/newsfirstlive-kannada/media/media_files/2025/08/27/abd_kohli_rcb-2025-08-27-13-59-55.jpg)
ಈಗ ನಾವು ಹೇಳೋ ಸುದ್ದಿ ಕೇಳಿ ಆರ್‌ಸಿಬಿ ಫ್ಯಾನ್ಸ್ ಫುಲ್ ಖುಷ್ ಆಗೋದು ಪಕ್ಕಾ. ನಿವೃತ್ತಿಯಿಂದ ಆರ್ಸಿಬಿಯಿಂದ ದೂರವಾಗಿದ್ದ ಎಬಿ ಡಿವಿಲಿಯರ್ಸ್, ಈಗ ಆರ್‌ಸಿಬಿ ತಂಡ ಸೇರುವ ಬಯಕೆ ಹೊರಹಾಕಿದ್ದಾರೆ. ಆದ್ರೆ, ಈ ಬಯಕೆ ಎಷ್ಟರ ಮಟ್ಟಿಗೆ ನಿಜವಾಗುತ್ತೆ..? ಈ ಕನಸು ನನಸಾಗುತ್ತಾ?.
AB ಡಿವಿಲಿಯರ್ಸ್..! ಈ ಹೆಸರು ಕೇಳಿದ್ರೆ ಸಾಕು, ಕ್ರಿಕೆಟ್ ಅಭಿಮಾನಿಗಳ ಮೈ ರೋಮಾಂಚನವಾಗುತ್ತೆ. ಅಸಾಮಾನ್ಯ ಬ್ಯಾಟಿಂಗ್, ಅತ್ಯದ್ಭುತ ಇನ್ನಿಂಗ್ಸ್ಗಳು ಕಣ್ ಮುಂದೆ ಬಂದು ಹೋಗುತ್ವೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡಿವಿಲಿಯರ್ಸ್ ಡೆಡ್ಲಿ ಬ್ಯಾಟಿಂಗ್ನಾ, ಕ್ರಿಕೆಟ್ ಫ್ಯಾನ್ಸ್ ಮರೆಯೋಕೆ ಸಾಧ್ಯನೆ ಇಲ್ಲ.
ಆರ್ಸಿಬಿಯ ರಿಯಲ್ ಟ್ರಬಲ್ ಶೂಟರ್ ಆಗಿದ್ದ ಎಬಿ ಡಿವಿಲಿಯರ್ಸ್, ಸಿಂಗಲ್ ಶೇರ್ನಂತೆ ಘರ್ಜಿಸುತ್ತಾ ಮ್ಯಾಚ್ ಗೆಲ್ಲಿಸುತ್ತಿದ್ದ ವೀರ. ಈ ಡೆಡ್ಲಿ ಬ್ಯಾಟರ್ ಕ್ರಿಕೆಟ್ ಮೈದಾನದಿಂದ ದೂರ ಸರಿದು ವರ್ಷಗಳೇ ಉರುಳಿವೆ. ಆದ್ರೀಗ ಇದೇ ಎಬಿ ಡಿವಿಲಿಯರ್ಸ್, ಅಭಿಮಾನಿಗಳಲ್ಲಿ ಹೊಸ ಭರವಸೆ ಹುಟ್ಟಿಹಾಕಿದ್ದಾರೆ. ಒಂದೇ ಒಂದು ಮಾತಿನಿಂದ ಆರ್ಸಿಬಿಗೆ ಮರಳುವ ಕನಸು ಬಿಚ್ಚಿಟ್ಟಿದ್ದಾರೆ.
ಖಂಡಿತ ಆರ್‌ಸಿಬಿಯಲ್ಲಿ ಇರ್ತೇನೆ..!
