ಬಿಸಿಸಿಐಗೆ ಬಿಗ್ ಶಾಕ್ ಕೊಟ್ಟ ಕೇಂದ್ರ ಸರ್ಕಾರ.. ಕೋಟಿ ಕೋಟಿ ನಷ್ಟ..!

ಆನ್‌ಲೈನ್ ಗೇಮಿಂಗ್ ಬ್ಯಾನ್ ಆಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಗೇಮಿಂಗ್ ಬಿಲ್​​ನಿಂದ ವಿಶ್ವದ ಶ್ರೀಮಂತ ಕ್ರಿಕೆಟ್​​ ಸಂಸ್ಥೆಗೆ ಮಾತ್ರವಲ್ಲ, ಸ್ಟಾರ್ ಆಟಗಾರರ ಆದಾಯಕ್ಕೂ ಕತ್ತರಿ ಬೀಳಲಿದೆ. ನಿಷೇಧದಿಂದ ಕ್ರಿಕೆಟ್​​ ಹಾಗೂ ಇತರೆ ಆರ್ಥಿಕತೆಗೆ ಭಾರೀ ಹೊಡೆತ ಬೀಳಲಿದೆ.

author-image
Ganesh Kerekuli
team india (11)
Advertisment

ಆನ್‌ಲೈನ್ ಗೇಮಿಂಗ್ ಬ್ಯಾನ್ ಆಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಗೇಮಿಂಗ್ ಬಿಲ್​​ನಿಂದ ವಿಶ್ವದ ಶ್ರೀಮಂತ ಕ್ರಿಕೆಟ್​​ ಸಂಸ್ಥೆಗೆ ಮಾತ್ರವಲ್ಲ, ಸ್ಟಾರ್ ಆಟಗಾರರ ಆದಾಯಕ್ಕೂ ಕತ್ತರಿ ಬೀಳಲಿದೆ. ನಿಷೇಧದಿಂದ ಕ್ರಿಕೆಟ್​​ ಹಾಗೂ ಇತರೆ ಆರ್ಥಿಕತೆಗೆ ಭಾರೀ ಹೊಡೆತ ಬೀಳಲಿದೆ. 

ಆನ್‌ಲೈನ್ ಗೇಮಿಂಗ್ ಬಿಲ್​​ನಿಂದ ವಿಶ್ವ ಕ್ರಿಕೆಟ್ ಲೋಕದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಭಾರೀ ನಷ್ಟ ಅನುಭವಿಸಿದೆ. ಕೇಂದ್ರದ ನಿರ್ಧಾರದಿಂದ ಟೀಮ್ ಇಂಡಿಯಾದ ಜೆರ್ಸಿ ಪ್ರಾಯೋಜಕರಾಗಿರುವ ಡ್ರೀಮ್ 11 ಜೊತೆಗಿನ ಒಪ್ಪಂದಕ್ಕೆ ಬ್ರೇಕ್​ ಬಿದ್ದಿದೆ. ಪರಿಣಾಮ ಏಷ್ಯಾಕಪ್‌ನಲ್ಲಿ ಜೆರ್ಸಿ ಪ್ರಾಯೋಜಕರಿಲ್ಲದೆ ಆಡಬೇಕಾದ ಪರಿಸ್ಥಿತಿ ಎದುರಾಗಿದೆ. 

ಇದನ್ನೂ ಓದಿ: ಕೊಹ್ಲಿ ಮಾಡಿದ ಒಂದು ಯಡವಟ್ಟು.. ಈಕೆಯ ಅದೃಷ್ಟವೇ ಬದಲಾಗಿದೆ ನೋಡಿ..!

