IND vs PAK ಮ್ಯಾಚ್: ಮತ್ತೆ ನಾಲಿಗೆ ಹರಿಬಿಟ್ಟ ಅಫ್ರಿದಿ.. ಕೆರಳಿದ ಟೀಂ ಇಂಡಿಯಾ ಅಭಿಮಾನಿಗಳು..!

ಇಂಡೋ-ಪಾಕ್​ ಹೈವೋಲ್ಟೆಜ್​ ಕದನಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಬದ್ಧವೈರಿಗಳ ನಡುವಿನ ಕದನದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇದ್ರ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟರ್​ ಶಾಹೀದ್​ ಅಫ್ರಿದಿ ನಾಲಿಗೆ ಹರಿಬಿಟ್ಟು ಟೀಮ್​ ಇಂಡಿಯಾ ಆಟಗಾರರು ಹಾಗೂ ಅಭಿಮಾನಿಗಳನ್ನ ಕೆರಳಿಸಿದ್ದಾರೆ.

author-image
Ganesh Kerekuli
shahid afridi on india
Advertisment

ಇಂಡೋ-ಪಾಕ್​ ಹೈವೋಲ್ಟೆಜ್​ ಕದನಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಬದ್ಧವೈರಿಗಳ ನಡುವಿನ ಕದನದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇದ್ರ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟರ್​ ಶಾಹೀದ್​ ಅಫ್ರಿದಿ  ನಾಲಿಗೆ ಹರಿಬಿಟ್ಟು ಟೀಮ್​ ಇಂಡಿಯಾ ಆಟಗಾರರು ಹಾಗೂ ಅಭಿಮಾನಿಗಳನ್ನ ಕೆರಳಿಸಿದ್ದಾರೆ. ಅಷ್ಟಕ್ಕೂ ಅಫ್ರಿದಿ ಹೇಳಿದ್ದೇನು ಅನ್ನೋ ವಿವರ ಸ್ಟೋರಿಯಲ್ಲಿದೆ. 

ನಾಲಿಗೆ ಹರಿಬಿಟ್ಟ ಅಫ್ರಿದಿ

ಇಂಡೋ-ಪಾಕ್​ ಏಷ್ಯಾಕಪ್​ ಕದನದ ಡಿಬೆಟ್​ನಲ್ಲಿ ಪಾಕಿಸ್ತಾನದ ಮಾಜಿ ಕ್ಯಾಪ್ಟನ್​ ಶಾಹೀದ್​ ಅಫ್ರಿದಿ ಭಾಗವಹಿಸಿದ್ರು. ಚರ್ಚೆಯ ವೇಳೆ ಬಾಯ್ಕಾಟ್​ ಅಭಿಯಾನದ ಬಗ್ಗೆ ಮಾತನಾಡಿರೋ ಅಫ್ರಿದಿ, ಟೀಮ್​ ಇಂಡಿಯಾ ಮಾಜಿ ಕ್ರಿಕೆಟರ್ಸ್​​ಗಳ ರಾಷ್ಟ್ರೀಯತೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಟೀಕಿಸೋ ಭರದಲ್ಲಿ ಅಫ್ರಿದಿ ಆಡಿರುವ ಮಾತುಗಳು ಇದೀಗ ತೀವ್ರ ಚರ್ಚೆಗೆ ಕಾರಣವಾಗಿವೆ.  

ಇದನ್ನೂ ಓದಿ:ಗಿಲ್​ ಯುವರಾಜನ ಪಟ್ಟವೇರಿದ ಜರ್ನಿಯೇ ರೋಚಕ.. ಕಾರಣ ಮಾತ್ರ ಜ್ಯೂಸ್​ ಮಾರುವವನ ಮಗ!

