/newsfirstlive-kannada/media/media_files/2025/09/14/marriage-business-2025-09-14-10-32-18.jpg)
ಆರೋಪಿತ ದಂಪತಿ
ಬೆಂಗಳೂರು: ಕೆಲವರು ಹೀಗೂ ಮೋಸ ಮಾಡ್ತಾರೆ ಅಂದರೆ ನೀವು ನಂಬ್ತೀರಾ? ದಂಪತಿಯೊಂದು ಮದುವೆ ಬ್ಯುಸಿನೆಸ್ (Marriage business) ಹೆಸರಲ್ಲಿ ಸ್ವಂತ ಮಗನನ್ನೇ ಬಳಸಿಕೊಂಡು ಲಕ್ಷ ಲಕ್ಷ ಹಣ ಪಡೆದು ವಂಚಿಸಿದೆ. ಸುದ್ದುಗುಂಟೆಪಾಳ್ಯ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪ್ರಕರಣ ತುಂಬಾ ಇಂಟ್ರೆಸ್ಟಿಂಗ್ ಆಗಿದೆ.
ಏನಿದು ಕತೆ..?
ಹುಮೇರಾ ಬಾನು ಹಾಗೂ ಅಕ್ಬರ್ ಪಾಷಾ (Humera Banu and Akbar Pasha) ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಈ ಜೋಡಿ ಬಿಟಿಎಂ ಲೇಔಟ್ ನಿವಾಸಿ. ಹುಮೇರಾ ಬಾನುಗೆ ಅಕ್ಬರ್ ಪಾಷಾ ಎರಡನೇ ಪತಿ. ಮೊದಲ ಪತಿಗೆ ಡಿವೋರ್ಸ್ ನೀಡಿ, ಹುಮೇರಾ ಬಾನು, ಅಕ್ಬರ್ ಪಾಷಾನ ಮದುವೆ ಆಗಿದ್ದಾಳೆ. ಇನ್ನು, ಹುಮೇರಾ ಬಾನುಗೆ ಮೊದಲ ಪತಿಯಿಂದ ಜನಿಸಿದ್ದ ಮಗನಿದ್ದು, ಆತನ ಹೆಸರು ಯಾಸೀನ್ ಪಾಷಾ. ಸ್ವಂತ ಮಗ ಯಾಸೀನ್ ಪಾಷಾನ ಮುಂದಿಟ್ಟುಕೊಂಡು ಹುಮೇರಾ ಬಾನು ಮತ್ತು ಅಕ್ಬರ್ ಪಾಷಾ ವಂಚಿಸಿದ ಆರೋಪ ಪ್ರಕರಣ ಇದಾಗಿದೆ.
ಇದನ್ನೂ ಓದಿ:ದೇವರ ಕಾಯಿ ವಿಚಾರಕ್ಕೆ ಅತ್ತಿಗೆಯ ತಲೆ ಒಡೆದ ಬಾಮೈದ -ಅಸಲಿಗೆ ಆಗಿದ್ದೇನು?
ಹೇಗೆ ಮೋಸ ಮಾಡ್ತಾರಂತೆ..?
