/newsfirstlive-kannada/media/media_files/2025/09/14/indian-women-lift-1-2025-09-14-11-41-49.jpg)
ತಮಿಳುನಾಡಿನ ತಿರುಚ್ಚಿಯ ಗಾಂಧಿ ನಗರದ ವಾಣಿಜ್ಯ ಮಾರುಕಟ್ಟೆಯ ಸರ್ವೀಸ್ ಲಿಫ್ಟ್​ನಲ್ಲಿ 53 ವರ್ಷದ ಸುಮತಿ ಎಂಬ ಮಹಿಳೆ ಕೂದಲು ಸಿಲುಕಿ ಜೀವ ಕಳೆದುಕೊಂಡಿದ್ದಾರೆ.
ಗಾಂಧಿ ನಗರದ ಖಾಸಗಿ ಹಾರ್ಡ್​ವೇರ್​ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯು ರಾತ್ರಿ 9.45 ರ ಸುಮಾರಿಗೆ ಮೂರನೇ ಮಹಡಿಗೆ ತೆರಳಲು ಲಿಫ್ಟ್ ಬಳಸುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಘಟನೆಯಿಂದಾಗಿ ಮಹಿಳೆಯ ತಲೆಗೆ ತೀವ್ರ ಗಾಯಗಳಾದ ಪರಿಣಾಮ ಮೃತಪಟ್ಟಿದ್ದಾರೆ. 
ಘಟನೆಯ ನಂತರ ಗಾಂಧಿ ನಗರ ಮಾರುಕಟ್ಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಹಾತ್ಮ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ  ಸೆಕ್ಷನ್ (BNS) 194ರ ಅಡಿಯಲ್ಲಿ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ಮದ್ವೆ ಹೆಸ್ರಲ್ಲಿ ಹಣ ಪಡೆದು ಹೆಣ್ಮಕ್ಕಳಿಗೆ ಮೋಸ ಆರೋಪ.. ಈಗ ಸೊಸೆಗೆ ಮಾವನ ಜೊತೆ ಮಲಗುವಂತೆ ಅತ್ತೆ ಬೆದರಿಕೆ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us