ಭಾರತೀಯ ಕ್ರಿಕೆಟ್​​ ಆರ್ಥಿಕತೆಗೆ ಹೊಡೆತ

ಅನ್​ಲೈನ್ ಗೇಮಿಂಗ್ ಬ್ಯಾನ್​ನಿಂದಾಗಿ ಜೆರ್ಸಿ ಪ್ರಾಯೋಜಕತ್ವದಿಂದ ಡ್ರೀಮ್ 11 ಹಿಂದೆ ಸರಿದಿದೆ. ಇದರಿಂದ ಬಿಸಿಸಿಐಗೆ ನೂರಾರು ಕೋಟಿ ನಷ್ಟ ಎದುರಾಗಿದೆ. ಐಪಿಎಲ್ ಪ್ರಾಯೋಜಕ್ವ ಪಡೆದಿರುವ ಮೈ ಸರ್ಕಲ್ ಜೊತೆಗಿನ ಒಪ್ಪಂದವೂ ಕಡಿತವಾಗಲಿದೆ. ಇದರಿಂದ ಐಪಿಎಲ್‌ ಫ್ರಾಂಚೈಸಿಗಳನ್ನ ಇಕ್ಕಟ್ಟಿಗೆ ಸಿಲುಕಿಸಲಿದೆ. 

ಕೊಹ್ಲಿ, ಶರ್ಮಾ, ಧೋನಿಗೂ ನಷ್ಟ

ಗೇಮಿಂಗ್ ಕಂಪನಿಗಳು, ಜಾಹೀರಾತುಗಳಿಗೆ ಭಾರೀ ಪ್ರಮಾಣದಲ್ಲಿ ಖರ್ಚು ಮಾಡುತ್ತವೆ.  ಬಹುತೇಕ ಕ್ರಿಕೆಟ್ ಆಟಗಾರರು ಆನ್​​​ಲೈನ್ ಗೇಮಿಂಗ್​ ಕಂಪನಿಗಳ ರಾಯಭಾರಿಗಳು ಆಗಿದ್ದಾರೆ. ಆನ್​​ಲೈನ್​ ಗೇಮಿಂಗ್ ಬಿಲ್​ನಿಂದಾಗಿ ಕಂಪನಿಗಳೊಂದಿಗಿನ ಪ್ರಾಯೋಜಕತ್ವ ಒಪ್ಪಂದ ಕಳೆದುಕೊಳ್ತಾರೆ. ಇದರಿಂದ ಕೊಹ್ಲಿ, ಧೋನಿ, ಶರ್ಮಾಗೆ ಭಾರೀ ನಷ್ಟ ಎದುರಾಗಲಿದೆ. MPL ಜೊತೆ  ಒಪ್ಪಂದ ಮಾಡಿಕೊಂಡಿದ್ದ ವಿರಾಟ್​, ವಾರ್ಷಿಕ 10 ರಿಂದ 12 ಕೋಟಿ ಗಳಿಸ್ತಿದ್ದರು. ಅದೇ ರೀತಿ ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ, ಡ್ರೀಮ್ ಇಲೆವೆನ್​ ಹಾಗೂ ವಿನ್ಜೊ ಜೊತೆಗಿನ ಒಪ್ಪಂದದಿಂದಾಗಿ 6 ರಿಂದ 7 ಕೋಟಿ ಜೇಬಿಗಿಳಿಸುತ್ತಿದ್ದರು. ಈ ಆದಾಯಕ್ಕೆ ಕತ್ತರಿ ಬೀಳಲಿದೆ.

ಇದನ್ನೂ ಓದಿ: ರೋಹಿತ್ ಶರ್ಮಾರ ಹೊರದಬ್ಬಲು BCCI ಮಾಸ್ಟರ್ ಪ್ಲಾನ್..!