ಭವಿಷ್ಯದಲ್ಲಿ ನಾನು ಬೇರೆ ಯಾವುದಾದರೂ ಪಾತ್ರದಲ್ಲಿ ಐಪಿಎಲ್‌ಗೆ ಸೇರಬಹುದು. ಆದರೆ ಒಬ್ಬ ವೃತ್ತಿಪರ ಆಟಗಾರನಾಗಿ ಇಡೀ ಸೀಸನ್ ಆಡುವುದು ಸ್ವಲ್ಪ ಕಷ್ಟ. ಆ ದಿನಗಳು ಮುಗಿದು ಹೋಗಿವೆ ಎಂದು ಭಾವಿಸುತ್ತೇನೆ. ನನ್ನ ಹೃದಯ ಆರ್‌ಸಿಬಿ ಜೊತೆಗಿದೆ. ಯಾವಾಗಲೂ ಇರುತ್ತದೆ. ಆದ್ದರಿಂದ ಫ್ರಾಂಚೈಸಿ ನನಗೆ ಒಂದು ಪಾತ್ರ ಇದೆ ಎಂದು ಭಾವಿಸಿದರೆ, ಇದಕ್ಕೆ ಪೂರಕವಾಗಿ ಸಮಯ ಕೂಡಿ ಬಂದರೆ ನಾನು ಖಂಡಿತವಾಗಿಯೂ ಆರ್‌ಸಿಬಿಯಲ್ಲಿ ಇರುತ್ತೇನೆ.
ಎಬಿ ಡಿವಿಲಿಯರ್ಸ್, ಮಾಜಿ ಕ್ರಿಕೆಟರ್
ಆರ್‌ಸಿಬಿ ಸೇರುವ ಆಸೆ ವ್ಯಕ್ತಪಡಿಸಿದ ಮಿಸ್ಟರ್ 360..!
ಐಪಿಎಲ್ ಆರಂಭದಲ್ಲಿ ಐಪಿಎಲ್‌ಗೆ ಎಂಟ್ರಿ ನೀಡಿದ್ದ ಡಿವಿಲಿಯರ್ಸ್, ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಆಡಿದ್ದರು. ಆದ್ರೆ, ಈ ಬಳಿಕ ಆರ್ಸಿಬಿಗೆ ಎಂಟ್ರಿ ನೀಡಿದ ಎಬಿಡಿಗೆ ಬೆಂಗಳೂರೇ 2ನೇ ತವರಾಗಿತ್ತು. 2011ರಲ್ಲಿ ಆರ್‌ಸಿಬಿ ಪಾಲಿನ ಆಪತ್ಬಾಂಧವನಾಗಿ ಬಂದ ಎಬಿ ಡಿವಿಲಿಯರ್ಸ್, ಬರೋಬ್ಬರಿ 11 ವರ್ಷಗಳ ಕಾಲ ರೆಡ್ ಆರ್ಮಿಯ ರಿಯಲ್ ಮ್ಯಾಚ್ ವಿನ್ನರ್ & ಗೇಮ್ ಚೇಂಜರ್ ಆಗಿದ್ದರು. ಆದ್ರೆ, 2021ರಲ್ಲಿ ಎಲ್ಲಾ ಮಾದರಿಯಿಂದ ದೂರ ಸರಿದಿದ್ದ ಎಬಿಡಿ, ಈಗ ಮತ್ತೆ ಆರ್ಸಿಬಿಗೆ ಕಮ್ಬ್ಯಾಕ್ ಮಾಡುವ ಆಸೆ ಬಿಚ್ಚಿಟ್ಟಿದ್ದಾರೆ. ಆದ್ರೆ, ಆಟಗಾರನಾಗಿ ಅಲ್ಲ.
ಹೊಸ ರೋಲ್ನಲ್ಲಿ ಆರ್‌ಸಿಬಿ ಸೇರ್ತಾರಾ ಡಿವಿಲಿಯರ್ಸ್..?
