/newsfirstlive-kannada/media/media_files/2025/09/14/india-vs-pakisthan-2-2025-09-14-07-04-15.jpg)
ಎಲ್ಲಾ ಯುದ್ಧಗಳದ್ದು ಒಂದು ಲೆಕ್ಕ, ಇಂಡಿಯಾ-ಪಾಕಿಸ್ತಾನದ ಪಂದ್ಯದ್ದೇ ಒಂದು ಲೆಕ್ಕ. ಇಂಡಿಯಾ ವರ್ಸಸ್ ಪಾಕ್ ಪಂದ್ಯಕ್ಕೆ, ಕೌಂಟ್ಡೌನ್ ಶುರುವಾಗಿದೆ. ದುಬೈನಲ್ಲಿ ನಡೆಯಲಿರೋ ಈ ಹೈವೋಲ್ಟೇಜ್ ಪಂದ್ಯ ನೋಡೋಕೆ, ಇಡೀ ವಿಶ್ವವೇ ಕಾದು ಕುಳಿತಿದೆ. ಎರಡು ದೇಶಗಳ ಪ್ರತಿಷ್ಟೆಯ ಕದನ..
ಜನ ವಿರೋಧದ ನಡುವೆಯೂ ಪಾಕ್ ಎದುರಿನ ಹೋರಾಟಕ್ಕೆ ಸೂರ್ಯ ಪಡೆ ಸನ್ನದ್ಧವಾಗಿದೆ. ಗೆಲುವಿಗಾಗಿ ಪಣ ತೊಟ್ಟಿರುವ ಉಭಯ ತಂಡಗಳು, ತೆರೆ ಮರೆಯಲ್ಲೇ ಗೇಮ್ ಪ್ಲಾನ್ ಸ್ಟ್ರಾಟರ್ಜಿಗಳನ್ನು ರೂಪಿಸಿವೆ. ಗೆಲುವೊಂದೇ ಗುರಿಯಾಗಿಸಿಕೊಂಡು ಹೋರಾಡಲು ಸಜ್ಜಾಗಿರುವ ಆಟಗಾರರು, ಪಂದ್ಯ ಗೆಲ್ಲಿಸಿ ಸೂಪರ್ ಸ್ಟಾರ್ ಪಟ್ಟಕ್ಕೇರುವ ಕನಸಿನಲ್ಲಿದ್ದಾರೆ. ಗೆದ್ದವರ ಬ್ಯಾಟಲ್ನಲ್ಲಿ ಯಾರಿಗೆ ಯಾರ್ ಟಕ್ಕರ್ ನೀಡ್ತಾರೆ ಎಂಬ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಹುಟ್ಟುಹಾಕಿದೆ.
ಪಾಕ್ಗೆ ಸೂರ್ಯ ಎಚ್ಚರಿಕೆ ಸಂದೇಶ
ಯುಎಇ ಎದುರು ಗೆದ್ದಿರುವ ಟೀಮ್ ಇಂಡಿಯಾ, ಇವತ್ತು ಪಾಕ್ ಎದುರಿನ ಸಮರಕ್ಕಿಳಿಯುತ್ತಿದೆ. ಎಲ್ಲಾ ವಿಭಾಗದಲ್ಲೂ ಸಖತ್ ಸ್ಟ್ರಾಂಗ್ ಇರುವ ಸೂರ್ಯ ಪಡೆ, ಗೆಲ್ಲೋ ಹಾಟ್ ಫೇವರಿಟ್ ಆಗಿ ಕಣಕ್ಕಿಳಿಯುತ್ತಿದೆ. ನಯಾ ಪಾಕಿಸ್ತಾನಕ್ಕೆ ಸೋಲು ಬಹುತೇಕ ಫಿಕ್ಸಾಗಿದೆ. ಈಗಾಗಲೇ ಪಾಕ್ ಎದುರು ಫಿಯರ್ ಲೆಸ್ ಆಟವಾಡುವ ಸಂದೇಶ ನೀಡಿರುವ ಕ್ಯಾಪ್ಟನ್ ಸೂರ್ಯ, ರನ್ಭೂಮಿಯಲ್ಲಿ ಪಾಕ್ಗೆ ಟಕ್ಕರ್ ನೀಡುವುದು ಫಿಕ್ಸ್.
ಪವರ್ ಪ್ಲೇನಲ್ಲಿ ಪವರ್ ಸ್ಟ್ರೋಕ್ ಫಿಕ್ಸ್..!