ತಾಯಿ ವಿರುದ್ಧವೇ ಗಂಭೀರ ಆರೋಪ ಮಾಡಿರುವ ಯಾಸೀನ್, ಪತ್ನಿ ಶಾಸೀಯಾ ಜೊತೆ ಸೇರಿಕೊಂಡು ಸುದ್ದುಗುಂಟೆಪಾಳ್ಯ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಮದುವೆ ಹೆಸರಲ್ಲಿ ಯಾಸೀನ್ಗೆ ಎಂಗೇಜ್ಮೆಂಟ್ ಮಾಡಿ ಹೆಣ್ಣಿನ ಮನೆಯವರ ಕಡೆಯಿಂದ ಹಣ ಪಡೆದು ಮೋಸ ಮಾಡ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಅಂತೆಯೇ, ಮುಂಬೈನಲ್ಲಿ ಒಬ್ಬಳು, ಬನಶಂಕರಿಯಲ್ಲಿ ಒಬ್ಬಳು ಯುವತಿ ಜೊತೆ ಯಾಸೀನ್ ಪಾಷಾಗೆ ನಿಶ್ಚಿತಾರ್ಥ ಮಾಡಿದ್ದರು. ಅವರುಗಳಿಂದ 3 ಲಕ್ಷದಿಂದ 5 ಲಕ್ಷದವರೆಗೆ ಹಣ ಪಡೆದು ವಂಚಿಸಿದ್ದಾರೆ. ಇದೀಗ ಮಲತಂದೆ (ಅಕ್ಬರ್ ಪಾಷಾ) ಜೊತೆಗೆ ಮಲಗುವಂತೆ ನನ್ನ ಪತ್ನಿಗೆ ಬೆದೆರಿಕೆ ಹಾಕಿದ್ದಾರೆ ಎಂದು ಪುತ್ರ ಆರೋಪಿಸಿದ್ದಾನೆ. ಆರೋಪಿಗಳಿಂದ ನಮಗೆ ಮಾನಸಿಕ ಕಿರುಕುಳ ಕೂಡ ಆಗ್ತಿದೆ ಎಂದು ಬೆಂಗಳೂರಿನ ಕಮಿಷನರ್ಗೆ ದೂರು ನೀಡಿದ್ದಾರೆ.
ಯಾಸೀನ್ ಹೇಳೋದು ಏನು..?
ನಾವಿಬ್ಬರು ಮದುವೆ ಆಗೋದು ಅತ್ತೆಗೆ ಇಷ್ಟ ಇರಲಿಲ್ಲ. ನನಗೂ ಅವರು ಮೋಸ ಮಾಡಲು ಪ್ರಯತ್ನಿಸಿದ್ದರು. ಮದುವೆ ಮುನ್ನ ಎಂಗೇಜ್ಮೆಂಟ್ ಮಾಡಿ, ನಮ್ಮಿಂದ ರಿಂಗ್ ಹಾಗೂ ಹಣ ಪಡೆದುಕೊಂಡಿದ್ದರು. ಕೊನೆಗೆ ನಾನು ಸರಿ ಇಲ್ಲ ಎಂದು ಮದುವೆ ಮುರಿಯಲು ಪ್ರಯತ್ನಿಸಿದರು. ಅದೇ ರೀತಿ ಅನೇಕ ಹೆಣ್ಮಕ್ಕಳಿಗೆ ಮೋಸ ಮಾಡಿದ್ದಾರೆ. ಆದರೆ ನಾನು ಬಿಡಲಿಲ್ಲ. ಎಂಗೇಜ್ಮೆಂಟ್ ಆದ್ಮೇಲೆ ನಾನು ಯಾಸೀನ್ನನ್ನು ಒಪ್ಪಿಸಿ ಮದುವೆಯಾದೆ. ಮದುವೆ ಆದ್ಮೇಲೆ ನಾವಿಬ್ಬರು ನಮ್ಮ ಅಮ್ಮನ ಮನೆಯಲ್ಲಿ ಇದ್ದೇವೆ. ಇದೀಗ ಯಾಸೀನ್ ಮೇಲೆ ಚಿನ್ನಾಭರಣ ಕದ್ದುಕೊಂಡು ಹೋಗಿರುವ ಸುಳ್ಳು ಕೇಸ್ ಹಾಕಿದ್ದಾರೆ. ಇದೀಗ ಹುಮೇರಾ ಬಾನು ತನ್ನ ಎರಡನೇ ಪತಿ ಜೊತೆ ಮಲಗುವಂತೆ ಧಮ್ಕಿ ಹಾಕಿದ್ದಾಳೆ. ಮಲಗದಿದ್ದರೆ ನನ್ನ ಅಮ್ಮ, ನನ್ನ ಮೇಲೆ ಮತ್ತು ನನ್ನ ಅಣ್ಣನ ಪತ್ನಿ ಮೇಲೆ ಹುಡುಗರನ್ನ ಬಿಟ್ಟು ಅ*ಚಾರ ಮಾಡಿಸೋದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಪಾಕ್ಗೆ ಸೂರ್ಯ ಎಚ್ಚರಿಕೆ.. ತ್ರಿವಳಿಗಳಿಗೆ ಕಾದಿದೆ ಮಾರಿಹಬ್ಬ..!