/newsfirstlive-kannada/media/media_files/2025/10/27/kohli-rohit-2025-10-27-18-25-48.jpg)
ಟೀಮ್ ಇಂಡಿಯಾ ಡ್ರೆಸಿಂಗ್ ವಾತಾವರಣ ಸರಿ ಇಲ್ಲ. ಆಟಗಾರರು ಮತ್ತು ಕೋಚ್ ನಡುವೆ ಉತ್ತಮ ಬಾಂಧವ್ಯ ಇಲ್ಲ. ನಾಯಕನಿಗೆ ತಂಡದಲ್ಲಿ ಕಿಂಚಿತ್ತು ಬೆಲೆ ಇಲ್ಲ. ಕೋಚ್ ಹೇಳಿದ್ದೇ ಮಾತು. ಕೋಚ್ ಮಾಡಿದ್ದೇ ರೂಲ್ಸ್. ಗೌತಮ್ ಗಂಭೀರ್ ಕೋಚ್ ಆದ್ಮೇಲೆ, ಟೀಮ್ ಇಂಡಿಯಾದಲ್ಲಿ ಎಲ್ಲವೂ ಬದಲಾಗಿದೆ. ಹಿರಿಯ ಆಟಗಾರರಿಗೆ ಗೌರವೇ ಇಲ್ಲದಂತಾಗಿದೆ. ಅದ್ರಲ್ಲೂ ರೋಹಿತ್-ಕೊಹ್ಲಿ ಬಗ್ಗೆ ನಿರಾಸಕ್ತಿ ಯಾಕೆ ಅನ್ನೋದು ಕ್ರಿಕೆಟ್ ಅಭಿಮಾನಿಗಳ ಪ್ರಶ್ನೆಯಾಗಿದೆ.
ರೋಹಿತ್-ಕೊಹ್ಲಿ​ಗೆ ಸ್ಥಾನ ಇಲ್ಲ
ನವೆಂಬರ್ 13ರಿಂದ ದಕ್ಷಿಣ ಆಫ್ರಿಕಾ ‘ಎ’ ತಂಡದ ವಿರುದ್ಧ ನಡೆಯಲಿರುವ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡ್ತಾರೆ ಅಂತ ಹೇಳಲಾಗ್ತಿತ್ತು. ಆದ್ರೀಗ ರೋ-ಕೊಯನ್ನ ಇಂಡಿಯಾ 'ಎ' ತಂಡದಿಂದ ಕೈಬಿಡಲಾಗಿದೆ. ಬಿಸಿಸಿಐ ಮತ್ತು ಸೆಲೆಕ್ಟರ್ಸ್​​​ ಬೇರೆನೇ ಪ್ಲಾನ್​ನಲ್ಲಿರುವ ಕಾರಣ, ರೋಹಿತ್-ಕೊಹ್ಲಿಗೆ ಇಂಡಿಯಾ 'ಎ' ತಂಡದಲ್ಲಿ ಸ್ಥಾನ ಇಲ್ಲ.
ಸೌತ್ ಆಫ್ರಿಕಾ ಏಕದಿನ ಸರಣಿ ಆಡ್ತಾರಾ ರೋ-ಕೊ..?
