ಆನ್​ಲೈನ್​ ಬೆಟ್ಟಿಂಗ್​; ಕೊಹ್ಲಿ, ರೋಹಿತ್, ಧೋನಿ ಸೇರಿ ಕೋಟಿ ಕೋಟಿ ಹಣ ಕಳೆದುಕೊಳ್ಳಲಿರೋ ಕ್ರಿಕೆಟರ್ಸ್​

ಈ ಒಂದು ಮಸೂದೆಯಿಂದ ಬಿಸಿಸಿಐ ಅಷ್ಟೇ ಅಲ್ಲ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಬೂಮ್ರಾ ಸೇರಿದಂತೆ ಟೀಮ್ ಇಂಡಿಯಾದ ಯುವ ಆಟಗಾರರಿಗೆ ಆರ್ಥಿಕವಾಗಿ ಈ ಮಸೂದೆ ಪೆಟ್ಟು ಕೊಡುತ್ತಿದೆ ಎಂದು ಹೇಳಲಾಗುತ್ತಿದೆ.

author-image
Bhimappa
DHONI_KOHLI
Advertisment

ಭಾರತದ ಕ್ರೀಡಾ ಉದ್ಯಮದ ಮೇಲೆ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025, ಭಾರೀ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುತ್ತಿದೆ. ಈ ಒಂದು ಮಸೂದೆಯಿಂದ ಬಿಸಿಸಿಐ ಅಷ್ಟೇ ಅಲ್ಲ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಬೂಮ್ರಾ ಸೇರಿದಂತೆ ಟೀಮ್ ಇಂಡಿಯಾದ ಯುವ ಆಟಗಾರರಿಗೆ ಆರ್ಥಿಕವಾಗಿ ಈ ಮಸೂದೆ ಪೆಟ್ಟು ಕೊಡುತ್ತಿದೆ ಎಂದು ಹೇಳಲಾಗುತ್ತಿದೆ. 

ಕೊಹ್ಲಿ, ರೋಹಿತ್ ಕೇಂದ್ರೀಯ ಒಪ್ಪಂದಲ್ಲಿ ಎಷ್ಟು ಕೋಟಿ ಹಣ ಗಳಿಸ್ತಾರೆ.. 7 ಕೋಟಿ ರೂ ಪಡೆಯೋ ಸ್ಟಾರ್ ಪೇಸರ್?

ಇತ್ತೀಚೆಗೆ ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ರ ಅಂಗೀಕಾರ ಮಾಡಲಾಗಿದೆ. ಆನ್‌ಲೈನ್ ಬೆಟ್ಟಿಂಗ್ ಆಪ್‌ಗಳು ಮತ್ತು ರಿಯಲ್ ಮನಿ ಗೇಮ್‌ಗಳನ್ನು ನಿಷೇಧ ಮಾಡಲಾಗಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ಸ್ಪಾನ್ಸರ್​ಶಿಪ್​ನಿಂದ ಫಾಂಟಸಿ ಸ್ಪೋರ್ಟ್ಸ್​ ಫ್ಲಾಟ್​ಫಾರ್ಮ್​ ಡ್ರೀಮ್-11 ಹಿಂದೆ ಸರಿದಿದೆ ಎಂದು ಹೇಳಲಾಗಿದೆ. ಇದರಿಂದ ಬಿಸಿಸಿಐಗೆ ನಷ್ಟವೇ ಹೆಚ್ಚಾಗಲಿದೆ. 

ಒಂದು ವೇಳೆ ಏಷ್ಯಾಕಪ್ ಟೂರ್ನಿ ಸೆಪ್ಟೆಂಬರ್ 9ರ ಒಳಗಾಗಿ ಬಿಸಿಸಿಐ, ಹೊಸ ಸ್ಪಾನ್ಸರ್​ಶಿಪ್ ಪಡೆಯಲು ವಿಫಲರಾದರೆ, ಟೀಮ್ ಇಂಡಿಯಾ ಪ್ರಾಯೋಜಕರು ಇಲ್ಲದೇ ಏಷ್ಯಾಕಪ್ ಆಡಲಿದೆ. ಇದು ಕೇವಲ ಬಿಸಿಸಿಐಗೆ ಮಾತ್ರವಲ್ಲ, ಟೀಮ್ ಇಂಡಿಯಾದ ಆಟಗಾರರಿಗೆ ಆರ್ಥಿಕ ನಷ್ಟ ಉಂಟು ಮಾಡಲಿದೆ. ಈಗಾಗಲೇ ಕೆಲವು ಬೆಟ್ಟಿಂಗ್ ಆ್ಯಪ್​ಗಳು, ಆನ್‌ಲೈನ್ ಗೇಮಿಂಗ್ ಪ್ರಚಾರದ ಜೊತೆ ಆಟಗಾರರು ಮಾಡಿಕೊಂಡಿರುವ ಒಪ್ಪಂದಗಳು, ಅನುಮೋದನೆಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಜಡ್ಜ್​ ಮನೆಯಲ್ಲೇ 29 ಲಕ್ಷ ಮೌಲ್ಯದ ವಜ್ರ, ಚಿನ್ನಾಭರಣಗಳು ಸೇರಿ 50 ಸಾವಿರ ನಗದು ಕಳ್ಳತನ

MS_DHONI (1)

ಯಾವ ಯಾವ ಪ್ಲೇಯರ್ ಎಷ್ಟೆಷ್ಟು ಹಣ ಕಳೆದುಕೊಳ್ಳಲಿದ್ದಾರೆ ಎಂದು ನೋಡುವುದಾದರೆ, ವಿರಾಟ್ ಕೋಹ್ಲಿ ವಾರ್ಷಿಕವಾಗಿ 10 ರಿಂದ 12 ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳಲಿದ್ದಾರೆ. ರೋಹಿತ್ ಶರ್ಮಾ ಹಾಗೂ ಧೋನಿ ವರ್ಷಕ್ಕೆ 6 ರಿಂದ 7 ಕೋಟಿ ನಷ್ಟವಾಗುತ್ತಾರೆ. ಪಾಂಡ್ಯ ಸಹೋದರರಿಗೆ ನಷ್ಟ ಆಗುತ್ತದೆ. ಕೆಲ ಯುವ ಕ್ರಿಕೆಟರ್ಸ್​ ಎಂದರೆ ರಿಂಕು ಸಿಂಗ್, ಮೊಹಮ್ಮದ್ ಸಿರಾಜ್, ಶುಭ್​ಮನ್ ಗಿಲ್​ ಸೇರಿ ಇತರೆ ಪ್ಲೇಯರ್ಸ್​ ಒಂದೊಂದು ಕೋಟಿ ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

cricket players T20I team World Cup Asia Cup 2025
Advertisment