/newsfirstlive-kannada/media/media_files/2025/08/27/rohit_sharma_team-2025-08-27-13-12-09.jpg)
ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025 ಅನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದರಿಂದ ಆನ್‌ಲೈನ್ ಬೆಟ್ಟಿಂಗ್ಗಳೆಲ್ಲ ಬಾಗಿಲು ಮುಚ್ಚುವಂತೆ ಆಗಿದೆ. ಈ ಬೆಟ್ಟಿಂಗ್ನಿಂದ ಟೀಮ್ ಇಂಡಿಯಾ, ಬಿಸಿಸಿಐ ಹಾಗೂ ಆಟಗಾರರಿಗೂ ಭಾರೀ ಮಟ್ಟದಲ್ಲಿ ನಷ್ಟ ಉಂಟಾಗಲಿದೆ ಎನ್ನಲಾಗುತ್ತಿದೆ. ಒಟ್ಟಾರೆ ಎಲ್ಲ ಆಟಗಾರರಿಗೆ 150 ರಿಂದ 200 ಕೋಟಿ ರೂಪಾಯಿಗಳು ಲಾಸ್ ಆಗುತ್ತದೆ. ಜೊತೆಗೆ ಬಿಸಿಸಿಐಗೂ ಬಿಗ್ ಶಾಕ್ ಎದುರಾಗಿದೆ. ಏಕೆ ಗೊತ್ತಾ?.
ಆನ್‌ಲೈನ್ ಗೇಮಿಂಗ್ ಪ್ರಚಾರ ಹಾಗೂ ನಿಯಂತ್ರಣ ಮಸೂದೆಯಿಂದ ಟೀಮ್ ಇಂಡಿಯಾ ಆಟಗಾರರು ಹಲವು ಮುಖ್ಯ ಒಪ್ಪಂದಗಳನ್ನು, ಅನುಮೋದನೆಗಳನ್ನು ಕಳೆದುಕೊಳ್ಳಲಿದ್ದಾರೆ. ಆನ್‌ಲೈನ್ ಗೇಮಿಂಗ್ಗೆ ಆಟಗಾರರು ಪ್ರಚಾರಗಳನ್ನು ಮಾಡುತ್ತಿದ್ದರು. ಇನ್ಮೆಲೆ ಇದು ಇರುವುದಿಲ್ಲ. ಇದು ಕ್ರಿಕೆಟ್ ಬೋರ್ಡ್ಗೂ ದೊಡ್ಡ ಮಟ್ಟದಲ್ಲಿ ನಷ್ಟವನ್ನುಂಟು ಮಾಡುತ್ತಿದೆ. ಇದರಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಧೋನಿ, ಶುಭ್ಮನ್ ಗಿಲ್, ರಿಂಕು ಸಿಂಗ್ ಸೇರಿದಂತೆ ಯುವ ಆಟಗಾರರ ಒಪ್ಪಂದಗಳನ್ನು ಕಳೆದುಕೊಳ್ಳಲಿದ್ದಾರೆ.
ಡ್ರೀಮ್-11 ಜೊತೆಗೆ ರೋಹಿತ್ ಶರ್ಮಾ, ಜಸ್ಪ್ರಿತ್ ಬೂಮ್ರಾ, ಕೆ.ಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಅವರು ಒಪ್ಪಂದ ಮಾಡಿಕೊಂಡಿದ್ದರು. ಹಾಗೇ ಭಾರತದ ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್, ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ರಿಂಕು ಸಿಂಗ್ ಮತ್ತು ಮಾಜಿ ಆಟಗಾರ ಸೌರವ್ ಗಂಗೂಲಿ ಮೈ11 ಸರ್ಕಲ್ ಕ್ರಿಕೆಟ್ ಆ್ಯಪ್ನೊಂದಿಗೆ ಅನುಮೋದನೆ ಪಡೆದುಕೊಂಡಿದ್ದರು. ಇನ್ನುಳಿದಂತೆ ವಿಂನ್ಜ್ WinZO ಜೊತೆ ಧೊನಿ ಹಾಗೂ ಎಂಪಿಎಲ್ ಕೊಹ್ಲಿ ಪ್ರಚಾರ ಮಾಡಿದ್ದರು. ಇವುಗಳೆಲ್ಲ ದೊಡ್ಡ ಮೊತ್ತದಲ್ಲಿ ಒಪ್ಪಂದಗಳನ್ನು ಆಟಗಾರರು ಮಾಡಿಕೊಂಡಿದ್ದರು. ಈಗ ಇವೆಲ್ಲ ನಿಷೇಧ ಮಾಡಿರುವುದರಿಂದ ಸಾಮಾನ್ಯವಾಗಿ ಆಟಗಾರರು ಹಣ ಕಳೆದುಕೊಳ್ಳಲಿದ್ದಾರೆ.