ಕೊಹ್ಲಿ, ರೋಹಿತ್​, ಧೋನಿಗೇ ಅಲ್ಲ. ಉಳಿದ ಕ್ರಿಕೆಟ್​ ಪಾಡು ಸಹ ಸೇಮ್ ಟು ಸೇಮ್​. ಬೂಮ್ರಾ, ಹಾರ್ದಿಕ್ ಪಾಂಡ್ಯ, KL ರಾಹುಲ್, ರಿಷಭ್ ಪಂತ್, ಗಿಲ್​​, ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್ ಸೇರಿದಂತೆ ಇನ್ನಿತರ ಕ್ರಿಕೆಟರ್​​ಗಳು ವಾರ್ಷಿಕ ಕೋಟಿ ಕೋಟಿ ಆದಾಯ ಗಳಿಸ್ತಿದ್ದರು. ಗೇಮಿಂಗ್ ಜಾಹೀರಾತು, ಪ್ರಚಾರದ ಮೂಲಕವೇ 150ರಿಂದ 200 ಕೋಟಿ ಆದಾಯ ಬರ್ತಿತ್ತು. ಆದ್ರೀಗ ಇದಕ್ಕೆ ಬ್ರೇಕ್​ ಬೀಳಲಿದೆ. ಇದು ಸಹಜವಾಗೇ ಆಟಗಾರರ ವೈಯಕ್ತಿಕ ಆದಾಯದ ಮೇಲೆ ಪರಿಣಾಮ ಬೀರುವಂತೆ ಮಾಡಿದೆ.

IPL ಫ್ರಾಂಚೈಸಿಗಳಿಗೂ ಸಂಕಷ್ಟ

ಮನಿ ಗೇಮಿಂಗ್‌ ನಿಷೇಧದಿಂದ ಬಿಸಿಸಿಐ ಹಾಗೂ ಆಟಗಾರರಿಗೆ ಅಲ್ಲ. ಐಪಿಎಲ್ ಫ್ರಾಂಚೈಸಿಗಳಿಗು ನಷ್ಟ ಎದುರಾಗಲಿದೆ. ಮೈ ಇಲೆವೆನ್ ಸರ್ಕಲ್‌ ಐಪಿಎಲ್‌ನ ಸಹ ಪ್ರಾಯೋಜಕತ್ವ ಹೊಂದಿದೆ. ಇದರಿಂದ ವಾರ್ಷಿಕ ಬಿಸಿಸಿಐಗೆ 125 ಕೋಟಿ ಹರಿದು ಬರ್ತಿತ್ತು. ಬಿಸಿಸಿಐ ಹೊರತಾಗಿ ಕೆಕೆಆರ್‌, ಲಖನೌ, ಪಂಜಾಬ್​​​ ಕಿಂಗ್ಸ್​, ಸನ್‌ ರೈಸರ್ಸ್‌ ಹೈದ್ರಾಬಾದ್ ಸೇರಿದಂತೆ ಇತರೆ ಫ್ರಾಂಚೈಸಿಗಳು, ಬ್ರ್ಯಾಂಡಿಂಗ್ ಪ್ರಮೋಷನ್ ನೀಡ್ತಿದ್ದವು. ಆ ಮೂಲಕ ವಾರ್ಷಿಕ 20 ಕೋಟಿ ಆದಾಯ ಪಡೆಯುತ್ತಿದ್ದವು. ಆದ್ರೀಗ ಇದಕ್ಕೆ ಬ್ರೇಕ್​ ಬೀಳಲಿದೆ. 

ಇದನ್ನೂ ಓದಿ: ಒಂದು ಬಾಲ್​ನಲ್ಲಿ 22 ರನ್​ ಚಚ್ಚಿದ RCB ಸ್ಟಾರ್​..! ಅದು ಹೆಂಗೆ..?

