/newsfirstlive-kannada/media/media_files/2026/02/10/rabies-death-2026-02-10-11-10-28.jpg)
ಬೀದಿ ನಾಯಿಗಳ ಹಾವಳಿ ಮತ್ತು ರೇಬಿಸ್ ಲಸಿಕೆಯ ಪರಿಣಾಮದ ಬಗ್ಗೆ ಗಂಭೀರ ಪ್ರಶ್ನೆ ಹುಟ್ಟುಹಾಕುವಂತಹ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ನಾಯಿ ಕಚ್ಚಿದ ನಂತರ ಬರೋಬ್ಬರಿ ಮೂರು ಡೋಸ್ ಆಂಟಿ-ರೇಬಿಸ್ (Anti-Rabies) ಲಸಿಕೆ ಪಡೆದಿದ್ದರೂ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಘಟನೆಯ ವಿವರ
ಮಧ್ಯಪ್ರದೇಶದ ದತಿಯಾ ಜಿಲ್ಲೆಯಲ್ಲಿ ದುರಂತ ಸಂಭವಿಸಿದೆ. ಕೆಲ ದಿನಗಳ ಹಿಂದೆ ಬಾಲಕನಿಗೆ ಬೀದಿ ನಾಯಿ ಕಚ್ಚಿತ್ತು. ತಕ್ಷಣ ಎಚ್ಚೆತ್ತುಕೊಂಡ ಪೋಷಕರು ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ನಿಯಮದಂತೆ ಬಾಲಕನಿಗೆ ರೇಬಿಸ್ ವಿರೋಧಿ ಲಸಿಕೆಯ ಮೂರು ಡೋಸ್ ನೀಡಲಾಗಿತ್ತು.
ಇದನ್ನೂ ಓದಿ:ನಟೌಂಕಿ ನಾಟಕ ಕೈಬಿಟ್ಟು ತೆಪ್ಪಗಾದ ಪಾಕ್ ಸರ್ಕಾರ - ಭಾರತದ ಮೇಲೆ ಮ್ಯಾಚ್ ಆಡಲು ಒಪ್ಪಿಗೆ..! Highlights
ಮೂರು ಇಂಜೆಕ್ಷನ್‌ಗಳನ್ನು ತೆಗೆದುಕೊಂಡ ನಂತರವೂ ಬಾಲಕನ ಆರೋಗ್ಯ ಹದಗೆಟ್ಟಿತ್ತು. ಬಾಲಕನಲ್ಲಿ ರೇಬಿಸ್ ಲಕ್ಷಣಗಳು ಕಾಣಿಸಿಕೊಂಡು, ಸೋಮವಾರ (ಫೆಬ್ರವರಿ 9) ತಡರಾತ್ರಿ ಮೃತಪಟ್ಟಿದ್ದಾನೆ. ಲಸಿಕೆ ಪಡೆದರೂ ಮಗು ಬದುಕುಳಿಯದಿದ್ದದ್ದು ಪೋಷಕರನ್ನು ಮತ್ತು ವೈದ್ಯಕೀಯ ಲೋಕವನ್ನು ಬೆಚ್ಚಿಬೀಳಿಸಿದೆ.
ವೈದ್ಯರ ನಿರ್ಲಕ್ಷ್ಯದ ಆರೋಪ
ಬಾಲಕನ ಸಾವಿನಿಂದ ಆಕ್ರೋಶಗೊಂಡಿರುವ ಕುಟುಂಬಸ್ಥರು ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ‘ಲಸಿಕೆ ಹಾಕಿದ ಮೇಲೂ ಮಗು ಸಾಯಲು ಹೇಗೆ ಸಾಧ್ಯ? ವೈದ್ಯರು ಕಳಪೆ ಗುಣಮಟ್ಟದ ಅಥವಾ ಅವಧಿ ಮೀರಿದ (Expired) ಲಸಿಕೆ ನೀಡಿರಬಹುದು ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಘಟನೆಯ ಗಂಭೀರತೆಯನ್ನು ಅರಿತ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿದೆ. ನೀಡಲಾದ ಲಸಿಕೆಯ ಬ್ಯಾಚ್ ಮತ್ತು ಗುಣಮಟ್ಟವನ್ನು ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಘಟನೆಯು ಸರ್ಕಾರಿ ಆಸ್ಪತ್ರೆಗಳಲ್ಲಿನ ಔಷಧಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us