/newsfirstlive-kannada/media/media_files/2025/11/08/sugarcane_farmers_protest-2025-11-08-07-19-19.jpg)
ಕಬ್ಬು ಬೆಳೆಗಾರರ ಹೋರಾಟಕ್ಕೆ ಕೊನೆಗೂ ರಾಜ್ಯ ಸರ್ಕಾರ ಮಣಿದಿದೆ. ಪ್ರತಿಭಟನೆ​​ ಕಬ್ಬಿಗೆ 3,300 ರೂಪಾಯಿ ಘೋಷಿಸಿದೆ. ಕಬ್ಬು ಬೆಳೆಗಾರಿಗೆ ಹೆಚ್ಚುವರಿಯಾಗಿ 100 ರೂ. ಸಹಾಯಧನ ಪ್ರಕಟಿಸಿದೆ. ಅಲ್ಲದೆ, ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಲು ಸಿಎಂ ನಿರ್ಧರಿಸಿದ್ದಾರೆ. ಈ ಮೂಲಕ ಗುರ್ಲಾಪುರ ಕ್ರಾಸ್​ನಲ್ಲಿ ನಡೆಯುತ್ತಿದ್ದ 9 ದಿನಗಳ ಅಹೋರಾತ್ರಿ ಹೋರಾಟ ಸುಖಾಂತ್ಯ ಕಂಡಿದೆ.
ರೈತರ ಮೈಯನ್ನೇ ಹಿಂಡಿದ್ದ ಕಬ್ಬು, ಕೊನೆಗೂ ಸಿಹಿನೇ ಕೊಟ್ಟಿದೆ. ರಾಜ್ಯದಲ್ಲಿ ಹೊತ್ತಿದ್ದ ಹೋರಾಟದ ಕಿಚ್ಚಿಗೆ ಬೆಚ್ಚಿದ ಸರ್ಕಾರ ಸ್ಪಂದಿಸಿದೆ. ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ, ಕೊನೆಗೂ ಕಬ್ಬಿನ ರೈತರಿಗೆ ಶುಭ ಸುದ್ದಿ ಕೊಟ್ಟಿದೆ. ಕಬ್ಬು ಬೆಳೆಗಾರರ 9 ದಿನಗಳ ಹೋರಾಟಕ್ಕೆ ಫಲ ಸಿಕ್ಕಿದ್ದು, 50/50 ಸೂತ್ರ ಮುಂದಿಟ್ಟ ಸರ್ಕಾರದ ಸಂಧಾನ ಸಫಲ ಕಂಡಿದೆ.
/filters:format(webp)/newsfirstlive-kannada/media/media_files/2025/11/06/hk_patil-2025-11-06-07-41-24.jpg)
ಪ್ರತಿಟನ್​​ ಕಬ್ಬಿಗೆ 3,300 ರೂ. ಘೋಷಿಸಿದ ರಾಜ್ಯ ಸರ್ಕಾರ
9 ದಿನ ಅಹೋರಾತ್ರಿ ಹೋರಾಟ ನಡೆಸಿದ್ದ ಅನ್ನದಾತರು ಕೊನೆಗೂ ಖುಷ್​​ ಆಗಿದ್ದಾರೆ.. 3500 ರೂ. ಬೆಂಬಲ ಬೆಲೆ ನೀಡಲು ಆಗ್ರಹಿಸಿದ್ದ ರೈತರಿಗೆ ಸರ್ಕಾರ, ಅಲ್ಪ ಸಿಹಿ ನೀಡಿದೆ.. ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತರ ಜೊತೆಗೆ ನಡೆದ ಸಿಎಂ ಸಭೆ ಬಳಿಕ ಮಹತ್ವದ ನಿರ್ಧಾರ ಪ್ರಕಟ ಆಗಿದೆ.. ಸಭೆಯಲ್ಲಿ ಕೆಲ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ..
ರೈತನಿಗೆ ಸಿಹಿ ಸಕ್ಕರೆ!
- ಕಬ್ಬಿನ11.25 ರಿಕವರಿಗೆ ರೂ.3250 ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕು. ಸರ್ಕಾರ ಹೆಚ್ಚುವರಿ ₹50 ಪಾವತಿಸಲಿದೆ. ಇದು ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ.
