಕಪ್ ಗೆಲ್ಲಲು ಟಾಪ್ ಆರ್ಡರ್​​ನಲ್ಲಿ ಈ ಮೂವರು ಇರಲೇಬೇಕು ಎಂದ ಮಾಜಿ ಕ್ರಿಕೆಟಿಗ

ಸಚಿನ್​ ತಡೆಯದಿದ್ರೆ ವಿಶ್ವಕಪ್​ ಆಡ್ತಿರಲಿಲ್ಲ

ಪಠಾಣ್​ ಮಾತ್ರವಲ್ಲ.. ಒಂದು ವಾರದ ಮುನ್ನ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ, ಸ್ಪೋಟಕ ಬ್ಯಾಟ್ಸ್​​​ಮನ್​ ವೀರೇಂದ್ರ ಸೆಹ್ವಾಗ್​ ಕೂಡ ಧೋನಿ ಮೇಲೆ ಇಂತದ್ದೇ ಆರೋಪ ಮಾಡಿದ್ರು. 2007-08ರ ಆಸ್ಟ್ರೇಲಿಯಾ ಸರಣಿಯಲ್ಲಿ ಮೊದಲ 3 ಪಂದ್ಯ ಆಡಿದ ಬಳಿಕ ನನ್ನನ್ನ ಡ್ರಾಪ್​ ಮಾಡಿದ್ರು. ನಂತರ ಕೆಲ ಕಾಲ ನನ್ನನ್ನ ತಂಡಕ್ಕೂ ಆಯ್ಕೆ ಮಾಡಲಿಲ್ಲ. ಹೀಗಾಗಿ ಒನ್​​ ಡೇ ಫಾರ್ಮೆಟ್​​ಗೆ ನಿವೃತ್ತಿ ಹೇಳೋಕೆ ಮುಂದಾಗಿದ್ದೆ. ಸಚಿನ್​ ನನ್ನನ್ನ ತಡೆದಿದ್ರು ಎಂದು ಸೆಹ್ವಾಗ್​ ಹೇಳಿಕೆ ನೀಡಿದ್ರು.

ಧೋನಿ ಅಂದ್ರೆ ಕೆಂಡವಾಗ್ತಾರೆ ಗೌತಮ್​ ಗಂಭೀರ್​

ಇದು ನಿಮಗೆ ಗೊತ್ತಿರೋ ಕಥೆಯೇ.. ಧೋನಿ ನಾಯಕತ್ವವನ್ನ ಸದಾ ಗಂಭೀರ್​ ಟೀಕಿಸ್ತಾರೆ. ಧೋನಿಯಿಂದ ಮಾತ್ರವಲ್ಲ.. ಭಾರತ ವಿಶ್ವಕಪ್​ ಗೆದ್ದಿದ್ದು ಎಲ್ಲರಿಂದ ಅಂತಾ ಪದೇ ಪದೇ ಹೇಳ್ತಾರೆ. ಜೊತೆಗೆ 2012ರಲ್ಲಿ ಧೋನಿ ಜಾರಿಗೆ ತಂದ ರೊಟೇಶನ್​ ಪಾಲಿಸಿಯನ್ನ ಈಗಲೂ ಟೀಕಿಸ್ತಾರೆ. ತನ್ನನ್ನೂ ಸೇರಿದಂತೆ ಸೀನಿಯರ್ಸ್​​ ಕರಿಯರ್​ ಅಂತ್ಯಗೊಳಿಸೋಕೆ ಅಂತಲೇ ಧೋನಿ ಆ ನಿಯಮ ತಂದಿದ್ದು ಅನ್ನೋದು ಗಂಭೀರ್​​ ಆರೋಪ.

ಧೋನಿ ಜೊತೆ ಈಗಲೂ ಮಾತನಾಡಲ್ಲ ಯುವಿ

ಯುವಿ ನೀಡಿದ ಆ ಒಂದು ಸಲಹೆ ಕೊಹ್ಲಿ ಬದುಕನ್ನೇ ಬದಲಿಸಿಬಿಡ್ತು.. ವಿರಾಟ್ ‘ಕಿಂಗ್ ಕೊಹ್ಲಿ’ ಆಗಲು ಕಾರಣ ಇವರೇ!

