ರೋಹಿತ್ ಶರ್ಮಾರ ಹೊರದಬ್ಬಲು BCCI ಮಾಸ್ಟರ್ ಪ್ಲಾನ್..!

ಟೀಮ್​ ಇಂಡಿಯಾ ಒನ್​ ಡೇ ಕ್ಯಾಪ್ಟನ್​ ರೋಹಿತ್​ ಶರ್ಮಾನ ಹೊರ ಕಳಿಸೋಕೆ ಬಿಸಿಸಿಐ ಶತಪ್ರಯತ್ನ ಮಾಡ್ತಿದೆ. ರೋಹಿತ್​ ಶರ್ಮಾ ನಾನು ವಿಶ್ವಕಪ್​ ಆಡಿಯೇ ರಿಟೈರ್​ ಆಗೋದು ಎಂದು ಪಟ್ಟು ಹಿಡಿದಿದ್ದಾರೆ. ರೋಹಿತ್​ ಶರ್ಮಾನ ಹೊರಕಳಿಸೋಕೆ ಬಿಸಿಸಿಐ ಹೊಸ ದಾಳ ಉರುಳಿಸಿದೆ.

author-image
Ganesh Kerekuli
ಮತ್ತೆ ಸಿಡಿದೇಳಬೇಕಿದೆ ಸಿಡಿಲಬ್ಬರದ ಬ್ಯಾಟರ್.. ಐಪಿಎಲ್​​ನಲ್ಲಿ ನಿರಂತರ ವಿಫಲತೆ ಕಾಣುತ್ತಿರುವುದೇಕೆ ಹಿಟ್​ಮ್ಯಾನ್​?
Advertisment

ಟೀಮ್​ ಇಂಡಿಯಾದಲ್ಲಿ ಬದಲಾವಣೆಯ ಪರ್ವ ಜೋರಾಗಿದೆ. ಸೀನಿಯರ್​​​ ಆಟಗಾರರ ಕೈಬಿಟ್ಟು ಭವಿಷ್ಯದ ತಂಡ ಕಟ್ಟೋ ಪ್ರಯತ್ನ ಜೋರಾಗೆ ನಡೀತಿದೆ. ಸಪೋರ್ಟ್​ ಸ್ಟಾಫ್​ ವಿಚಾರದಲ್ಲೂ ಅಷ್ಟೇ. ಕಳೆದೊಂದು ವರ್ಷದಲ್ಲಿ ಹಲವು ಬದಲಾವಣೆಯಾಗಿದೆ. ಸ್ಟ್ರೆಂಥ್​ ಅಂಡ್ ಕಂಡಿಷನಿಂಗ್​ ಕೋಚ್​ ಬದಲಾವಣೆಯಾಗಿದೆ. ಸುದೀರ್ಘ ಕಾಲ ತಂಡದೊಂದಿಗಿದ್ದ ಸೋಹಮ್​​ ದೇಸಾಯಿಗೆ ಗುಡ್​ ಬೈ ಹೇಳಿರೋ ಬಿಸಿಸಿಐ, ಎಡ್ರೈನ್​ ಲೆ ರೌಕ್ಸ್​​ಗೆ ಮಣೆ ಹಾಕಿದೆ.

ಇದನ್ನೂ ಓದಿ: RCB ಅಭಿಮಾನಿಗಳಿಗೆ ಗುಡ್​ನ್ಯೂಸ್​; 4 ವರ್ಷದ ಬಳಿಕ ಕಮ್​ಬ್ಯಾಕ್ ಮಾಡ್ತಾರಾ ABD?