India vs pakisthan

ಕೆಲವು ಭಾರತೀಯ ಆಟಗಾರರು ಈಗಲೂ ತಾವು ಭಾರತೀಯರು ಎಂದು ನಿರೂಪಿಸಿಕೊಳ್ಳುತ್ತಿದ್ದಾರೆ. ಹುಟ್ಟಿನಿಂದಲೂ ನಾವು ಭಾರತೀಯರು ಎಂದು ತೋರಿಸಿಕೊಳ್ಳುತ್ತಿದ್ದಾರೆ. ಆದ್ರೀಗ, ಏಷ್ಯಾಕಪ್​ನಲ್ಲಿ ಕಾಮೆಂಟರಿ ಮಾಡೋದಕ್ಕೆ ಬಂದಿದ್ದಾರೆ-ಶಾಹೀದ್​ ಅಫ್ರಿದಿ, ಮಾಜಿ ಕ್ರಿಕೆಟಿಗ

ಯುವಿ, ಇರ್ಫಾನ್, ಧವನ್​​ಗೆ ಟಾಂಗ್?

ಅಫ್ರಿದಿ ಆಡಿರೋ ಮಾತುಗಳ ಹಿಂದೆ ಒಂದು ಸಣ್ಣ ಕಥೆಯಿದೆ. ಜುಲೈನಲ್ಲಿ ವರ್ಲ್ಡ್​ ಚಾಂಪಿಯನ್​​ಶಿಪ್​ ಆಫ್ ಲೆಜೆಂಡ್ಸ್​ ಟೂರ್ನಿ ನಡೆದಿತ್ತಲ್ವಾ? ಆ ಟೂರ್ನಿಯಲ್ಲಿ ಪೆಹಲ್ಗಾಮ್​ ಟೆರರ್​ ಅಟ್ಯಾಕ್​ ಕಾರಣಕ್ಕೆ ಪಾಕಿಸ್ತಾನ ವಿರುದ್ಧದ ಪಂದ್ಯ ಆಡಲು ಟೀಮ್​ ಇಂಡಿಯಾ ಆಟಗಾರರು ಹಿಂದೇಟು ಹಾಕಿದ್ರು. ಈ ಪೈಕಿ ಮೊದಲಿಗನಾಗಿ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿದ್ದು ಶಿಖರ್​ ಧವನ್​​. ಆ ಬಳಿಕ ಯುವರಾಜ್​ ಸಿಂಗ್​, ಇರ್ಫಾನ್​ ಪಠಾಣ್​ ಕೂಡ ನಾವು ಪಂದ್ಯ ಆಡಲ್ಲ ಎಂದು ಹೇಳಿದ್ರು. ಅಫ್ರಿದಿ ಮಾತನಾಡಿರೋದು ಶಿಖರ್​ ಧವನ್​ ಬಗ್ಗೆಯೇ. 

ಇದನ್ನೂ ಓದಿ:ಭಾರತ- ಪಾಕ್​ ಮಧ್ಯೆ ನಡೆದ ಏಷ್ಯಾಕಪ್​ನ ಟಾಪ್​- 5 ಮ್ಯಾಚ್​ಗಳು.. ಫುಲ್ ಥ್ರಿಲ್ಲಿಂಗ್..!

India vs pakisthan (1)

ಟೂರ್ನಿಯ ಲೀಗ್​ ಹಂತದ ಪಂದ್ಯ ಮಾತ್ರವಲ್ಲ. ಸೆಮಿಫೈನಲ್​ ಪಂದ್ಯವನ್ನೂ ಟೀಮ್​ ಇಂಡಿಯಾ ಆಟಗಾರರು ಬಾಯ್ಕಾಟ್ ಮಾಡಿದ್ರು. ಪರಿಣಾಮ ಪಾಕಿಸ್ತಾನ ಪಂದ್ಯವನ್ನ ಆಡದೇ ಫೈನಲ್​ಗೆ ಎಂಟ್ರಿ ಕೊಟ್ಟಿತ್ತು. ಅಂದು ಮಾಜಿ ಕ್ರಿಕೆಟಿಗರು ಪಂದ್ಯವನ್ನ ಬಾಯ್ಕಾಟ್​ ಮಾಡಿದ್ದನ್ನೇ ಎಳೆಯಾಗಿ ಇಟ್ಟುಕೊಂಡು ಶಾಹೀದ್​ ಅಫ್ರಿದಿ ಈ ಮಾತನ್ನಾಡಿದ್ದಾರೆ. ಅಸಲಿಗೆ ಟೀಕಿಸೋಕೆ ಅಫ್ರಿದಿಗೆ ಇದೊಂದು ನೆಪ ಮಾತ್ರ. ಸಿಟ್ಟಿಗೆ ಕಾರಣ ಬೇರೆನೇ ಇದೆ. 