2011 ವಿಶ್ವಕಪ್​ ಗೆಲುವಿನ ಹೀರೋ ಯುವರಾಜ್​ ಸಿಂಗ್​ ಈಗಲೂ ಕೂಡ ಮಾತನಾಡಲ್ಲ. ನಮ್ಮಿಬ್ಬರ ರಿಲೇಷನ್​ಶಿಪ್​ ಏನಿದ್ರೂ ಆಟಕ್ಕೆ ಮಾತ್ರ ಸೀಮಿತ. ಅದ್ರ ಹೊರತಾಗಿ ನಾವಿಬ್ಬರು ಗೆಳೆಯರಲ್ಲ ಎಂದು ಯುವರಾಜ್​ ಸಿಂಗ್​ ಬಹಳ ಹಿಂದೆಯೇ ಹೇಳಿದ್ರು. ಕ್ಯಾನ್ಸರ್​ ವಿರುದ್ಧ ಹೋರಾಡಿ ಗೆದ್ದು ತಂಡಕ್ಕೆ ಕಮ್​ಬ್ಯಾಕ್​ ಮಾಡಿದ ಬಳಿಕ ನಾಯಕ ಧೋನಿ ನನ್ನನ್ನ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅವಕಾಶವನ್ನ ಕೊಡದೇ ಸತಾಯಿಸಿದ್ರು ಅನ್ನೋದು ಯುವಿಯ ಕೋಪಕ್ಕೆ ಕಾರಣ.

ಧೋನಿ ಜೊತೆ ಮಾತು ಬಿಟ್ಟ ಭಜ್ಜಿ

ಲೆಜೆಂಡರಿ ಆಫ್​​ ಸ್ಪಿನ್ನರ್​​ ಕೊಹ್ಲಿ ನಾಯಕತ್ವದಲ್ಲೂ ಟೀಮ್​ ಇಂಡಿಯಾದಲ್ಲಿ ಆಡಿದ್ರು. ಧೋನಿ 2013ರ ಚಾಂಪಿಯನ್ಸ್​​ ಟ್ರೋಫಿ​ಗೂ ಮುನ್ನವೇ ಹರ್ಭಜನ್​ಗೆ ತಂಡದಿಂದ ಗೇಟ್​ ಪಾಸ್​​ ನೀಡಿದ್ರು. ಇದಕ್ಕಿದ್ದಂತೆ ತಂಡದಿಂದ ಡ್ರಾಪ್​ ಮಾಡಿದ್ಯಾಕೆ ಅಂತ ಕೇಳೋಕೆ ಭಜ್ಜಿ ಹಲವು ಬಾರಿ ಕರೆ ಮಾಡಿದ್ರೂ, ಧೋನಿ ಫೋನ್​ ಪಿಕ್​ ಮಾಡಿರಲಿಲ್ಲವಂತೆ. ಆ ಬಳಿಕ ಧೋನಿ ಜೊತೆಗೆ ಮಾತನಾಡೋದನ್ನೇ ಹರ್ಭಜನ್​ ನಿಲ್ಲಿಸಿದ್ರಂತೆ. ಐಪಿಎಲ್​ನಲ್ಲಿ ಒಟ್ಟಾಗಿ ಆಡಿದ್ರೂ ಇಬ್ಬರ ನಡುವೆ ಮಾತುಕತೆ ಇದ್ದಿದ್ದು ಸಂಬಂಧಿಸಿದಂತೆ ಮಾತ್ರವಂತೆ.

ಒಟ್ಟಿನಲ್ಲಿ, ಧೋನಿ ಸಾಧನೆಗಳ ಬಗ್ಗೆ ಎಷ್ಟು ಚರ್ಚೆಯಾಗುತ್ತೋ, ನಾಯಕ ಧೋನಿಯ ನಡೆಗಳ ಬಗ್ಗೆ ಮಾಜಿ ಟೀಮ್​​ಮೆಟ್ಸ್​​​​ ಟೀಕೆಗಳು ಸದಾ ಚರ್ಚೆಯಲ್ಲಿರ್ತವೆ. ಮೇಲಿಂದ ಮೇಲೆ ಈ ಟೀಕೆಗಳು ವ್ಯಕ್ತವಾದ್ರೂ, ಈ ವಿಚಾರದಲ್ಲಿ ಧೋನಿಯದ್ದು ಮಾತ್ರ ಮೌನವೇ ಉತ್ತರ.

ಇದನ್ನೂ ಓದಿ: ಬಿಸಿಸಿಐಗೆ ಬಿಗ್ ಶಾಕ್ ಕೊಟ್ಟ ಕೇಂದ್ರ ಸರ್ಕಾರ.. ಕೋಟಿ ಕೋಟಿ ನಷ್ಟ..!


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

MS Dhoni car craze MS Dhoni defamation case MS Dhoni investment MS Dhoni
Advertisment