‘ಆರೋಗ್ಯ ಕ್ರಾಂತಿ’ಗೆ ಕೇಂದ್ರ ದಿಟ್ಟ ಹೆಜ್ಜೆ! ದೂರದೃಷ್ಟಿ, ಸ್ವಾಗತಾರ್ಹ ಬಜೆಟ್ ಎಂದು ಬಣ್ಣಿಸಿದ ಡಾ.ದೇವಿ ಶೆಟ್ಟಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026-27ನೇ ಸಾಲಿನ ಬಜೆಟ್ ಅನ್ನು ಖ್ಯಾತ ಹೃದ್ರೋಗ ತಜ್ಞ ಹಾಗೂ ನಾರಾಯಣ ಹೆಲ್ತ್ ಸಂಸ್ಥಾಪಕ ಅಧ್ಯಕ್ಷರಾದ ಡಾ.ದೇವಿ ಪ್ರಸಾದ್ ಶೆಟ್ಟಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

author-image
Ganesh Kerekuli
union budget devi prasad shetty
Advertisment

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026-27ನೇ ಸಾಲಿನ ಬಜೆಟ್ ಅನ್ನು ಖ್ಯಾತ ಹೃದ್ರೋಗ ತಜ್ಞ ಹಾಗೂ ನಾರಾಯಣ ಹೆಲ್ತ್ ಸಂಸ್ಥಾಪಕ ಅಧ್ಯಕ್ಷರಾದ ಡಾ.ದೇವಿ ಪ್ರಸಾದ್ ಶೆಟ್ಟಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಬಾರಿಯ ಬಜೆಟ್ ಆರೋಗ್ಯ ಕ್ಷೇತ್ರವನ್ನು ರಾಷ್ಟ್ರೀಯ ಆದ್ಯತೆಯಾಗಿ ಪರಿಗಣಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಜೆಟ್ ಕುರಿತು ಡಾ. ದೇವಿ ಶೆಟ್ಟಿ ವಿಶ್ಲೇಷಣೆಯ ಪ್ರಮುಖ ಅಂಶಗಳು ಇಲ್ಲಿವೆ:

ಈ ವರ್ಷ ವೈದ್ಯಕೀಯ ಕ್ಷೇತ್ರಕ್ಕೆ ಅತ್ಯಂತ ಚಿಂತನಶೀಲವಾಗಿ ಮತ್ತು ಸುದೀರ್ಘ ದೃಷ್ಟಿಕೋನದಿಂದ ಗಮನ ಹರಿಸಿ ಬಜೆಟ್ ಮಂಡಿಸಲಾಗಿದೆ. ಬಲಿಷ್ಠ ವೈದ್ಯಕೀಯ ವ್ಯವಸ್ಥೆಯು ಭಾರತದ ಆರ್ಥಿಕ ಮತ್ತು ಸಾಮಾಜಿಕ ದೃಢತೆಗೆ ಅಡಿಪಾಯ ಎಂಬುದನ್ನು ಸರ್ಕಾರ ಮನಗಂಡಿರುವುದು ಈ ಬಜೆಟ್‌ನಲ್ಲಿ ಎದ್ದು ಕಾಣುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಜಾಗತಿಕ ಮಟ್ಟದಲ್ಲಿ ಚಿನ್ನ, ಬೆಳ್ಳಿಯ ತೀವ್ರ ಮಾರಾಟ: ಇಂದು ಕೂಡ ಕುಸಿದ ಚಿನ್ನ, ಬೆಳ್ಳಿ ಬೆಲೆ!!

union budget and siddarmaiah (2)

10,000 ಕೋಟಿ ರೂಪಾಯಿ ವೆಚ್ಚದ ‘ಬಯೋ ಫಾರ್ಮಾ ಪವರ್’ ಯೋಜನೆಯನ್ನು ಅವರು ಸ್ವಾಗತಿಸಿದ್ದಾರೆ. ಇದು ಬಯೋಲಾಜಿಕ್ಸ್ ಮತ್ತು ಬಯೋಸಿಮಿಲರ್‌ಗಳಲ್ಲಿ ದೇಶೀಯವಾಗಿ ಬಲಿಷ್ಠ ವ್ಯವಸ್ಥೆ ನಿರ್ಮಿಸಲು ಸಹಕಾರಿಯಾಗಲಿದೆ. ಇದರಿಂದ ಕ್ಯಾನ್ಸರ್ ಮತ್ತು ಅಪರೂಪದ ಕಾಯಿಲೆಗಳಿಗೆ ಸುಧಾರಿತ ಚಿಕಿತ್ಸೆಗಳು ಜನಸಾಮಾನ್ಯರಿಗೆ ಸುಲಭವಾಗಿ ಲಭ್ಯವಾಗಲಿವೆ.