ರೋಹಿತ್-ಕೊಹ್ಲಿ ಡೊಮೆಸ್ಟಿಕ್ ಕ್ರಿಕೆಟ್ ಆಡಬೇಕು. ಇಂಡಿಯಾ 'ಎ' ತಂಡದ ಪರವೂ ಬ್ಯಾಟ್ ಬೀಸಬೇಕು ಅಂತ, ಈ ಹಿಂದೆ ಬಿಗ್​ಬಾಸ್​ಗಳು ಸೂಚನೆ ನೀಡಿದ್ರು. ಒಂದು ವೇಳೆ ರೋ-ಕೊ ಡೊಮೆಸ್ಟಿಕ್ ಕ್ರಿಕೆಟ್​​ನ ಕಡೆಗಣಿಸಿದ್ರೆ ನ್ಯಾಷನಲ್ ಟೀಮ್​ನಲ್ಲಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಅಂತ ಎಚ್ಚರಿ ಕೂಡ ನೀಡಿದ್ರು. ಆದ್ರೀಗ ರೋಹಿತ್-ಕೊಹ್ಲಿ ಇಂಡಿಯಾ 'ಎ' ಪರ ಆಡಲು ರೆಡಿಯಾಗಿದ್ರು, ಆಯ್ಕೆ ಮಾಡೋಕೆ ಸೆಲೆಕ್ಟರ್ಸ್ ಮುಂದಾಗ್ತಿಲ್ಲ. ಆಯ್ಕೆ ಸಮಿತಿಯ ಉದ್ದೇಶವೇನು ಅನ್ನೋದೇ ಅರ್ಥವಾಗ್ತಿಲ್ಲ. ಸೆಲೆಕ್ಟರ್ಸ್ ನಡೆ ನೋಡ್ತಿದ್ರೆ, ರೋ-ಕೊ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನ ಆಡೋದೇ ಅನುಮಾನಾನ ಅನ್ನೋ ಪ್ರಶ್ನೆ ಮೂಡುತ್ತದೆ.
ಇದನ್ನೂ ಓದಿ:ಸೂರ್ಯ ಪಡೆ T20 ಪಂದ್ಯ ಗೆಲ್ಲಲೇಬೇಕು.. ಬಲಿಷ್ಠ ಟೀಮ್ ಇಂಡಿಯಾದಲ್ಲಿ ಯಾರಿಗೆಲ್ಲಾ ಅವಕಾಶ..?
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ನೀಡಿದ್ರು. ಪರ್ತ್​​ನಲ್ಲಿ ಫೇಲ್ ಆಗಿದ್ದ ರೋಹಿತ್, ಅಡಿಲೇಡ್ ಮತ್ತು ಸಿಡ್ನಿ ಏಕದಿನ ಪಂದ್ಯಗಳಲ್ಲಿ ಮಿಂಚಿದ್ರು. ಇನ್ನು ವಿರಾಟ್ ಕೊಹ್ಲಿ ಮೊದಲೆರೆಡು ಪಂದ್ಯಗಳಲ್ಲಿ ಡಕೌಟ್ ಆಗಿದ್ರೂ, ಕೊನೆಯ ಏಕದಿನ ಪಂದ್ಯದಲ್ಲಿ ಅಜೇಯ 74 ರನ್​​ ಸಿಡಿಸಿ ಗಮನ ಸೆಳೆದಿದ್ರು. ಆದ್ರೀಗ ಪ್ರಶ್ನೆ ಎನ್ನಪ್ಪಾ ಅಂದ್ರೆ, ಆಸಿಸ್​​ನಲ್ಲಿ ರೋಹಿತ್-ಕೊಹ್ಲಿ ಪರ್ಫಾಮೆನ್ಸ್​ ಬಿಗ್​ಬಾಸ್​​ಗಳಿಗೆ ಸಮಾಧಾನ ತಂದಿಲ್ವಾ ಅನ್ನೋದು.
ರೋಹಿತ್, ಕೊಹ್ಲಿ ಬಗ್ಗೆ ಆಸಕ್ತಿ ಕಡಿಮೆ ಆಗ್ತಿದ್ಯಾ?
ಟೀಮ್ ಇಂಡಿಯಾದಲ್ಲಿ ಯಂಗ್​ಸ್ಟರ್ಸ್ ಶೈನ್ ಆಗ್ತಿದ್ದಾರೆ. ಸೀನಿಯರ್ ಪ್ಲೇಯರ್​ಗಳು ಸೈಡ್​ಲೈನ್ ಆಗ್ತಿದ್ದಾರೆ. ಯಂಗ್​ಸ್ಟರ್ಸ್​ ಅಬ್ಬರಕ್ಕೆ, ಹಿರಿಯ ಆಟಗಾರರು ಅಡ್ರೆಸ್​​ ಇಲ್ಲದಂತೆ ಕಳೆದು ಹೋಗ್ತಿದ್ದಾರೆ. ಆದ್ರೆ ರೋಹಿತ್-ಕೊಹ್ಲಿ ಮಾತ್ರ, ತಮ್ಮ ಪರ್ಫಾಮೆನ್ಸ್ ಮೂಲಕ ಉತ್ತರ ನೀಡಿದ್ದಾರೆ. ಯಂಗ್​ಸ್ಟರ್ಸ್​ಗಿಂತ ರೋ-ಕೋ ಬ್ಯಾಟಿಂಗ್​ನಲ್ಲಿ ಮಿಂಚ್ತಿದ್ರೂ ಟೀಮ್ ಮ್ಯಾನೇಜ್ಮೆಂಟ್​ಗೆ ಇವರ ಬಗ್ಗೆ, ಅದ್ಯಾಕೋ ದಿನೇ ದಿನೇ ಆಸಕ್ತಿ ಕಡಿಮೆಯಾಗ್ತಿದೆ. ಇದಕ್ಕೆ ಉತ್ತರ, ಟೀಮ್ ಮ್ಯಾನೇಜ್ಮೆಂಟೇ ನೀಡಬೇಕು.