11 ವರ್ಷ ಆರ್‌ಸಿಬಿ ಪರ ಆಡಿರುವ ಎಬಿ ಡಿವಿಲಿಯರ್ಸ್, ಮತ್ತೆ ಆರ್‌ಸಿಬಿ ಗ್ಯಾಂಗ್ ಸೇರುವ ಇಚ್ಚೆ ಹೊಂದಿದ್ದಾರೆ. ಆದ್ರೆ, ಬ್ಯಾಟ್ಸ್ಮನ್ ಆಗಿ ಅಲ್ಲ. ಹೊಸ ರೋಲ್ನಲ್ಲಿ ಅನ್ನೋದು ಸ್ವತಃ ಡಿವಿಲಿಯರ್ಸ್ ಹೇಳಿಕೊಂಡಿದ್ದಾರೆ. ಆರ್‌ಸಿಬಿ ಯಶಸ್ಸಿನ ಭಾಗವಾಗುವ ಹೆಬ್ಬಯಕೆ ಹೊಂದಿರುವ ಡಿವಿಲಿಯರ್ಸ್, ಬ್ಯಾಕ್ ಎಂಡ್ನಲ್ಲಿ ಕೆಲಸ ಮಾಡುವ ಹಿಂಟ್ ಸಹ ನೀಡಿದ್ದಾರೆ. ಹೀಗಾಗಿ ಯಾವ ರೋಲ್ನಲ್ಲಿ ಮಿಸ್ಟರ್ 360 ಕಾಣಿಸಿಕೊಳ್ತಾರೆ ಎಂಬ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಇದನ್ನೂ ಓದಿ: 2026 ಸೀಸನ್ಗೂ ಮೊದಲೇ IPLಗೆ ಗುಡ್ಬೈ ಹೇಳಿದ ಆಫ್ ಸ್ಪಿನ್ನರ್ ಆರ್.ಅಶ್ವಿನ್
ಎಬಿಡಿಗಾಗಿ ಹೊಸ ಹುದ್ದೆ ಸೃಷ್ಟಿಸುತ್ತಾ ಆರ್‌ಸಿಬಿ..?
ಈ ಪ್ರಶ್ನೆಗೆ ಕಾರಣ ಆರ್ಸಿಬಿಯ ಸಪೋರ್ಟಿಂಗ್ ಸ್ಟಾಫ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ, ಆರ್‌ಸಿಬಿ ಡೈರೆಕ್ಟರ್ ಆಗಿ ಮೊ ಬೊಬಟ್, ಹೆಡ್ ಕೋಚ್ ಆಗಿ ಆ್ಯಂಡಿ ಫ್ಲವರ್ ಸಕ್ಸಸ್ ಕಂಡಿದ್ದಾರೆ. ಮೆಂಟರ್ & ಬ್ಯಾಟಿಂಗ್ ಕೋಚ್ ಆಗಿ ದಿನೇಶ್ ಕಾರ್ತಿಕ್ ಅದ್ಬುತ ಕಾರ್ಯ ನಿರ್ವಹಿಸಿದ್ದಾರೆ. ಇಂಥ ಟೈಮ್ನಲ್ಲಿ ಎಬಿ ಡಿವಿಲಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಬೇಕಾದ್ರೆ, ಹೊಸ ರೋಲ್ನ ಸೃಷ್ಟಿಸಬೇಕು. ಇಲ್ಲ ಮೆಂಟರ್ & ಬ್ಯಾಟಿಂಗ್ ಕೋಚ್ ಆಗಿರುವ ದಿನೇಶ್, ಕೇವಲ ಒಂದು ರೋಲ್ಗೆ ಸೀಮಿತವಾಗಬೇಕು. ಹೀಗಾದಲ್ಲಿ ಮಾತ್ರ ಎಬಿ ಡಿವಿಲಿಯರ್ಸ್, ಆರ್‌ಸಿಬಿ ಎಂಟ್ರಿ ಸಾಧ್ಯ. ಆದ್ರೆ, ಈ ಎಲ್ಲವೂ ಆರ್‌ಸಿಬಿ ಮ್ಯಾನೇಜ್ಮೆಂಟ್ ನಿರ್ಧಾರ ಮೇಲೆಯೇ ನಿಂತಿದೆ.
ಆರ್‌ಸಿಬಿ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಎಬಿ ಡಿವಿಲಿಯರ್ಸ್, ರೆಡ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಕನಸು ಹೊಂದಿದ್ದಾರೆ ನಿಜ. ಆದ್ರೆ, ಆ ಕನಸು ಸಾಕಾರಗೊಳ್ಳಬೇಕಾದ್ರೆ, ಅದಕ್ಕೆ ಸಮಯ, ಸಂದರ್ಭ ಕೂಡಿ ಬರಬೇಕಿದೆ. ಇದಕ್ಕೆ ಮತ್ತಷ್ಟು ದಿನಗಳು ಕಾಯಬೇಕಿದೆ. ಆದ್ರೆ, ಎಬಿ ಡಿವಿಲಿಯರ್ಸ್ ಭವಿಷ್ಯದಲ್ಲಿ ಆರ್‌ಸಿಬಿ ಸೇರೋದಂತೂ ಸತ್ಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