ROHIT_KOHLI_NEW



ಹೊಸ ಸ್ಟ್ರೆಂಥ್​ ಅಂಡ್ ಕಂಡಿಷನಿಂಗ್​ ಕೋಚ್​ಗೆ ಮಣೆ ಹಾಕಿರೋದು ಮಾತ್ರವಲ್ಲ. ಫಿಟ್​ನೆಸ್​ ಮಾನದಂಡವನ್ನೂ ಬದಲಾಯಿಸಲು ಬಿಸಿಸಿಐ ಮುಂದಾಗಿದೆ. ಈ ಹಿಂದಿದ್ದ ಯೋ ಯೋ ಟೆಸ್ಟ್​ಗೆ ಗೇಟ್​ಪಾಸ್​ ನೀಡಲು ಮುಂದಾಗಿರೋ ಬಾಸ್​​ಗಳು ಬ್ರೊನ್ಕೊ ಟೆಸ್ಟ್​ ಪರಿಚರಿಯಿಸೋಕೆ ಮುಂದಾಗಿದ್ದಾರೆ. ಆಟಗಾರರ ಫಿಟ್ನೆಸ್ ಲೆವೆಲ್​ ಮತ್ತಷ್ಟು ಹೆಚ್ಚಿಸುವ ದೃಷ್ಟಿಯಿಂದ ಈ ಮಹತ್ವದ ನಿರ್ಧಾರವನ್ನ ಬಿಸಿಸಿಐ ಮಾಡಿದೆ ಅನ್ನೋದು ಮೇಲ್ನೋಟಕ್ಕೆ ಕಾಣ್ತಿರೋ ಸತ್ಯ. ಇದ್ರ ಹಿಂದೆ ಬೇರೆಯದ್ದೇ ಲೆಕ್ಕಾಚಾರವಿದೆ.

ಬಿಗ್​ ಲೆಕ್ಕಾಚಾರ!

ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ನಿವೃತ್ತಿಯ ವಿಚಾರ ಕ್ರಿಕೆಟ್​ ವಲಯದಲ್ಲಿ ತೀವ್ರ ಚರ್ಚೆಯಲ್ಲಿದೆ. 2027ರ ವಿಶ್ವಕಪ್​ ಟಾರ್ಗೆಟ್​ ಮಾಡಿರೋ ಬಿಸಿಸಿಐ ಬಾಸ್​​ಗಳು ಕೊಹ್ಲಿ, ರೋಹಿತ್​​ನ ಕೈ ಬಿಟ್ಟು ಯುವ ತಂಡ ಕಟ್ಟೋ ಲೆಕ್ಕಾಚಾರದಲ್ಲಿದ್ದಾರೆ. ಬಿಸಿಸಿಐಗೆ ಸೆಡ್ಡು ಹೊಡೆದಿರೋ ರೋಹಿತ್​​, ನಾವು ವಿಶ್ವಕಪ್​​ ಆಡಿಯೇ ನಿವೃತ್ತಿ ಹೇಳೋದು ಎಂಬ ಸಂದೇಶ ರವಾನೆ ಮಾಡ್ತಿದ್ದಾರೆ. ಫಾರ್ಮ್​ ಅಂಡ್ ಫಿಟ್​ನೆಸ್​​ ಎರಡರಲ್ಲೂ ಕೊಹ್ಲಿ ಟಾಪ್​​​ನಲ್ಲಿದ್ದಾರೆ. ರೋಹಿತ್​ ಶರ್ಮಾ ಫಾರ್ಮ್​ ಚನ್ನಾಗಿದೆ. ಆದ್ರೆ ಫಿಟ್​ನೆಸ್​​ ಸಮಸ್ಯೆಯಿದೆ. ಈ ಫಿಟ್​​​ನೆಸ್​ ವೀಕ್​ನೆಸ್​​ ಅನ್ನೇ ಲಾಕ್​ ಮಾಡೋಕೆ ಬಿಸಿಸಿಐ ಹೊರಟಿದೆ. 

