/newsfirstlive-kannada/media/media_files/2025/08/27/romario-shepherd-2025-08-27-21-12-27.jpg)
ರೊಮಾರಿಯೊ ಶೆಫರ್ಡ್ (Romario Shepherd) ವೆಸ್ಟ್ ವಿಂಡೀಸ್ನ ದೈತ್ಯ ಆಲ್ರೌಂಡರ್. ಐಪಿಎಲ್ನಲ್ಲಿ ಆರ್ಸಿಬಿ ಸ್ಟಾರ್. ಈ ಬಾರಿಯ ಐಪಿಎಲ್ನಲ್ಲಿ 14 ಬಾಲ್ನಲ್ಲಿ ಅರ್ಧ ಶತಕ ಬಾರಿಸಿ ಎಲ್ಲರ ಗಮನ ಸೆಳೆದಿದ್ದರು. ಇದೀಗ ಒಂದೇ ಎಸೆತದಲ್ಲಿ 22 ರನ್ಗಳಿಸಿ ಕ್ರಿಕೆಟ್ ಲೋಕದ ಅಭಿಮಾನಿಗಳನ್ನ ತಮ್ಮತ್ತ ಸೆಳೆದುಕೊಂಡಿದ್ದಾರೆ.
ವೆಸ್ಟ್ ವಿಂಡೀಸ್ನಲ್ಲಿ ಸದ್ಯ ಕೆರಿಬಿಯನ್ ಪ್ರೀಮಿಯರ್ ಲೀಗ್ (Caribbean Premier League) ನಡೆಯುತ್ತಿದೆ. ಗಯಾನಾ ಅಮೆಜಾನ್ ವಾರಿಯರ್ಸ್ (Guyana Amazon Warriors) ತಂಡದಲ್ಲಿರುವ ಶೆಫರ್ಡ್, ಸೇಂಟ್ ಲೂಸಿಯಾ ಕಿಂಗ್ಸ್ ವಿರುದ್ಧ ಯಾರೂ ಊಹಿಸಿರದ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ: ಕೊಹ್ಲಿ, ಧೋನಿ ಸೇರಿ ಎಲ್ಲ ಪ್ಲೇಯರ್ಸ್ಗೆ 200 ಕೋಟಿ ರೂಪಾಯಿ ಲಾಸ್..
7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ಶೆಫರ್ಡ್, GAW ಪರ 34 ಎಸೆತಗಳಲ್ಲಿ 73 ರನ್ ಗಳಿಸಿದರು. 15ನೇ ಓವರ್‌ನ ಮೂರನೇ ಎಸೆತದಲ್ಲಿ ಮ್ಯಾಜಿಕ್ ನಡೆದು ಹೋಗಿದೆ. 15ನೇ ಓವರ್ ಅನ್ನು ಓಶೇನ್ ಥಾಮಸ್ ಎಸೆಯಲು ಬಂದಿದ್ದರು.
ಮೂರನೇ ಎಸೆತ ನೋ-ಬಾಲ್ ಆಯಿತು. ನಂತರ ವೈಡ್ ಎಸೆದರು. ಕೊನೆಗೆ ಎಸೆದ ಬಾಲ್ಗೆ ಶೆಫರ್ಡ್ ಸಿಕ್ಸರ್ ಬಾರಿಸಿದರು. ಆದರೆ ಅದು ನೋ ಬಾಲ್ ಆಗಿತ್ತು. ನೋ-ಬಾಲ್ ಆಗಿದ್ದರಿಂದ ಸಿಕ್ಕ ಫ್ರೀ-ಹಿಟ್ನಲ್ಲಿ ಸಿಕ್ಸರ್ ಬಾರಿಸಿದರು. ಕೊನೆಗೆ ಎಸೆತ ಕಾನೂನುಬದ್ಧ ಬಾಲ್ಗೆ ಸಿಕ್ಸರ್ ಬಾರಿಸಿದರು. ಅಂದರೆ ಸ್ಕೋರ್‌ಗಳ ಅನುಕ್ರಮ - 1nb, 1w, 7nb, 7nb, 6. ಅಂದರೆ ಕೇವಲ ಒಂದು ಸರಿಯಾದ ಎಸೆತದಲ್ಲಿ 22 ರನ್‌ಗಳು ಬಂದವು.
ಇದನ್ನೂ ಓದಿ: RCB ಅಭಿಮಾನಿಗಳಿಗೆ ಗುಡ್ನ್ಯೂಸ್; 4 ವರ್ಷದ ಬಳಿಕ ಕಮ್ಬ್ಯಾಕ್ ಮಾಡ್ತಾರಾ ABD?
Romario Shepherd Scores 20 Runs Off One Legal Ball In CPL. #CPL25pic.twitter.com/PRk0PA2oLc
— Nibraz Ramzan (@nibraz88cricket) August 27, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