ಇದನ್ನೂ ಓದಿ:KSCA ಚುನಾವಣೆಗೆ ಬ್ರಿಜೇಶ್ ಪಟೇಲ್ ಬಣ ರೆಡಿ..! ಚುನಾವಣಾ ಅಖಾಡಕ್ಕೆ ಪತ್ರಕರ್ತ KN ಶಾಂತಕುಮಾರ್ ಎಂಟ್ರಿ
ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್​ಕರ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೊತೆ ಮಾತುಕತೆ ನಡೆಸಿದ್ರು. ನಂತರ ಅಗರ್​ಕರ್ ಕಾರ್ಯಕ್ರಮವೊಂದರಲ್ಲಿ ರೋ-ಕೊ ಬಗ್ಗೆ ದೊಡ್ಡ ಬಾಂಬ್ ಸಿಡಿಸಿದ್ರು. ರೋಹಿತ್-ಕೊಹ್ಲಿ ಇಬ್ಬರೂ, 2027ರ ಏಕದಿನ ವಿಶ್ವಕಪ್​ಗೆ ನಾನ್-ಕಮಿಟ್ ಅಂತ ಹೇಳಿಕೆ ನೀಡಿದ್ರು. ಅಂದು ಅಗರ್​ಕರ್ ನೀಡಿದ್ದ ಹೇಳಿಕೆ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಆದ್ರೀಗ ಆ ವಿಚಾರನೇ, ರೋ-ಕೊಗೆ ಮುಳುವಾಗುತ್ತಾ ಅನ್ನೋದು ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗ್ತಿದೆ.
ಬಿಸಿಸಿಐ, ಸೆಲೆಕ್ಟರ್ಸ್, ಕೋಚ್ ಮತ್ತು ಟೀಮ್ ಮ್ಯಾನೇಜ್ಮೆಂಟ್, ಹಿರಿಯ ಆಟಗಾರರನ್ನ ಗೌರವದಿಂದ ನಡೆಸಿಕೊಳ್ಳಬೇಕು. ಅದ್ರಲ್ಲೂ ರೋಹಿತ್-ವಿರಾಟ್ ವಿಚಾರದಲ್ಲಿ ಎಚ್ಚರಿಕೆಯ ನಡೆ ಇಡಬೇಕು. ಒಂದು ವೇಳೆ ರೋಹಿತ್-ಕೊಹ್ಲಿಯನ್ನ 2027ರ ಏಕದಿನ ವಿಶ್ವಕಪ್ ತಮಡದಲ್ಲಿ ಆಡಿಸದೇ ಇದ್ರೆ ಮುಂದೆ ಭಾರೀ ಬೆಲೆ ಕಟ್ಟಬೇಕಾಗುತ್ತದೆ. ಬಿಗ್​ಬಾಸ್​ಗಳನ್ನ ಇದನ್ನ ಗಮನದಲ್ಲಿಟ್ಟುಕೊಳ್ಳಬೇಕು.
ಇದನ್ನೂ ಓದಿ:RCB ಯಾರನ್ನೆಲ್ಲಾ ಉಳಿಸಿಕೊಂಡಿದೆ? ಕನ್ನಡತಿಯನ್ನು ಕೈಬಿಡದ ಡೆಲ್ಲಿ ಕ್ಯಾಪಿಟಲ್ಸ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us