ಸೇನೆ ಟೀಕಿಸಿದ್ದ ಶಾಹೀದ್​ ಅಫ್ರಿದಿ

ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗರ ಮೇಲಿನ ಕೋಪಕ್ಕೆ ಇದೊಂದೆ ಕಾರಣವಲ್ಲ. ಈ ಹಿಂದೆ ಪೆಹಲ್ಗಾಮ್​ ಭಯೋತ್ಪಾದಕ ದಾಳಿ ನಡೆದ ಸಂದರ್ಭದಲ್ಲಿ ಭಾರತೀಯ ಸೇನೆ ಬಗ್ಗೆ ಅಫ್ರಿದಿ ಅಸಂಬದ್ಧವಾಗಿ ಮಾತನಾಡಿದ್ರು. ಅಸಮರ್ಥ ಹಾಗೂ ನಿಷ್ಪ್ರಯೋಜಕ ಎಂದು ಅಫ್ರಿದಿ ನಾಲಿಗೆ ಹರಿಬಿಟ್ಟಿದ್ರು. ಆಗ ಖಡಕ್ಕ ತಿರುಗೇಟು ಕೊಟ್ಟಿದ್ದ ಧವನ್​, ಕಾರ್ಗಿಲ್​ ವಾರ್​​ನಲ್ಲಿ ನಿಮ್ಮನ್ನು ಸೋಲಿಸಿದ್ದು ನಾವೇ.. ನಿಮ್ಮ ದೇಶ ಸುಧಾರಣೆ ಮಾಡೋದ್ರ ಕಡೆ ಗಮನಹರಿಸಿ ಎಂದು ಖಡಕ್​ ತಿರುಗೇಟು ನೀಡಿದ್ರು. 

ಧವನ್​ ಮಾತ್ರವಲ್ಲ, ಸುಖಾಸುಮ್ಮನೆ ಕಾಲು ಕೆರೆದುಕೊಂಡು ಬರೋ ಅಫ್ರಿದಿಗೆ ಯುವರಾಜ್​ ಸಿಂಗ್​, ಹರ್ಭಜನ್​ ಸಿಂಗ್​, ಇರ್ಫಾನ್​ ಪಠಾಣ್​​ ಈ ಹಿಂದೆ ಕಟುವಾದ ಮಾತುಗಳಲ್ಲಿ ವಾರ್ನಿಂಗ್​ ಕೊಟ್ಟಿದ್ದಿದೆ. ಅದೇನೆ ಇರಲಿ, ಸದ್ಯ ಶಾಹೀದ್​ ಅಫ್ರಿದಿ ಆಡಿರುವ ಮಾತುಗಳು ಟೀಮ್​ ಇಂಡಿಯಾ ಆಟಗಾರರು ಮತ್ತು ಅಭಿಮಾನಿಗಳನ್ನ ಕೆರಳಿಸಿರೋದಂತೂ ಸುಳ್ಳಲ್ಲ. ಅಫ್ರಿದಿ ಅನಗತ್ಯ ಟೀಕೆ ತಂಡದ ಸೋಲಿಗೆ ಕಾರಣವಾದ್ರು ಅಚ್ಚರಿಪಡಬೇಕಿಲ್ಲ. 

ಇದನ್ನೂ ಓದಿ:ಭಾರತ-ಪಾಕ್ ಮ್ಯಾಚ್​ಗೆ ಡಿಮ್ಯಾಂಡೇ ಇಲ್ಲ! ಅದಕ್ಕೆ 4 ಕಾರಣ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

shahid afridi india vs pakistan asia cup Ind vs Pak India A squad
Advertisment