ಇದನ್ನೂ ಓದಿ:ಆನ್‌ಲೈನ್ ಬೆಟ್ಟಿಂಗ್; ಕೊಹ್ಲಿ, ರೋಹಿತ್, ಧೋನಿ ಸೇರಿ ಕೋಟಿ ಕೋಟಿ ಹಣ ಕಳೆದುಕೊಳ್ಳಲಿರೋ ಕ್ರಿಕೆಟರ್ಸ್
ಡ್ರೀಮ್ 11 ಹೊರತುಪಡಿಸಿದರೆ, ಬಿಸಿಸಿಐ ಮತ್ತಷ್ಟು ಪ್ರಾಯೋಜಕತ್ವ ನಷ್ಟವನ್ನು ಅನುಭವಿಸಲಿದೆ. ಮೈ 11 ಸರ್ಕಲ್ ಐಪಿಎಲ್‌ನ ಸಹ ಪ್ರಾಯೋಜಕವಾಗಿದೆ. ಹೀಗಾಗಿ ಬಿಸಿಸಿಐ ವಾರ್ಷಿಕವಾಗಿ 125 ಕೋಟಿ ರೂಪಾಯಿಗಳನ್ನು ಪಡೆಯುತ್ತಿತ್ತು. ಈಗ ಇದು ಕೂಡ ನಿಂತು ಹೋಗಲಿದೆ. ಗೇಮಿಂಗ್ ಕಂಪನಿಗಳ ಜೊತೆ ಕೆಕೆಆರ್, ಲಕ್ನೋ ತಂಡ, ಸನ್‌ರೈಸರ್ಸ್ ಹೈದರಾಬಾದ್ ತಂಡ ಪ್ರಾಯೋಜಕತ್ವದ ಒಪ್ಪಂದ ಮಾಡಿಕೊಂಡಿದ್ದವು. ಇವುಗಳಿಗೆ ಲಾಸ್ ಆಗಲಿದೆ ಎನ್ನಲಾಗಿದೆ.
ಗೇಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಕೆಲವು ಆಟಗಾರರು ಇಂತಿಷ್ಟು ಎಂದು ಅನುಮೋದನೆ ಹೊಂದಿದ್ದಾರೆ. ಇದು ಸಾಮಾನ್ಯವಾಗಿ ಹಣ ನಷ್ಟ ಮಾಡುವುದು ತೋರಿಸುತ್ತದೆ. ಉದಾಹರಣಗೆ ಮೊಹಮ್ಮದ್ ಸಿರಾಜ್ರನ್ನು ತೆಗೆದುಕೊಂಡರೇ ಮೈ11 ಸರ್ಕಲ್ ಸೇರಿ ಮೂರು ಆನ್‌ಲೈನ್ ಗೇಮಿಂಗ್ ಜೊತೆ ಅನುಮೋದನೆ ತೆಗೆದುಕೊಂಡಿದ್ದಾರೆ. ಹೀಗಾಗಿ ಅವರಿಗೆ ಜಾಹೀರಾತು ಆದಾಯದಲ್ಲಿ 33% ಕುಸಿತವಾಗುತ್ತದೆ. ವಾಷಿಂಗ್ಟನ್ ಸುಂದರ್ಗೂ ಇದೇ ರೀತಿ ಆಗಿದೆ. ಒಟ್ಟಾಗಿ ಹೇಳಬೇಕು ಎಂದರೆ ಎಲ್ಲ ಆಟಗಾರರು ಸೇರಿ ಸುಮಾರು 150 ರಿಂದ 200 ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಾರೆ. ಜೊತೆಗೆ ಬಿಸಿಸಿಐ 125 ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