/newsfirstlive-kannada/media/media_files/2025/09/15/waqf-act-2025-09-15-11-55-45.jpg)
ವಕ್ಫ್ ಕಾಯ್ದೆಯನ್ನ ಪೂರ್ತಿಯಾಗಿ ರದ್ದು ಮಾಡಲು ಸಾಧ್ಯವಿಲ್ಲ. ಕೆಲವು ಅಂಶಗಳ ಪುನರ್ ಪರಿಶೀಲನೆಯ ಅಗತ್ಯ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೇಂದ್ರ ಸರ್ಕಾರದ ‘ವಕ್ಫ್ ಕಾಯ್ದೆ-2025’ (Waqf Amendment Act) ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಆಲಿಸಿರುವ ಸುಪ್ರೀಂ ಕೋರ್ಟ್ ಇವತ್ತು ಮಧ್ಯಂತರ ಆದೇಶ ನೀಡಿದೆ.
ಸಿಜೆಐ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ನೇತೃತ್ವದ ಪೀಠವು ‘ವಕ್ಫ್ ಕಾಯ್ದೆ-2025’ ಕುರಿತು ವಿಚಾರಣೆ ನಡೆಸ್ತಿದೆ. ಇವತ್ತಿನ ಸುಪ್ರೀಂ ಕೋರ್ಟ್ ಪೂರ್ಣ ಪ್ರಮಾಣದಲ್ಲಿ ತೀರ್ಪು ಪ್ರಕಟಿಸಿಲ್ಲ. ಮೂರು ಪ್ರಮುಖ ವಿಚಾರಗಳ ಸಿಂಧುತ್ವ ಬಗ್ಗೆ ಆದೇಶ ಪ್ರಕಟ ಮಾಡಿರುವ ಕೋರ್ಟ್, ವಕ್ಫ್ ಎಂದು ಘೋಷಿಸಿರುವ ಜಮೀನಿನ ಡಿನೋಟಿಫಿಕೇಷನ್ ಅಧಿಕಾರ ವಿವಾದವನ್ನ ಇತ್ಯರ್ಥ ಮಾಡಿದೆ.
ಇದನ್ನೂ ಓದಿ:ಹೆಣ್ಮಕ್ಕಳೇ ಲಿಫ್ಟ್ ಬಳಸುವಾಗ ಹುಷಾರ್, ದಾರುಣ ಅಂತ್ಯಕಂಡ ಮಹಿಳೆ.. ಏನಾಯ್ತು..?
ಜೊತೆಗೆ ಕೇಂದ್ರ ಸರ್ಕಾರ ತಂದಿರೋ ಕಾನೂನನ್ನ ಪೂರ್ತಿಯಾಗಿ ರದ್ದು ಮಾಡಲು ಸಾಧ್ಯವಿಲ್ಲ ಎಂದಿದೆ. ಆದರೆ ಕಾಯ್ದೆಯಲ್ಲಿರೋ ಕೆಲವು ವಿಚಾರಗಳ ಮೇಲೆ ಕಣವಾಣ ಹಾಕಬಹುದು ಎಂದಿರುವ ಸುಪ್ರೀಂ, ವಕ್ಫ್ಗೆ ಭೂಮಿ ನೀಡಲು 5 ವರ್ಷಗಳ ಕಾಲ ಮುಸ್ಲಿಂ ಆಗಿರಬೇಕೆಂಬ ಷರತ್ತನ್ನು ತಿರಸ್ಕರಿಸಿದೆ.
ಹಾಗೆಯೇ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರ ಸದಸ್ಯರ ಸಂಖ್ಯೆಯನ್ನು ಮಿತಿಗೊಳಿಸಿದೆ. ರಾಜ್ಯ ವಕ್ಫ್ ಮಂಡಳಿಗಳು ಮತ್ತು ಕೇಂದ್ರ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರ ಸಂಖ್ಯೆ ಮೂರಕ್ಕಿಂತ ಮೀರಬಾರದು ಎಂದಿದೆ. ವಕ್ಫ್ ಕಾಯ್ದೆಯ 374 ಅನುಚ್ಛೇದ ರದ್ದು ಮಾಡಿದೆ. ಕಾಯ್ದೆಯ ಕೆಲವು ವಿಭಾಗಗಳ ಬಗ್ಗೆ ಸಾಕಷ್ಟು ವಿವಾದಗಳಿವೆ. ನಾವು ಹಳೆಯ ಕಾಯ್ದೆಗಳನ್ನು ಸಹ ಪರಿಶೀಲಿಸಿದ್ದೇವೆ. ಸಂಪೂರ್ಣ ಕಾನೂನನ್ನು ತಡೆಯಲು ಯಾವುದೇ ಆಧಾರವಿಲ್ಲ. ಕಲೆಕ್ಟರ್ ವಕ್ಫ್ ಭೂ ವಿವಾದ ಇತ್ಯರ್ಥಪಡಿಸಲು ಸಾಧ್ಯವಿಲ್ಲ. ಅಂತಹ ವಿಷಯವು ನ್ಯಾಯಮಂಡಳಿಗೆ ಹೋಗಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಇದನ್ನೂ ಓದಿ:ಕೋಳಿ ಸಾರು ಮಾಡ್ಲಿಲ್ಲ ಅಂತಾ ಹಲ್ಲೆ; ಪತ್ನಿ ಕಳ್ಕೊಂಡು ಜೈಲು ಸೇರಿ ಪತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