BCCI AND DREAM 11 SPONSOR END02

10 ಸಾವಿರ ಕೋಟಿ ನಷ್ಟ

ಡ್ರೀಮ್ ಇಲೆವೆನ್​​ನಂಥ ಆನ್​ಲೈನ್​ ಗೇಮಿಂಗ್ಸ್​ ಕಂಪನಿಗಳ ಪ್ರಾಯೋಜಕತ್ವ ಕೇವಲ ಬಿಸಿಸಿಐ ಹಾಗೂ ಐಪಿಎಲ್​ಗೆ ಸೀಮಿತವಾಗಿರಲಿಲ್ಲ. ರಾಜ್ಯ ಕ್ರಿಕೆಟ್ ಅಸೋಸಿಯೇಷನ್​​ಗಳು ನಡೆಸುವ ಟಿ20 ಲೀಗ್​​ಗಳು, ರಾಜ್ಯ ಮಟ್ಟದ ಟೂರ್ನಿಗಳ ಪ್ರಾಯೋಜಕತ್ವವೂ ಸಹ ಬಹುತೇಕ ಗೇಮಿಂಗ್​​ ಕಂಪನಿಗಳೇ ವಹಿಸಿಕೊಳ್ತಿದ್ದವು. ಕೇವಲ ಕ್ರಿಕೆಟ್ ಅಲ್ಲ. ಇತರೆ ಕ್ರೀಡಾ ಕೂಟಗಳ ಪಂದ್ಯಾವಳಿಗಳಿಗೂ ಆಯೋಜಕರಾಗಿ ಸಾವಿರಾರು ಕೋಟಿ ಖರ್ಚು ಮಾಡ್ತಿದ್ದವು. ಜಾಹೀರಾತಿಗಾಗಿ ಕೋಟಿ ಕೋಟಿ ಸುರಿಯುತ್ತಿದ್ದವು. ಆದ್ರೀಗ ಹೊಸ ಮಸೂದೆಯಿಂದಾಗಿ 8000ದಿಂದ 10000 ಕೋಟಿ ನಷ್ಟ ಅನುಭವಿಸಲಿದೆ. ಇದು ಕೇವಲ ಬಿಸಿಸಿಐ, ಆಟಗಾರರಿಗೆ ಮಾತ್ರವಲ್ಲ.  ಭಾರತೀಯ ಆರ್ಥಿಕತೆಗೂ ಪೆಟ್ಟು.

ಆನ್​​ಲೈನ್​ ಗೇಮಿಂಗ್​ನಿಂದ ಭಾರತಕ್ಕೆ ಭಾರೀ ಪ್ರಮಾಣದ ರೆವೆನ್ಯೂ ಹರಿದು ಬರ್ತಿತ್ತು. 20 ಸಾವಿರ ಕೋಟಿಗೂ ಅಧಿಕ ಟಾಕ್ಸ್​ ಜೊತೆಗೆ 2 ಲಕ್ಷಕ್ಕೂ ಅಧಿಕ ಕೆಲಸ ನೀಡಿತ್ತು. 25 ಸಾವಿರಕ್ಕೂ ಅಧಿಕ ವಿದೇಶಿ ಹಣದ ಹೂಡಿಕೆಯಾಗಿತ್ತು. ಇಂಟ್ರೆಸ್ಟಿಂಗ್ ಅಂದ್ರೆ ಭಾರತದ ಅರ್ಥಿಕತೆ ಬೆಳವಣಿಗೆಯಲ್ಲಿ ಶೇಕಡಾ 1.5ರಿಂದ 2ರಷ್ಟು ಕೊಡುಗೆ ನೀಡ್ತಿತ್ತು. ಕೇಂದ್ರ ಸರ್ಕಾರದ ಹೊಸ ನೀತಿ ಭಾರತದ ಜಿಡಿಪಿ ಮೇಲೆಯೂ ಪರಿಣಾಮ ಬೀರೋದ್ರಲ್ಲಿ ಡೌಟಿಲ್ಲ. 

ಇದನ್ನೂ ಓದಿ:ಮೂರು ತಿಂಗಳ ಬಳಿಕ ಬಿಗ್​ ಅಪ್​ಡೇಟ್ಸ್.. ಅಭಿಮಾನಿಗಳಿಗಾಗಿ RCB ಹೊಸ ಯೋಜನೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Online Gaming Bill 2025 BCCI ENDS DREAM 11 SPONSPORSHIP
Advertisment