/newsfirstlive-kannada/media/media_files/2025/11/08/telangana_women_ants_new-2025-11-08-08-32-53.jpg)
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಇರುವೆಗಳ ಭಯದಿಂದ ಬಳಲುತ್ತಿದ್ದ 25 ವರ್ಷದ ವಿವಾಹಿತ ಮಹಿಳೆಯೊಬ್ಬರು ಜೀವ ತೆಗೆದುಕೊಂಡಿದ್ದಾರೆ. ಬಾಲ್ಯದಿಂದಲೇ ಈ ವಿಚಿತ್ರ ಫೋಬಿಯಾದಿಂದ ಬಳಲುತ್ತಿದ್ದ ಅವರು, ಈ ಇರುವೆಗಳೊಂದಿಗೆ ಬದುಕಲು ಅಸಾಧ್ಯ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ತನ್ನ ಪತಿ ಬಳಿ ಕ್ಷಮೆ ಬೇರೆ ಕೋರಿದ್ದಾರೆ. ಇನ್ನು, ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಇರುವೆ ತರಹ ಹೊಸೆದಾಗ್ತೀನಿ, ಇರುವೆ ಅಂಗಿದ್ಯಾ ಏನ್​​ ಮಹಾ ನೀನು? ಸಾಲುಗಟ್ಟು ಸಾಗುವ ಇರುವೆಗೆ ಇರುವ ಶಿಸ್ತು ನಿಮಗಿಲ್ಲ ಬಿಡಿ. ಈ ಮಾತುಗಳು ಕೇಳಿದ್ದಿದೆ. ಆನೆ ಭಾರ ಆನೆಗೆ, ಇರುವೆ ಭಾರ ಇರುವೆಗೆ. ಥೂ.. ಇರಲಾರದೆ ಇರುವೆ ಬಿಟ್ಟುಕೊಂಡ ಹಾಗಾಯ್ತು. ಹೀಗೆ ಗಾದೆಗಳಲ್ಲೂ ಇರುವೆಗಳ ಹೆಜ್ಜೆ ಕಾಣಿಸಿದ್ದಿದೆ. ಆದ್ರೆ ಇರುವೆಗೆ ಯಾರಾದ್ರೂ ಸಾಯ್ತಾರಾ? ತೆಲಂಗಾಣದಲ್ಲಿ ಇರುವೆಗಾಗಿ ಅಚ್ಚರಿ ಘಟನೆಯೊಂದು ಬೆಳಕಿಗೆ ಬಂದಿದೆ.
/filters:format(webp)/newsfirstlive-kannada/media/media_files/2025/11/08/telangana_women_ants_1-2025-11-08-08-34-17.jpg)
ಮಹಿಳೆಯ ವಿಚಿತ್ರ ಫೋಬಿಯಾ ಕಂಡು ಪೊಲೀಸರೇ ದಂಗು
ಹಾವು, ಜಿರಲೆ, ಇಲಿ, ಚೇಳುಗಳನ್ನು ಕಂಡರೆ ಹೆಣ್ಣುಮಕ್ಕಳು ಹೆದರುವುದು ಸಹಜ. ಆದ್ರೆ ಸಾವಿನವರೆಗೆ ಹೆಜ್ಜೆ ಹಾಕ್ತಾರೆ ಅನ್ನೋದು ನಂಬಲಸಾಧ್ಯ ಬಿಡಿ. ಆದ್ರೆ, ಮಹಿಳೆಯೊಬ್ಬರು ಇರುವೆಗಳಿಗೆ ಹೆದರಿ ಪ್ರಾಣ ಬಿಟ್ಟಿರುವ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. 25 ವರ್ಷದ ಮಹಿಳೆಗೆ ಮೊದಲಿನಿಂದಲೂ ಇರುವೆ ಭಯ ಇತ್ತಂತೆ..
ಇರುವೆ ಭಯ.. ಮಹಿಳೆ ಇನ್ನಿಲ್ಲ​!
- ಸಂಗಾರೆಡ್ಡಿ ಜಿಲ್ಲೆಯ ಅಮಿನ್ಪುರದಲ್ಲಿ ವಾಸವಿದ್ದ ಶ್ರೀಕಾಂತ್, ಮನೀಷಾ
- ಶ್ರೀಕಾಂತ್​ ಪತ್ನಿ ಮನೀಷಾಗೆ ಇರುವೆಗಳು ಕಂಡರೆ ತೀವ್ರ ಭಯ ಪಡ್ತಿದ್ರು
- ಮೈರ್ಮೆಕೋಫೋಬಿಯಾದಿಂದ ಬಳಲುತ್ತಿದ್ದ ಆಕೆಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ
- ಕೌನ್ಸಿಲಿಂಗ್​​ ಸಹ ನೀಡಲಾಗಿತ್ತು.. ಆದ್ರೆ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ
- ಮನೀಷಾ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದು ಆತ್ಮ*ತ್ಯೆ​​
- ಸಂಜೆ ಕೆಲಸ ಮುಗಿಸಿಕೊಂಡು ಗಂಡ ಮನೆಗೆ ಬಂದಾಗ ಘಟನೆ ಬೆಳಕಿಗೆ
ಗ್ರಾಮಸ್ಥರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸಹ ಈ ಘಟನೆ ಕಂಡು ದಂಗಾಗಿದ್ದಾರೆ. ಈ ವೇಳೆ ಯುವತಿಯ ಮೃತದೇಹದ ಬಳಿ ಡೆತ್​​​ನೋಟ್ ಇನ್ನು ಅಚ್ಚರಿಗೆ ಕೆಡವಿದೆ.
ಇದನ್ನೂ ಓದಿ:9 ದಿನ ಅಹೋರಾತ್ರಿ ಅನ್ನದಾತರ ಹೋರಾಟ.. ಸಿಕ್ಕ ಫಲ, ಕಬ್ಬಿಗೆ ಹೆಚ್ಚುವರಿ 100 ರೂ ಸಹಾಯಧನ
/filters:format(webp)/newsfirstlive-kannada/media/media_files/2025/11/08/telangana_women_ants-2025-11-08-08-34-27.jpg)
ಇರುವೆ ಬದುಕಲು ಬಿಡ್ತಿಲ್ಲ
ಶ್ರೀ, ಐ ಆ್ಯಮ್ ಸಾರಿ. ಈ ಇರುವೆಗಳಿಂದ ನನಗೆ ಬದುಕಲು ಆಗುತ್ತಿಲ್ಲ. ಮಗಳನ್ನ ಚೆನ್ನಾಗಿ ನೋಡ್ಕೋ. ಅನ್ನವರಂ, ತಿರುಪತಿ ಹಾಗೂ ಯಲ್ಲಮ್ಮನಿಗೆ ಹೊತ್ತಿದ್ದ ಹರಕೆಗಳನ್ನು ನೆರವೇರಿಸಿ.
- ಮನೀಷಾ
ಈ ಡೆತ್​ನೋಟ್ ಓದಿದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಆದ್ರೆ, ಡೆತ್​ನೋಟ್ ಅನ್ವಯ ಮೃತ ಯುವತಿಗೆ ಇರುವೆಗಳ ಬಗ್ಗೆ ಇದ್ದ ಭಯವೇ ಆತ್ಮಹತ್ಯೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಇರುವೆ ಭಯ ಮಾತ್ರ ಮಹಿಳೆಯ ಜೀವ ಪಡೆದಿರೋದು ಅಚ್ಚರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us