/newsfirstlive-kannada/media/media_files/2025/11/21/tejas-fighter-jet-2025-11-21-16-29-26.jpg)
ದುಬೈ ಏರ್​​ ಶೋನಲ್ಲಿನಲ್ಲಿ ಭೀಕರ ದುರಂತ ಸಂಭವಿಸಿದ್ದು, ಭಾರತದ ತೇಜಸ್ ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ. ಪೈಲಟ್ ವಿಮಾನದಿಂದ ಹೊರಕ್ಕೆ ಹಾರಿದ್ದಾರೆಯೇ ಇಲ್ಲವೇ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.
ತೇಜಸ್ ಜೆಟ್ ಆಕಾಶದಲ್ಲಿ ಏರೋಬ್ಯಾಟಿಕ್ಸ್ ಪ್ರದರ್ಶಿಸಿ ನಂತರ ಇದ್ದಕ್ಕಿದ್ದಂತೆ ನೆಲಕ್ಕೆ ಅಪ್ಪಳಿಸಿದೆ. ಪತನ ಆಗುತ್ತಿದ್ದಂತೆಯೇ ಭಾರೀ ದೊಡ್ಡ ಪ್ರಮಾಣದಲ್ಲಿ ಸ್ಫೋಟವಾಗಿದೆ. ಬೆಂಕಿಯ ಜ್ವಾಲೆ ಹೊತ್ತಿ ಉರಿದಿದೆ. ಕೂಡಲೇ ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿವೆ.
ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2:10ಕ್ಕೆ ದುರ್ಘಟನೆ ಸಂಭವಿಸಿದೆ. ಸಾವಿರಾರು ಪ್ರೇಕ್ಷಕರು ಏರ್​ ಶೋ ವೀಕ್ಷಣೆಗೆ ಬಂದಿದ್ದರು. ಆಕಾಶದಲ್ಲಿ ಸ್ಕಿಲ್ ಪ್ರದರ್ಶಿಸುತ್ತಿದ್ದಾಗ ಪೈಲಟ್, ವಿಮಾನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ. ಅಪಘಾತದ ನಂತರ ದುಬೈ ಏರ್​ಶೋ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
🚨 BREAKING: Indian #Tejas fighter jet crashes during a display at the #DubaiAirShow.
— Sarcasm (@sarcastic_us) November 21, 2025
Updates on pilot status awaited💔
pic.twitter.com/NzHPv4IvYS
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us