ಇದನ್ನೂ ಓದಿ: ಆನ್​ಲೈನ್​ ಬೆಟ್ಟಿಂಗ್​; ಕೊಹ್ಲಿ, ರೋಹಿತ್, ಧೋನಿ ಸೇರಿ ಕೋಟಿ ಕೋಟಿ ಹಣ ಕಳೆದುಕೊಳ್ಳಲಿರೋ ಕ್ರಿಕೆಟರ್ಸ್​

ROHIT_KOHLI_WC

ಬ್ರೊನ್ಕೊ ಟೆಸ್ಟ್​​​ ಪಾಸ್​ ಆಗೋದು ಕಷ್ಟ

ರಗ್ಬಿ ಹಾಗೂ ಫುಟ್ಬಾಲ್​ ತಂಡಗಳ ಸೆಲೆಕ್ಷನ್​ಗೆ ಈ ಬ್ರೊನ್ಕೊ ಟೆಸ್ಟ್​ ಮಾನದಂಡವಾಗಿದೆ. ಈ ಹಿಂದಿದ್ದ ಯೋ ಯೋ ಟೆಸ್ಟ್​ಗಿಂತ ಇದು ಕಠಿಣವಾದ ಪರೀಕ್ಷೆ. ಈ ಟೆಸ್ಟ್​ನಲ್ಲಿ 20 ಮೀಟರ್, 40 ಮೀಟರ್​, 60 ಮೀಟರ್​​​ ರನ್ನಿಂಗ್​ ಇರಲಿದೆ. ಶಟಲ್ ಮಾದರಿಯಲ್ಲಿ ಟೆಸ್ಟ್​ ನಡೆಯಲಿದ್ದು, 1 ಸೆಟ್ ಪೂರ್ಣಗೊಳಿಸಲು 240 ಮೀಟರ್ ದೂರ ಓಡಬೇಕು. ಹೀಗೆ 5 ಬಾರಿ ಆಟಗಾರ ಬ್ರೇಕ್​ ಇಲ್ಲದೇ ರನ್ನಿಂಗ್ ಮಾಡಬೇಕು. 1200 ಮೀಟರ್ ದೂರವನ್ನ 6 ನಿಮಿಷದೊಳಗೆ ಆಟಗಾರ ಪೂರ್ಣಗೊಳಿಸಬೇಕಾಗಿರುತ್ತೆ. ಈ ಕಠಿಣ ಪರೀಕ್ಷೆಯನ್ನ ಫಿಟ್​ನೆಸ್​ ಸಮಸ್ಯೆ ಎದುರಿಸ್ತಿರೋ 36 ವರ್ಷದ ರೋಹಿತ್​ ಗೆಲ್ಲೋದು ಕಷ್ಟ.

‘ರೋಹಿತ್​ ಶರ್ಮಾಗೆ ಇದು ಕಷ್ಟ’

2027 ವಿಶ್ವಕಪ್​ನಿಂದ ವಿರಾಟ್​​ ಕೊಹ್ಲಿಯನ್ನ ಹೊರಗಿಡೋದು ಕಷ್ಟ. ಆದ್ರೆ ರೋಹಿತ್​ ವಿಚಾರದಲ್ಲಿ ಅನುಮಾನವಿದೆ. ನಾನು ಭಾರತೀಯ ಕ್ರಿಕೆಟ್​ನ ಸೂಕ್ಷ್ಮವಾಗಿ ಗಮನಿಸುತ್ತೆನೆ. ಕೆಲ ದಿನಗಳ ಹಿಂದೆ ಬ್ರೊನ್ಕೊ ಟೆಸ್ಟ್​​ ಪರಿಚಯಿಸಲಾಗಿದೆ. ಇದು ರೋಹಿತ್​ ಶರ್ಮಾ ಅಂತಾ ಆಟಗಾರರಿಗೆ ಇದು ಕಷ್ಟ. ರೋಹಿತ್​ ಅವರ ಭವಿಷ್ಯದ ಪ್ಲಾನ್​ನಲ್ಲಿ ಇಲ್ಲ. ಹೀಗಾಗಿಯೇ ಹೊಸ ಟೆಸ್ಟ್​ ಪರಿಚಯಿಸಲಾಗಿದೆ. 

