/newsfirstlive-kannada/media/media_files/2025/11/07/kavya-shiva-and-dhruvant-2025-11-07-18-06-43.jpg)
ಗಿಲ್ಲಿ ಬೇರೆಯವರ ಹೆಸರು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ತಾರೆ ಎಂದು ಆರೋಪಿಸಿದ್ದ ದ್ರುವಂತ್, ಅವರೂ ಅದೇ ದಾರಿಯಲ್ಲಿ ಸಾಗಿರೋ ಹಾಗೆ ಕಾಣಿಸ್ತಿದೆ. ಗಿಲ್ಲಿಯನ್ನು ಕಳಪೆ ಅಂತ ಹೇಳೋಕೆ ಹೋಗಿ ಕಾವ್ಯರ ಗೌರವದ ಬಗ್ಗೆ ಮಾತನಾಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಪ್ರತಿವಾರ ಉತ್ತಮ ಆಟಗಾರ, ಕಳಪೆ ಆಟಗಾರನ ಆಯ್ಕೆ ನಡೆಯುತ್ತದೆ. ಅದೇ ರೀತಿ ಈ ವಾರವೂ ಕಳಪೆ ಆಟಗಾರನ ಆಯ್ಕೆ ಪ್ರಶ್ನೆ ಬಂದಾಗ ದ್ರುವಂತ್ ಗಿಲ್ಲಿಯನ್ನು ಕಳಪೆ ಎಂದು ಹೇಳಿದ್ದಾರೆ. ಇಷ್ಟೆ ಆಗಿದ್ದರೆ ಪರವಾಗಿಲ್ಲ ಪ್ರತಿವಾರ ಒಬ್ಬರಲ್ಲ ಒಬ್ಬರು ಕಳಪೆ ಎಂದನಿಸಿಕೊಳ್ಳಲೇಬೇಕು. ಆದ್ರೆ ದ್ರುವಂತ್ ಇದಕ್ಕೆ ಕೊಟ್ಟಿರುವ ಕಾರಣ ಇನ್ಯಾರದ್ದೋ ಗೌರವಕ್ಕೆ ಹಾನಿ ಮಾಡ್ತಿದ್ಯಾ ಅನ್ನೋ ಅನುಮಾನ ಮೂಡಿಸಿದೆ.
ಇದನ್ನೂ ಓದಿ:ಮನೆಯವರಿಗೆ ಟಾರ್ಗೆಟ್ ಆದ್ರ ಗಿಲ್ಲಿ? ಗಿಲ್ಲಿ ವಿರುದ್ಧ ಧ್ರುವಂತ್ , ರಿಷಾ ಫೈಟ್
/filters:format(webp)/newsfirstlive-kannada/media/media_files/2025/11/05/kavya-shaiva-2025-11-05-17-21-15.jpg)
ಕಳಪೆ ಯಾಕೆ ಎಂದು ಕಾರಣ ಕೊಡುವಾಗ ದ್ರುವಂತ್ ಗಿಲ್ಲಿ ಬಗ್ಗೆ ಹಾಗೂ ಅವರ ಕಾವ್ಯನ ಬಗ್ಗೆ ಬಿಟ್ರೆ ಬೇರೆ ಎಲ್ಲರ ಬಗ್ಗೆಯೂ ತಮಾಷೆ ಮಾಡಿಕೊಂಡಿರುತ್ತಾರೆ ಎಂದು ಹೇಳಿದ್ದಾರೆ. ಗಿಲ್ಲಿ ಬಗ್ಗೆ ಹೇಳುವಾಗ ಅವರ ಕಾವ್ಯ ಎಂದು ಹೇಳಿದ್ದಕ್ಕೆ ಕಾವ್ಯ ವಿರೋಧ ವ್ಯಕ್ತಪಡಿಸಿದ್ದಾರೆ ಅವರ ಕಾವ್ಯ ಎಂದು ಹೇಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಇದಕ್ಕೆ ಕ್ಯಾರೆ ಅನ್ನದ ದ್ರುವಂತ್ ಇದು ತನ್ನ ದೃಷ್ಟಿಕೋನ ಎಂದಿದ್ದಾರೆ. ಇದಕ್ಕೂ ಕಾವ್ಯ ವಿರೋಧ ವ್ಯಕ್ತಪಡಿಸಿದ್ದು, ನಿಮ್ಮ ಅಭಿಪ್ರಾಯ ಹೇಳುವುದಕ್ಕಾಗಿ ಇನ್ನೊಬ್ಬರ ಕ್ಯಾರೆಕ್ಟರ್ ಹಾಳು ಮಾಡಬಾರದು ಎಂದಿದ್ದಾರೆ.
ಗಿಲ್ಲಿಯೂ ದ್ರುವಂತ್‌ಗೆ ತಮ್ಮ ಬಗ್ಗೆ ಯಾವ ಅಭಿಪ್ರಾಯ ಇದೆಯೋ ಅದನ್ನು ಹೇಳಬೇಕೇ ಹೊರತು ಇನ್ನೊಬ್ಬರನ್ನು ಮಧ್ಯ ತರುವುದು ಸರಿಯಲ್ಲ ಎಂದಿದ್ದಾರೆ. ಆದರೂ ದ್ರುವಂತ್ ಮಾತ್ರ ಜಗಳಕ್ಕೆ ನಿಂತಿದ್ದಾರೆಯೇ ಹೊರತು ತಮ್ಮ ಮಾತಿನ ಮೇಲೆಯೂ ನಿಗಾ ಇರಬೇಕು ಎನ್ನುವುದನ್ನು ಅರ್ಥವೇ ಮಾಡಿಕೊಂಡಿಲ್ಲ, ಮುಂದೇನಾಗುತ್ತೆ? ನೋಡಿ ಬಿಗ್‌ಬಾಸ್‌ನಲ್ಲಿ.
ಇದನ್ನೂ ಓದಿ: ಇಂಡಿಯಾ A ತಂಡದಲ್ಲಿ ರೋಹಿತ್-ಕೊಹ್ಲಿ​ಗೆ ಸ್ಥಾನ ಇಲ್ಲ.. ಅರ್ಥವೇ ಆಗದ ಬಿಸಿಸಿಐ ನಡೆ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us