/newsfirstlive-kannada/media/media_files/2025/11/07/rukmini-vasnat-2025-11-07-19-58-32.jpg)
‘ರುಕ್ಮಿಣಿ ವಸಂತ್​’... ಕಾಂತಾರದ ಬ್ಯೂಟಿ.. ‘ಸಪ್ತಸಾಗರದಾಚೆ ಎಲ್ಲೋ’ ನಂತ್ರ ಬಹುಬೇಡಿಕೆಯ ನಟಿ.. ಬ್ಯಾಕ್ ಟು ಬ್ಯಾಕ್ ಬಿಗ್ ಬಜೆಟ್ ಸಿನಿಮಾಗಳಲ್ಲಿ ಕಮಾಲ್​ ಮಾಡಿದ ಕ್ಯೂಟಿ.. ಸಿನಿ ಪ್ರೇಮಿಗಳ ಪ್ಯಾನ್ ಇಂಡಿಯಾ ಸ್ವೀಟಿ, ರುಕ್ಮಿಣಿ ವಸಂತ್ ಇದೀಗ ಸೈಬರ್​ ಕಳ್ಳರ ವಿರುದ್ಧ ಸಿಡಿದೆದ್ದು, ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ.
‘ಕಾಂತಾರ’ ಬೆಡಗಿ ಹೆಸರಿನಲ್ಲಿ ಮಹಾ ಮೋಸ.. ಸಿಡಿದ ನಟಿ!
ಕಾಂತಾರ ಖ್ಯಾತಿಯ ನಟಿ ರುಕ್ಮಿಣಿ ವಸಂತ್​​ಗೂ ಸೈಬರ್​ ಕಳ್ಳರು ಕಾಟ ಶುರುವಾಗಿದ್ಯಂತೆ. ಈ ಬಗ್ಗೆ ಸ್ವತಃ ನಟಿಯೇ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿ ಎಚ್ಚರಿಸಿದ್ದಾರೆ. ಅಲ್ದೆ ಸೈಬರ್​ ಕಳ್ಳರಿಗೆ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ. ಅಷ್ಟಕ್ಕೂ ನಟಿ ಹಾಕಿದ್ದ ಪೋಸ್ಟ್​ನಲ್ಲೇನಿದೆ ಅನ್ನೋ ವಿವರ ಇಲ್ಲಿದೆ.
ಇದನ್ನೂ ಓದಿ:ಕಾಂತಾರದಲ್ಲಿ ರುಕ್ಮಿಣಿ ತಂದೆ ವಿಲನ್.. ರಿಯಲ್ ಲೈಫ್​ನಲ್ಲಿ ಇಡೀ ದೇಶಕ್ಕೆ ಹೀರೋ!
/filters:format(webp)/newsfirstlive-kannada/media/media_files/2025/10/02/kanthara-rukmini-vasantha-2025-10-02-16-23-21.jpg)
ನಟಿಯಿಂದ ಎಚ್ಚರಿಕೆಯ ಗಂಟೆ!
9445893273 ಅನ್ನೋ ಮೊಬೈಲ್​ ಸಂಖ್ಯೆಯನ್ನ ಬಳಸುವ ವ್ಯಕ್ತಿಯೊಬ್ಬರು ನಾನು ಅಂತ ನಟಿಸಿ ಸುಳ್ಳು ನೆಪದಲ್ಲಿ ಹಲವರನ್ನ ಸಂಪರ್ಕಿಸ್ತಾ ಇರೋದು ನನ್ನ ಗಮನಕ್ಕೆ ಬಂದಿದೆ. ಈ ಸಂಖ್ಯೆ ನನಗೆ ಸೇರಿಲ್ಲ ಮತ್ತು ಇದರಿಂದ ಬರುವ ಯಾವುದೇ ಸಂದೇಶಗಳು ಅಥವಾ ಕರೆಗಳು ಸಂಪೂರ್ಣವಾಗಿ ಫೇಕ್​ .. ದಯವಿಟ್ಟು ಅಂತಹ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಅಥವಾ ಅವರೊಂದಿಗೆ ಮಾತಾನಾಡೋದಕ್ಕೆ ಹೋಗ್ಬೇಡಿ. ಈ ಕೃತ್ಯ ಸೈಬರ್ ಅಪರಾಧದ ವ್ಯಾಪ್ತಿಗೆ ಬರುತ್ತೆ.. ಹೀಗಾಗಿ ಇಂತಹ ವಂಚನೆ ಮತ್ತು ದಾರಿತಪ್ಪಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತೆ. ಈ ಬಗ್ಗೆ ಯಾವುದೇ ಸ್ಪಷ್ಟೀಕರಣ ಅಥವಾ ಪರಿಶೀಲನೆಗಾಗಿ, ನೀವು ನೇರವಾಗಿ ನನ್ನನ್ನು ಅಥವಾ ನನ್ನ ತಂಡವನ್ನು ಸಂಪರ್ಕಿಸಬಹುದು.
ಇದನ್ನೂ ಓದಿ: ಕಾವ್ಯ ಗೌರವಕ್ಕೆ ದಕ್ಕೆ ತಂದ್ರಾ ಧ್ರುವಂತ್? ಗಿಲ್ಲಿ ಟೀಕಿಸೋ ಭರದಲ್ಲಿ ತಪ್ಪು ಮಾಡಿದ್ರಾ?
/filters:format(webp)/newsfirstlive-kannada/media/media_files/2025/08/08/rukmini_vasanth_2-2025-08-08-10-25-00.jpg)
ಕೇಳಿಸಿಕೊಂಡ್ರಲ್ಲಾ, ನಟಿ ರುಕ್ಮಿಣಿ ವಸಂತ್ ಅವ್ರ ಮೊಬೈಲ್​ ನಂಬರ್ ಬಳಸಿಕೊಂಡು ಕೆಲ ಕಿಡಿಗೇಡಿಗಳು ಒಂದಷ್ಟು ಜನ್ರಿಗೆ ಮೆಸೇಜ್​ ಮಾಡ್ತಿದ್ದಾರಂತೆ.. ಹೀಗಾಗಿ ಎಚ್ಚೆತ್ತುಕೊಂಡಿರೋ ಈ ನಂಬರ್​ನಿಂದ ಮೆಸೇಜ್, ಕರೆ​ ಬಂದ್ರೆ ಅಲರ್ಟ್​ ಆಗಿರಿ.. ಯಾವುದೇ ರೆಸ್ಪಾಂಡ್ ಮಾಡಬೇಡಿ ಅಂತಾ ಮನವಿ ಮಾಡ್ಕೊಂಡಿದ್ದಾರೆ.. ಅಲ್ಲದೇ ಕಿಡಿಗೇಡಿಗಳ ವಿರುದ್ಧ ಸೈಬರ್ ಕಂಫ್ಲೇಟ್​​ ನೀಡೋ ಎಚ್ಚರಿಕೆಯೂ ನೀಡಿದ್ದಾರೆ.. ಒಟ್ಟಾರೆ, ಪದೇ ಪದೇ ಇಂತಹ ಕೃತ್ಯಗಳು ನಡೀತಾ ಬರ್ತಿದ್ದು, ಇಂತಹ ಸೈಬರ್ ಕಳ್ಳರಿಗೆ ತಕ್ಕ ಪಾಠ ಆಗ್ಲಬೇಕಿದೆ.
ಇದನ್ನೂ ಓದಿ: ಮುದ್ದಾದ ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಕತ್ರಿನಾ ಕೈಫ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us