/newsfirstlive-kannada/media/media_files/2025/08/27/r_ashwin_dhoni-2025-08-27-11-51-25.jpg)
ಟೀಮ್ ಇಂಡಿಯಾದ ಮಾಜಿ ಆಫ್​ ಸ್ಪಿನ್ನರ್ ಹಾಗೂ ಆಲ್​ರೌಂಡರ್ ರವಿಚಂದ್ರನ್ ಅಶ್ವಿನ್ ಅವರು 2026ರ ಐಪಿಎಲ್​ಗೂ ಮೊದಲೇ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆರ್.ಅಶ್ವಿನ್ ಅವರು ಇತ್ತೀಚೆಗಷ್ಟೇ ಭಾರತದ ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದರು. ಇದರ ಬೆನ್ನಲ್ಲೇ ಈಗ ಐಪಿಎಲ್​ಗೂ ನಿವೃತ್ತಿ ಘೋಷಿಸಿದ್ದಾರೆ.
ಆರ್.ಅಶ್ವಿನ್ ಅವರು ಲಂಡನ್​ನ ನ್ಯೂಲ್ಯಾಂಡ್ಸ್​ನಲ್ಲಿ ನಡೆದ 2009ರ ಐಪಿಎಲ್​ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಪರವಾಗಿ ಡೆಬ್ಯು ಮಾಡಿದ್ದರು. ಆದರೆ ಈ ಪಂದ್ಯದಲ್ಲಿ ಎದುರಾಳಿ ಮುಂಬೈ ಇಂಡಿಯನ್ಸ್​ ಗೆಲುವು ಸಾಧಿಸಿತ್ತು. ಟಿ20 ಪಂದ್ಯಗಳಲ್ಲಿ ಅತ್ಯುತ್ತಮ ಸ್ಪಿನ್ನರ್ ಎಂದು ಖ್ಯಾತಿ ಪಡೆದಿದ್ದರು. ಇವರು ಆಡಿದ ಐಪಿಎಲ್​ ಟೂರ್ನಿಗಳಲ್ಲಿ ಇದುವರೆಗೆ 187 ವಿಕೆಟ್​ಗಳನ್ನು ಉರುಳಿಸಿದ್ದಾರೆ. 833 ರನ್​ ಗಳಿಸಿದ್ದು ಇದರಲ್ಲಿ ಒಂದು ಅರ್ಧಶತಕ ಸೇರಿದೆ. ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದವರ ಪೈಕಿ ಆರ್ ಅಶ್ವಿನ್ ಅವರು ಐದನೇ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.
ಈವರೆಗೆ ಆರ್ ಅಶ್ವಿನ್ ಅವರು 16 ಸೀಸನ್​ಗಳಲ್ಲಿ 5 ತಂಡಗಳ ಪರ ಆಡಿದ್ದರು. 2025ರ ಮೆಗಾ ಆಕ್ಷನ್​ನಲ್ಲಿ ಅಶ್ವಿನ್ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಭಾಗವಾಗಿದ್ದರು. ಆದರೆ ಕಳೆದ ಋತುವಿನಲ್ಲಿ ಪ್ರದರ್ಶನ ಕಳಪೆಯಾಗಿತ್ತು. ಸಿಎಸ್​ಕೆ ಪರವಾಗಿ ಒಟ್ಟು 7 ಸೀಸನ್​ಗಳನ್ನು ಆಡಿದ್ದ ಅಶ್ವಿನ್ ಉಳಿದವುಗಳನ್ನು ಬೇರೆ ತಂಡಗಳ ಪರವಾಗಿ ಬೌಲಿಂಗ್ ಮಾಡಿದ್ದರು.
ಆರ್ ಅಶ್ವಿನ್ ಆಡಿರುವ ಐಪಿಎಲ್ ತಂಡಗಳು ಎಂದರೆ, ಚೆನ್ನೈ ಸೂಪರ್ ಕಿಂಗ್ಸ್, ರೈಸಿಂಗ್ ಪುಣೆ ವಾರಿಯರ್ಸ್, ಕಿಂಗ್ಸ್​ ಇಲೆವೆನ್ ಪಂಜಾಬ್, ಡೆಲ್ಲಿಕ್ಯಾಪಿಟಲ್ಸ್​ ಹಾಗೂ ರಾಜಸ್ಥಾನ್ ರಾಯಲ್ಸ್​ ತಂಡದ ಪರ ಆಡಿದ್ದರು. ಇವಷ್ಟೇ ಅಲ್ಲದೇ ತಮಿಳುನಾಡು ತಂಡ, ದಿಂಡಿಗಲ್ ಡ್ರ್ಯಾಗನ್ಸ್, ವೋರ್ಸೆಸ್ಟರ್‌ಶೈರ್ (Worcestershire), ನಾಟಿಂಗ್ಹ್ಯಾಮ್ಶೈರ್ (Nottinghamshire) ಹಾಗೂ ಸರ್ರೆ (Surrey) ತಂಡಗಳಲ್ಲಿಯು ಆಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