ಯುಎಇ ಎದುರು ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್ ಸಾಲಿಡ್ ಓಪನಿಂಗ್ ನೀಡಿದ್ದಾರೆ. ಅಕ್ರಮಣಕಾರಿ ಬ್ಯಾಟಿಂಗ್ನಿಂದ ಗಮನ ಸೆಳೆದಿದ್ದಾರೆ. ಈ ಓಪನಿಂಗ್ ಜೋಡಿ ಪಾಕ್ ಎದುರೂ ಫಿಯರ್ ಲೆಸ್ ಆಟವಾಡಬೇಕಿದೆ. ಎದುರಾಳಿ ಬೌಲರ್ಗಳ ಮೇಲೆ ದಂಡೆತ್ತಿ ಹೋಗಬೇಕಿದೆ. ಪವರ್ ಪ್ಲೇನಲ್ಲೇ ಪವರ್ ಸ್ಟ್ರೋಕ್ ನೀಡಬೇಕಿದೆ. ಆ ಮೂಲಕ ಪವರ್ ಪ್ಯಾಕ್ಡ್ ಪಾಕ್ ಬೌಲಿಂಗ್ ಅಟ್ಯಾಕ್ನ ಚಿಂದಿ ಮಾಡಬೇಕಿದೆ.
ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್ ಹೊರತಾಗಿ ಆದ್ರೆ, ಉಳಿದ ಬ್ಯಾಟ್ಸ್ಮನ್ಸ್ಗೆ ಅಗ್ನಿಪರೀಕ್ಷೆ ಕಾದಿದೆ. ನಾಯಕ ಸೂರ್ಯಕುಮಾರ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ ಮಿಡಲ್ ಆರ್ಡರ್ನಲ್ಲಿ ಮ್ಯಾಜಿಕ್ ಮಾಡಬೇಕಿದೆ. ಸ್ಪೋಟಕ ಬ್ಯಾಟಿಂಗ್ ಮೂಲಕ ಪಾಕ್ ಎದುರು ತಿರುಗಿ ಬೀಳಬೇಕಿದೆ. ಬಿಗ್ ಟಾರ್ಗೆಟ್ ಸೆಟ್ ಮಾಡುವತ್ತ ಪಕ್ಕಾ ಗೇಮ್ ಪ್ಲಾನ್ ರೂಪಿಸಿ, ಅಟ್ಯಾಕ್ ಮಾಡುವ ಜವಾಬ್ದಾರಿ ಈ ಸೀನಿಯರ್ಸ್ ಮೇಲಿದೆ.
ಇದನ್ನೂ ಓದಿ:ಭಾರತ- ಪಾಕ್ ಮಧ್ಯೆ ನಡೆದ ಏಷ್ಯಾಕಪ್ನ ಟಾಪ್- 5 ಮ್ಯಾಚ್ಗಳು.. ಫುಲ್ ಥ್ರಿಲ್ಲಿಂಗ್..!
ಯುಎಇ ಎದುರು ಚಮತ್ಕಾರ ಮಾಡಿದ್ದ ಕುಲ್ದೀಪ್ ಯಾದವ್, ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ಪಾಕ್ ಎದುರಿನ ಹೈವೋಲ್ಟೇಜ್ ಮ್ಯಾಚ್ನಲ್ಲೂ ಮ್ಯಾಜಿಕ್ ಮಾಡೋಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಮಿಡಲ್ ಓವರ್ಗಳಲ್ಲಿ ಚೆಂಡನ್ನ ಬುಗುರಿಯಂತೆ ತಿರುಗಿಸಿದ್ರೆ, ಪಾಕ್ ಸ್ಟನ್ ಆಗೋದ್ರಲ್ಲಿ ಡೌಟೇ ಇಲ್ಲ.
ಯಾರು ಔಟ್..?