ವೈದ್ಯಕೀಯ ಹಬ್ ಮತ್ತು ಮೂಲಸೌಕರ್ಯ

ಖಾಸಗಿ ವಲಯದ ಸಹಭಾಗಿತ್ವದಲ್ಲಿ ಪ್ರಾದೇಶಿಕ ವೈದ್ಯಕೀಯ ಹಬ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆಯು ಜಾಗತಿಕ ಮಟ್ಟದಲ್ಲಿ ಭಾರತವನ್ನು ವೈದ್ಯಕೀಯ ಪ್ರವಾಸೋದ್ಯಮದ ತಾಣವಾಗಿ ರೂಪಿಸಲಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಮತ್ತು ಆಘಾತ ಚಿಕಿತ್ಸಾ (Emergency and Trauma Care) ಸಾಮರ್ಥ್ಯವನ್ನು 50% ರಷ್ಟು ಹೆಚ್ಚಿಸುವ ಕ್ರಮವು ಅತ್ಯಂತ ನಿರ್ಣಾಯಕವಾಗಿದೆ ಎಂದಿದ್ದಾರೆ.

ಉತ್ತರ ಭಾರತಕ್ಕಾಗಿ ಎರಡನೇ ನಿಮ್ಹಾನ್ಸ್ (NIMHANS 2.0) ಮತ್ತು ಪ್ರಾದೇಶಿಕ ಮಾನಸಿಕ ಆರೋಗ್ಯ ಸೇವಾ ಕೇಂದ್ರಗಳ ಸ್ಥಾಪನೆಯನ್ನು ಅವರು ಶ್ಲಾಘಿಸಿದ್ದಾರೆ. ಇದು ದೇಶದಲ್ಲಿ ಮಾನಸಿಕ ಆರೋಗ್ಯ ಸೇವೆಯಲ್ಲಿನ ದೊಡ್ಡ ಕೊರತೆಯನ್ನು ನೀಗಿಸಲಿದೆ ಮತ್ತು ಕಟ್ಟಕಡೆಯ ವ್ಯಕ್ತಿಗೂ ಚಿಕಿತ್ಸೆ ಸಿಗುವಂತೆ ಮಾಡಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು, ಅಲೈಡ್ ಹೆಲ್ತ್ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ವೈದ್ಯಕೀಯ ಸಿಬ್ಬಂದಿಗೆ ಉತ್ತಮ ತರಬೇತಿ ನೀಡುವ ಕ್ರಮವನ್ನು ಅವರು ಸ್ವಾಗತಿಸಿದ್ದಾರೆ.

ವೈದ್ಯಕೀಯ ಉದ್ದೇಶದ ಹಣ ರವಾನೆಗಳ ಮೇಲಿನ ಟಿಸಿಎಸ್ (TCS) ಅನ್ನು ತರ್ಕಬದ್ಧಗೊಳಿಸಿರುವುದು ವಿದೇಶದಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಆರ್ಥಿಕವಾಗಿ ದೊಡ್ಡ ನೆರವು ನೀಡಲಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ಬಜೆಟ್ ಭಾರತದ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಕಡೆಗೆ ಇಟ್ಟಿರುವ ಒಂದು ಸುಸಂಬದ್ಧ ಹೆಜ್ಜೆಯಾಗಿದೆ. ಇದು ಭವಿಷ್ಯದ ಆರೋಗ್ಯವಂತ ಭಾರತದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಡಾ. ದೇವಿ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಿ.ಜೆ.ರಾಯ್ ಸಾವಿನ ಎಕ್ಸ್ ಕ್ಲ್ಯೂಸಿವ್ ಮಾಹಿತಿ : ಡೆತ್ ನೋಟ್ ಬರೆದಿಟ್ಟಿರುವ ಸಿ.ಜೆ.ರಾಯ್‌!