ಮನೋಜ್​ ತಿವಾರಿ, ಮಾಜಿ ಕ್ರಿಕೆಟಿಗ

2011ರಲ್ಲೂ ಇದೇ ಗೇಮ್ ಆಡಿ ಗೆದ್ದಿದ್ದ ಬಿಸಿಸಿಐ 

2011 ಏಕದಿನ ವಿಶ್ವಕಪ್​​ ಬಳಿಕ 2013ರ ಚಾಂಪಿಯನ್ಸ್​ ಟ್ರೋಫಿಗೆ ಸಿದ್ಧತೆ ನಡೆಸಿದ್ದ ಬಿಸಿಸಿಐ ಸೀನಿಯರ್ಸ್​​ನ ಹೊರಗಿಡೋಕೆ ಇದೇ ದಾಳ ಉರುಳಿಸಿತ್ತು. ತಂಡದ ಆಯ್ಕೆಗೆ ಯೋ ಯೋ ಟೆಸ್ಟ್​ ಪರೀಕ್ಷೆಯನ್ನ ಮಾನದಂಡವಾಗಿಸಿ ಬಿಸಿಸಿಐ ನಿಯಮ ರೂಪಿಸಿತ್ತು. ಸೆಹ್ವಾಗ್​, ಗಂಭೀರ್​, ಸಚಿನ್​ ತೆಂಡುಲ್ಕರ್​ ಸೇರಿದಂತೆ ಹಲವು ಸೀನಿಯರ್​ ಆಟಗಾರರಿಗೆ ಈ ಟೆಸ್ಟ್ ಟಫ್​​ ಟಾಸ್ಕ್​ ಆಗಿತ್ತು. ಹೀಗಾಗಿ​ ನಿಧಾನವಾಗಿ ತಂಡದಿಂದ ದೂರಾದ್ರು. 

ಇದನ್ನೂ ಓದಿ: 2026 ಸೀಸನ್​ಗೂ ಮೊದಲೇ IPLಗೆ ಗುಡ್​ಬೈ ಹೇಳಿದ ಆಫ್​ ಸ್ಪಿನ್ನರ್ ಆರ್​.ಅಶ್ವಿನ್

Champions Trophy 2025; ಟೀಮ್ ಇಂಡಿಯಾದಲ್ಲಿ ಯಾರ್ ಯಾರಿಗೆ ಸ್ಥಾನ?

ಒಟ್ಟಿನಲ್ಲಿ ಬಿಸಿಸಿಐ ಹೊಸದಾಗಿ ಜಾರಿಗೆ ತರಲು ಮುಂದಾಗಿರೋ ಬ್ರೊನ್ಕೊ ಟೆಸ್ಟ್​ ರೋಹಿತ್​ ಶರ್ಮಾ ಕರಿಯರ್​​ನ ಮತ್ತಷ್ಟು ಅತಂತ್ರಕ್ಕೆ ಸಿಲುಕಿಸಿದೆ. ಈ ಕಠಿಣ ಟೆಸ್ಟ್​ ಗೆದ್ದು ರೋಹಿತ್​ ಶರ್ಮಾ ಟೀಮ್​ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ತಾರಾ? ವಿಶ್ವಕಪ್​ ಆಡೋ ಕನಸು ನನಸು ಮಾಡಿಕೊಳ್ತಾರಾ? ಕಾದು ನೋಡೋಣ. 

ಇದನ್ನೂ ಓದಿ: ಕೊಹ್ಲಿ, ಧೋನಿ ಸೇರಿ ಎಲ್ಲ ಪ್ಲೇಯರ್ಸ್​ಗೆ 200 ಕೋಟಿ ರೂಪಾಯಿ ಲಾಸ್..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rohit Sharma-Virat Kohli Rohit Sharma car Rohith Sharma
Advertisment