ಯುಎಇ ಎದುರು ಬೆಂಚ್ ಕಾದಿದ್ದ ಅರ್ಷ್ದೀಪ್ ಸಿಂಗ್, ಇವತ್ತು ಪಾಕ್ ಎದುರು ಪ್ರಯೋಗಕ್ಕಿಳಿಸುವುದು ಕನ್ಫರ್ಮ್. ಲೆಫ್ಟ್ ಆ್ಯಂಡ್ ರೈಟ್ ಹ್ಯಾಂಡ್ ಕಾಂಬಿನೇಷನ್ ಮೂಲಕ ಪಾಕ್ ಬ್ಯಾಟರ್ಗಳಿಗೆ ಕಾಡುವ ಲೆಕ್ಕಾಚಾರದಲ್ಲಿದೆ. ಅರ್ಷ್ದೀಪ್ ಎಂಟ್ರಿಯಿಂದ ಯಾರು ಬೆಂಚ್ ಕಾಯ್ತಾರಾ ಅನ್ನೋದೆ ಸದ್ಯದ ಪ್ರಶ್ನೆ. ಅಕಸ್ಮಾತ್ ಅರ್ಷದೀಪ್ ಎಂಟ್ರಿಯಾದಲ್ಲಿ ತಿಲಕ್ ವರ್ಮ ಅಥವಾ ದುಬೆಗೆ ರೆಸ್ಟ್ ನೀಡಬೇಕಾಗಿ ಬಂದರು ಅಚ್ಚರಿ ಇಲ್ಲ.
ತ್ರಿವಳಿಗಳಿಗೆ ಕಾದಿದೆ ಮಾರಿಹಬ್ಬ..!
ಟೀಮ್ ಇಂಡಿಯಾದಂತೆ ಪಾಕ್ ತಂಡದಲ್ಲೂ ಭಾರೀ ಬದಲಾವಣೆಯಾಗಿದೆ. ಬ್ಯಾಟಿಂಗ್ನಲ್ಲಿ ಕೆಲವರನ್ನಷ್ಟೇ ನಂಬಿಕೊಂಡಿರುವ ಪಾಕ್, ಬೌಲಿಂಗ್ ವಿಭಾಗವನ್ನೇ ಹೆಚ್ಚು ನಂಬಿಕೊಂಡಿದೆ. ಪ್ರಮುಖವಾಗಿ ಶಾಹೀನ್ ಆಫ್ರಿದಿ, ಹ್ಯಾರಿಸ್ ರೌಫ್, ಹಸನ್ ಆಲಿ ಮೇಲೆ ವಿಶ್ವಾಸ ಇಟ್ಟಿದೆ. ಇತ್ತಿಚಿನ ದಿನಗಳಲ್ಲಿ ಶಾಹೀನ್ ಆಫ್ರಿದಿ, ಹ್ಯಾರಿಸ್ ರೌಫ್ ವಿಕೆಟ್ ಪಡೆಯಲು ಪರದಾಡ್ತಿದ್ದಾರೆ. ಇದೆಲ್ಲಕ್ಕಿಂತ ಮಿಗಿಲಾಗಿ ಲೆಫ್ಟ್ & ರೈಟ್ ಬ್ಯಾಟಿಂಗ್ ಕಾಂಬಿನೇಷನ್ ಹೊಂದಿರುವ ಟೀಮ್ ಇಂಡಿಯಾ, ಪಾಕ್ ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸೋದು ಕನ್ಪರ್ಮ್.
ಇದನ್ನೂ ಓದಿ:IND vs PAK ಮ್ಯಾಚ್: ಮತ್ತೆ ನಾಲಿಗೆ ಹರಿಬಿಟ್ಟ ಅಫ್ರಿದಿ.. ಕೆರಳಿದ ಟೀಂ ಇಂಡಿಯಾ ಅಭಿಮಾನಿಗಳು..!
ಒಟ್ನಲ್ಲಿ ಟಿ20 ಚಾಂಪಿಯನ್ಸ್ಗೆ ಪಾಕ್ ಸವಾಲ್ ಎಸೆಯುತ್ತಿದ್ದು, ಈ ಬ್ಲಾಕ್ ಬಾಸ್ಟರ್ ಮ್ಯಾಚ್ನಲ್ಲಿ ಫೇವರಿಟ್ಸ್ ಆಗಿ ಕಣಕ್ಕಿಳಿಯುತ್ತಿರುವ ಟೀಮ್ ಇಂಡಿಯಾ, ಆನ್ಫೀಲ್ಡ್ನಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತೆ. ಜಸ್ಟ್ ವೇಯ್ಟ್ ಅಂಡ್ ಸೀ.
ಇದನ್ನೂ ಓದಿ:ಪ್ರತಿಷ್ಠೆಯ ಪಂದ್ಯ ಗೆಲ್ಲಲು ಟೀಮ್ ಇಂಡಿಯಾ ಪಣ.. ಹೈವೋಲ್ಟೇಜ್ ಪಂದ್ಯಕ್ಕೂ ಮೊದಲು ಫಿಟ್ನೆಸ್ ಡ್ರಿಲ್!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