ಸ್ವಾಗತಾರ್ಹ ಬಜೆಟ್

‘‘ಈ ವರ್ಷ ವೈದ್ಯಕೀಯ ಕ್ಷೇತ್ರಕ್ಕೆ ಚಿಂತನಶೀಲವಾಗಿ ಮತ್ತು ಸುದೀರ್ಘ ದೃಷ್ಟಿಕೋನದಿಂದ ಗಮನ ಹರಿಸಿ ಬಜೆಟ್ ಮಂಡಿಸಲಾಗಿದೆ. ಬಲಿಷ್ಠ ವೈದ್ಯಕೀಯ ವ್ಯವಸ್ಥೆಯು ಭಾರತದ ಆರ್ಥಿಕ ಮತ್ತು ಸಾಮಾಜಿಕ ದೃಢತೆಗೆ ಬಹಳ ಮುಖ್ಯ ಎಂಬುದನ್ನು ಸರ್ಕಾರದ ಗುರುತಿಸಿರುವುದನ್ನು ಈ ಬಜೆಟ್ ಪ್ರತಿಬಿಂಬಿಬಿಸಿದೆ. ಆರೋಗ್ಯ ರಕ್ಷಣೆಯನ್ನು ದೀರ್ಘಕಾಲೀನ ರಾಷ್ಟ್ರೀಯ ಆದ್ಯತೆಯಾಗಿ ಬಲಪಡಿಸುವತ್ತ ಗೌರವಾನ್ವಿತ ಹಣಕಾಸು ಸಚಿವರು ತೋರಿರುವ ಸಮತೋಲಿತ ಗಮನವನ್ನು ನಾವು ಶ್ಲಾಘಿಸುತ್ತೇವೆ. ₹10,000 ಕೋಟಿ ವೆಚ್ಚದ 'ಬಯೋ ಫಾರ್ಮಾ ಪವರ್' ಯೋಜನೆಯು ಬಯೋಲಾಜಿಕ್ಸ್ ಮತ್ತು ಬಯೋಸಿಮಿಲರ್‌ಗಳಲ್ಲಿ ದೇಶೀಯವಾದ ಬಲವಾದ ವ್ಯವಸ್ಥೆ ನಿರ್ಮಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದ್ದು, ಇದು ಕ್ಯಾನ್ಸರ್ ಮತ್ತು ಅಪರೂಪದ ಕಾಯಿಲೆಗಳಿಗೆ ಸುಧಾರಿತ ಚಿಕಿತ್ಸೆಗಳ ಲಭ್ಯತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ.

ಖಾಸಗಿ ವಲಯದ ಸಹಭಾಗಿತ್ವದಲ್ಲಿ ಪ್ರಾದೇಶಿಕ ವೈದ್ಯಕೀಯ ಹಬ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆಯು ಜಾಗತಿಕ ವೈದ್ಯಕೀಯ ಕ್ಷೇತ್ರದಲ್ಲಿ ಮೌಲ್ಯಯುತ ತಾಣವಾಗಿ ಭಾರತದ ಸ್ಥಾನವನ್ನು ಬಲಪಡಿಸಲಿದೆ. ಜೊತೆಗೆ ದೇಶದೊಳಗೆ ರೋಗ ತಡೆಗಟ್ಟುವಿಕೆ, ಪುನರ್ವಸತಿ ಮತ್ತು ನಿರಂತರ ಆರೈಕೆಯ ಮಾದರಿಗಳನ್ನು ಇದು ಉತ್ತಮಗೊಳಿಸುತ್ತದೆ. ತುರ್ತು ಮತ್ತು ಆಘಾತ ಚಿಕಿತ್ಸಾ ಕ್ಷೇತ್ರದ ಸಾಮರ್ಥ್ಯವನ್ನು 50% ರಷ್ಟು ಹೆಚ್ಚಿಸುವ ಮೂಲಕ ಜಿಲ್ಲಾ ಆಸ್ಪತ್ರೆಗಳನ್ನು ಬಲಪಡಿಸುವುದು, ಇದರೊಂದಿಗೆ ಎರಡನೇ ನಿಮ್ಹಾನ್ಸ್ ಮತ್ತು ಪ್ರಾದೇಶಿಕ ಮಾನಸಿಕ ಆರೋಗ್ಯ ಸೇವಾ ಕೇಂದ್ರಗಳ ಸ್ಥಾಪನೆಯು ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕಾದ ವೈದ್ಯಕೀಯ ಸೇವೆ ದೊರಕಿಸಲಿದೆ ಮತ್ತು ಮಾನಸಿಕ ಆರೋಗ್ಯ ಸೇವೆಯಲ್ಲಿನ ನಿರ್ಣಾಯಕ ಕೊರತೆಗಳನ್ನು ನೀಗಿಸುತ್ತದೆ.

ಅಲೈಡ್ ಹೆಲ್ತ್ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವ ಮತ್ತು ನಿರ್ಣಾಯಕ ವಿಭಾಗಗಳಲ್ಲಿ ತರಬೇತಿಯನ್ನು ಒದಗಿಸುವ ಕ್ರಮಗಳು ಕ್ಲಿನಿಕಲ್ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ಉತ್ತಮ ಗುಣಮಟ್ಟದ ಆರೈಕೆಯನ್ನು ನೀಡಲು ಬೆಂಬಲ ನೀಡುತ್ತವೆ. ವೈದ್ಯಕೀಯ ಉದ್ದೇಶದ ಹಣ ರವಾನೆಗಳ ಮೇಲಿನ ಟಿಸಿಎಸ್ ಅನ್ನು ತರ್ಕಬದ್ಧಗೊಳಿಸಿರುವುದು ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ಕ್ರಮಗಳು ಭಾರತದ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಕಡೆಗೆ ಒಂದು ಸುಸಂಬದ್ಧ ಹೆಜ್ಜೆಯಾಗಿದೆ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ."

ಡಾ.ದೇವಿ ಪ್ರಸಾದ್ ಶೆಟ್ಟಿ, ಸಂಸ್ಥಾಪಕರು ಮತ್ತು ಅಧ್ಯಕ್ಷರು, ನಾರಾಯಣ ಹೆಲ್ತ್


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

budget 2026 Devi Shetty
Advertisment