2026ರ ಮೊದಲ ರಕ್ತಚಂದ್ರ ಗ್ರಹಣ: ಭಾರತದಲ್ಲಿ ಗೋಚರಿಸಲಿದೆಯೇ ಈ ಅದ್ಭುತ?

: 2026ನೇ ಸಾಲಿನ ಮೊದಲ ಖಗೋಳ ವಿಸ್ಮಯಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಬರುವ ಮಾರ್ಚ್ ತಿಂಗಳಿನಲ್ಲಿ ಆಕಾಶದಲ್ಲಿ ಅದ್ಭುತವೊಂದು ನಡೆಯಲಿದ್ದು, ಚಂದ್ರನು ಕೆಂಪು ಬಣ್ಣಕ್ಕೆ ತಿರುಗಲಿದ್ದಾನೆ. ಇದನ್ನು 'ಬ್ಲಡ್ ಮೂನ್' (Blood Moon) ಅಥವಾ ಪೂರ್ಣ ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ.

author-image
Ganesh Kerekuli
boold moon
Advertisment

ಬೆಂಗಳೂರು: 2026ನೇ ಸಾಲಿನ ಮೊದಲ ಖಗೋಳ ವಿಸ್ಮಯಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಬರುವ ಮಾರ್ಚ್ ತಿಂಗಳಿನಲ್ಲಿ ಆಕಾಶದಲ್ಲಿ ಅದ್ಭುತವೊಂದು ನಡೆಯಲಿದ್ದು, ಚಂದ್ರನು ಕೆಂಪು ಬಣ್ಣಕ್ಕೆ ತಿರುಗಲಿದ್ದಾನೆ. ಇದನ್ನು 'ಬ್ಲಡ್ ಮೂನ್' (Blood Moon) ಅಥವಾ ಪೂರ್ಣ ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ.

ಯಾವಾಗ ಸಂಭವಿಸಲಿದೆ ಬ್ಲಡ್ ಮೂನ್?

ಖಗೋಳಶಾಸ್ತ್ರಜ್ಞರ ಪ್ರಕಾರ, 2026ರ ಮೊದಲ ಚಂದ್ರಗ್ರಹಣವು ಮಾರ್ಚ್ 3 ರಂದು (ಮಂಗಳವಾರ) ಸಂಭವಿಸಲಿದೆ. ಇದು ಪೂರ್ಣ ಚಂದ್ರಗ್ರಹಣವಾಗಿದ್ದು, ಈ ಸಮಯದಲ್ಲಿ ಚಂದ್ರನು ಭೂಮಿಯ ನೆರಳಿನಲ್ಲಿ ಸಂಪೂರ್ಣವಾಗಿ ಮರೆಯಾಗುತ್ತಾನೆ ಮತ್ತು ಕಡು ಕೆಂಪು ಬಣ್ಣದಲ್ಲಿ ಗೋಚರಿಸುತ್ತಾನೆ.

ಏನಿದು ಬ್ಲಡ್ ಮೂನ್?

ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಈ ವೇಳೆ ಸೂರ್ಯನ ಕಿರಣಗಳು ಭೂಮಿಯ ವಾತಾವರಣದ ಮೂಲಕ ಹಾದುಹೋಗಿ ಚಂದ್ರನ ಮೇಲೆ ಬಿದ್ದಾಗ, ಚಂದ್ರನು ಕೆಂಪು ಬಣ್ಣದಲ್ಲಿ ಹೊಳೆಯುತ್ತಾನೆ. ಈ ಪ್ರಕ್ರಿಯೆಯನ್ನು 'ರೇಲೀ ಸ್ಕ್ಯಾಟರಿಂಗ್' (Rayleigh scattering) ಎನ್ನಲಾಗುತ್ತದೆ. ಹೀಗೆ ಕೆಂಪಾಗಿ ಕಾಣುವ ಚಂದ್ರನನ್ನೇ 'ಬ್ಲಡ್ ಮೂನ್' ಎಂದು ಕರೆಯುತ್ತಾರೆ.

ಭಾರತದಲ್ಲಿ ಗೋಚರಿಸಲಿದೆಯೇ?

ವರದಿಗಳ ಪ್ರಕಾರ, ಈ ಗ್ರಹಣವು ಏಷ್ಯಾ, ಆಸ್ಟ್ರೇಲಿಯಾ, ಅಮೆರಿಕ ಮತ್ತು ಯುರೋಪ್‌ನ ಕೆಲವು ಭಾಗಗಳಲ್ಲಿ ಗೋಚರಿಸಲಿದೆ. ಭಾರತದ ಕೆಲವು ಭಾಗಗಳಲ್ಲಿ ಚಂದ್ರೋದಯದ ಸಮಯದಲ್ಲಿ ಈ ಗ್ರಹಣದ ಸಣ್ಣ ಝಲಕ್ ಕಾಣುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆದರೆ, ಪೂರ್ಣ ಪ್ರಮಾಣದ ಬ್ಲಡ್ ಮೂನ್ ವೀಕ್ಷಣೆ ಭಾರತದಲ್ಲಿ ಕಷ್ಟಸಾಧ್ಯ ಎನ್ನಲಾಗಿದೆ.

ವೈಜ್ಞಾನಿಕವಾಗಿ ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡುವುದು ಸುರಕ್ಷಿತವೇ ಆದರೂ, ಜ್ಯೋತಿಷ್ಯ ನಂಬಿಕೆಗಳ ಪ್ರಕಾರ ಗ್ರಹಣದ ಸಮಯದಲ್ಲಿ ಆಹಾರ ಸೇವನೆ ಮಾಡಬಾರದು ಮತ್ತು ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ರಾಜ್ಯದ ಜನತೆಗೆ ಮತ್ತೊಂದು ಶಾಕ್.. ಏಪ್ರಿಲ್ 1 ರಿಂದ ವಿದ್ಯುತ್ ದರ ಏರಿಕೆ ಸಾಧ್ಯತೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Blood Moon 2026
Advertisment