- ಪ್ರಧಾನಿಗೆ ಪತ್ರ ಬರೆದಿದ್ದು ಸಮಯ ನೀಡಿದ್ರೆ ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗಲು ಸಿದ್ಧರಿದ್ದೇವೆ ಅಂತ ಸಿಎಂ ಹೇಳಿದ್ದಾರೆ.
- ಕೇಂದ್ರ ಸರ್ಕಾರ ಕಬ್ಬಿಗೆ ನಿಗದಿಪಡಿಸಿರುವ ಎಫ್ಆರ್​ಪಿ ವೈಜ್ಞಾನಿಕವಾಗಿಲ್ಲ.
- ಸಕ್ಕರೆ ಕಾರ್ಖಾನೆಗಳು ಇಳುವರಿ ರಿಕವರಿ ಕಡಿಮೆ ತೋರಿಸುತ್ತಿವೆ. ಇದನ್ನು ತಪ್ಪಿಸಲು ಪ್ರತಿ ಕಾರ್ಖಾನೆ ಎದುರು ಸರ್ಕಾರದ ವತಿಯಿಂದ ಪ್ರಯೋಗಾಲಯ ತೆರೆಯಲಿದೆ.
- ಕೆಲವು ಕಾರ್ಖಾನೆಗಳು ಹಳೆಯ ಬಾಕಿಯನ್ನು ಪಾವತಿಗೆ ಕ್ರಮ ಕೈಗೊಳ್ಳಲಾಗುವುದು
ಇನ್ನು, ಸರ್ಕಾರ ತನ್ನ ದರ ನಿಗದಿ ನಿರ್ಧಾರ ಪ್ರಕಟಿಸ್ತಿದ್ದಂತೆ ಮೂಡಲಗಿಯ ಗುರ್ಲಾಪುರದಲ್ಲಿ ಸಂಭ್ರಮ ಮುಗಿಲು ಮುಟ್ಟಿತು. ಪಟಾಕಿ ಸಿಡಿಸಿ, ಸಿಹಿ ಹಂಚಿ ಕರ್ನಾಟಕ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿಯನ್ನ ಹೊತ್ತ ರೈತರು ಕುಣಿದು ಕುಪ್ಪಳಿಸಿದ್ರು. ಬಳಿಕ ಹೋರಾಟ ಕೈಬಿಟ್ಟಿದ್ದಾಗಿ ಪ್ರಕಟಿಸಿದ ರೈತ್ರು, ಇವತ್ತು ಸರ್ಕಾರದ ಅಧಿಕೃತ ಆದೇಶ ಪ್ರತಿ ಕೈ ತಲುಪಬೇಕು ಅಂತ ಬೇಡಿಕೆ ಇಟ್ರು.
ಇದನ್ನೂ ಓದಿ:‘ಕಾಂತಾರ’ ಬೆಡಗಿ ಹೆಸರಿನಲ್ಲಿ ಮಹಾ ಮೋಸ.. ವಾರ್ನಿಂಗ್ ಕೊಟ್ಟ ರುಕ್ಮಿಣಿ..!
/filters:format(webp)/newsfirstlive-kannada/media/media_files/2025/10/10/siddaramaiah-2025-10-10-22-56-19.jpg)
ಇದೇ ಸಂಭ್ರಮದ ವಾತಾವರಣ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲೂ ಕಾಣಿಸ್ತು. ಇತ್ತ, ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ವಾಗತಿಸಿದ್ರು.. ಇತ್ತ, ಎಥೆನಾಲ್​​ ಖರೀದಿ ವಿಚಾರದಲ್ಲಿ ಸಿಎಂ ಆರೋಪಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ..
ರಾಜ್ಯ ಸರ್ಕಾರ ಸರಣಿ ಸಭೆ ನಡೆಸಿ ರೈತನ ಶ್ರಮಕ್ಕೆ ಸ್ಪಂದಿಸಿದೆ.. ಆದ್ರೆ, ಕೇಂದ್ರದ ಜೊತೆ ರಾಜ್ಯ ಸರ್ಕಾರದ ಮತ್ತೊಂದು ಸಮರಕ್ಕೆ ಕಬ್ಬು ಕಿಡಿಹೊತ್ತಿಸಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us